ರಿಯಲ್ ಸ್ಟಾರ್ ಉಪೇಂದ್ರ ಮತ್ತು ಬಿರಾದಾರ್ ನಡುವೆ ಒಪ್ಪಂದ ಒಂದು ಆಗಿತ್ತಂತೆ. ಅಂದು ಉಪೇಂದ್ರ ಬರಹಗಾರರಾಗಿದ್ದರು, ಬಿರಾದಾರ್ ನಾಟಕಗಳಲ್ಲಿ ಅಭಿನಯಿಸುತ್ತ ಸಿನಿಮಾ ಅವಕಾಶಕ್ಕೆ ಹುಡುಕುತ್ತಿದ್ದರು.

ಒಮ್ಮೆ ಆಕಸ್ಮಿಕವಾಗಿ ಭೇಟಿಯಾದ ಈ ಇಬ್ಬರು ಮಹಾನ್ ಕಲಾವಿರ ನಡುವೆ ಒಪ್ಪಂದ ಒಂದು  ಆಗಿತ್ತಂತೆ. ಇದನ್ನು ಸ್ವತಃ ಬಿರಾದಾರ್ ಅವರೆ ತೆರೆದು ಇಟ್ಟಿದ್ದಾರೆ. ಸಂಕೇತ್ ಸ್ಟುಡಿಯೋದಲ್ಲಿ ಭೇಟಿಯಾದ ನಟ, ನಿರ್ದೇಶಕ ಉಪೇಂದ್ರ ಹಾಗೂ ಬಿರಾದರ್ ಇಬ್ಬರು ಪರಸ್ಪರ ಒಂದು ಮಾತು ಹೇಳಿಕೊಂಡಿದ್ದರು. ‘ನಾನು ಉಪೇಂದ್ರ, ಗುರುರಾಜ್ ಹೊಸಕೋಟೆ ಅವರ ತಂಡದಲ್ಲಿ ನಿಮ್ಮನ್ನು ನೋಡಿದ್ದೇನೆ, ನೀವು ಮಾಡುವ ಸಿನಿಮಾಕ್ಕೆ ಬರಹಗಾರರು ಬೇಕಾದರೆ ನನಗೆ ತಿಳಿಸಿ ಎಂದು ಉಪೇಂದ್ರ ಹೇಳಿದ್ದರು.

ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

ಇದಕ್ಕೆ ಪ್ರತಿಯಾಗಿ ನಾನು ನಾಟಕದಲ್ಲಿ ಅಭಿನಯಿಸುತ್ತೇನೆ. ಹೊಸ ಸಿನಿಮಾಕ್ಕೆ ಹಾಸ್ಯ ನಟರು ಬೇಕಾದರೆ ತಿಳಿಸಿ ಎಂದು ಉಪ್ಪಿಗೆ ಬಿರಾದಾರ್ ಮನವಿ ಮಾಡಿಕೊಂಡಿದ್ದರು.  ವರನಟ ಡಾ.ರಾಜ್ ಕುಮಾರ್ ಅವರನ್ನು ಹುಡುಕಿಕೊಂಡು ಮದ್ರಾಸ್ ಗೆ ತೆರಳಿದ್ದು,,, ಅಲ್ಲಿಂದ ಬಸ್ ಜಾರ್ಜ್ ಗೆ 30 ರೂ. ಪಡೆದು ವಾಪಸ್ ಬೆಂಗಳೂರಿಗೆ ಬಂದಿದ್ದು.. ಈ ರೀತಿ ಅನೇಕ ವಿಚಾರಗಳನ್ನು ಬಿರಾದಾರ್ ಹಂಚಿಕೊಂಡರು.

ಇದಾದ ಮೇಲೆ ಬಿರಾದಾರ್ ಗೆ ಉಪೇಂದ್ರ ಅವರ ಗುರು ಕಾಶಿನಾಥ್ ಅವಕಾಶ ಮಾಡಿಕೊಡುತ್ತಾರೆ. ‘ಕನಸೆಂಬೋ ಕುದುರೆಯನ್ನೇರಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಬಿರಾದಾರ್ ಪಡೆದುಕೊಳ್ಳುತ್ತಾರೆ.