Sri Raghavendra Swamy Mahathme: ಶ್ರೀ ರಾಘವೇಂದ್ರ ಸ್ವಾಮಿ ಭಕ್ತರಿಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ವಾಹಿನಿ!

Mantralaya Sri Raghavendra Swamy Serial: ಜೀ ಕನ್ನಡ ವಾಹಿನಿಯು ವೀಕ್ಷಕರಿಗೆ ಗುರುವಾರವೇ ಸಿಹಿಸುದ್ದಿ ಕೊಟ್ಟಿದೆ. ಗುರುರಾಘವೇಂದ್ರ ಸ್ವಾಮಿಗಳನ್ನು ನಂಬುವ ಭಕ್ತರಿಗೂ, ಈ ಮಹಿಮಾವ್ಯಕ್ತಿಯ ಬಗ್ಗೆ ತಿಳಿಯದವರಿಗೂ ʼರಾಘವೇಂದ್ರ ಸ್ವಾಮಿ ಮಹಾತ್ಮೆʼ ಎಂಬ ಧಾರಾವಾಹಿ ಸಾಕಷ್ಟು ಮಾಹಿತಿ ನೀಡಲಿದೆ. 

zee kannada Sri Raghavendra Mahathme serial new promo release

ವರ್ಷಗಳ ಹಿಂದೆ ಜೀ ಕನ್ನಡ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಅವರು “ನಮಗೆ ರಾಘವೇಂದ್ರ ಸ್ವಾಮಿಗಳ ಕುರಿತು ಧಾರಾವಾಹಿ ಮಾಡುವ ಇಚ್ಛೆಯಿದೆ. ಆದಷ್ಟು ಬೇಗ ತೆರೆ ಮೇಲೆ ತರಲಿದ್ದೇವೆ” ಎಂದು ಹೇಳಿದ್ದರು. ಈಗ ಈ ಸೀರಿಯಲ್‌ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದಾರೆ. 

ಹೊಸ ಪ್ರೋಮೋ ರಿಲೀಸ್!‌ 
ಜೀ ಕನ್ನಡವು ಹೊಸ ಪ್ರೋಮೋ ರಿಲೀಸ್‌ ಮಾಡಿ, “ ರಾಯರಿದ್ದಾರೆ! ಕಷ್ಟಗಳಿವೆ ಎಂದು ರಾಯರ ಬಳಿ ಹೇಳಬೇಡಿ. ಕಷ್ಟಗಳಿಗೆ ಹೇಳಿ ನಿಮ್ಮ ಬಳಿ ರಾಯರಿದ್ದಾರೆ ಎಂದು! ಶ್ರೀ ರಾಘವೇಂದ್ರ ಮಹಾತ್ಮೆ । ಅತೀ ಶೀಘ್ರದಲ್ಲಿ” ಎಂದಿದ್ದಾರೆ.

“ಕಲಿಯುಗದ ಕಲ್ಪವೃಕ್ಷ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭೂಮಿಯಲ್ಲಿ ಅವತರಿಸಿದ ದಿನ! ರಾಯರ ಕೃಪೆ ಎಲ್ಲರ ಮೇಲೂ ಇರಲಿ ಎಂದು ಜೀ ಕನ್ನಡ ಹಾರೈಸುತ್ತದೆ” ಎಂದು ವಾಹಿನಿಯ ಹೇಳಿದೆ.  

ಸಾಕಷ್ಟು ದಿನಗಳಿಂದ ವೀಕ್ಷಕರು ಕೂಡ ʼರಾಘವೇಂದ್ರ ಸ್ವಾಮಿ ಮಹಾತ್ಮೆʼ ಯಾವಾಗ ಪ್ರಸಾರ ಆಗಲಿದೆ ಎಂದು ಕೇಳುತ್ತಿದ್ದರು. ಅದಕ್ಕೀಗ ಸಮಯ ಬಂದಿದೆ. 

ಮಂತ್ರಾಲಯಕ್ಕೆ ಭೇಟಿ ನೀಡಿದ ಶಿವರಾಜ್‌ಕುಮಾರ್ ಫ್ಯಾಮಿಲಿ; ಫೋಟೋ ವೈರಲ್

ರಾಯರ ಜನನ ಎಲ್ಲಿ ಆಯ್ತು? 
ತಮಿಳುನಾಡು ರಾಜ್ಯದ ಆಗಿನ ಕುಂಭಕೋಣ ಸಂಸ್ಥಾನದಲ್ಲಿ ಅಂದರೆ ಇಂದಿನ ಭುವನಗಿರಿಯಲ್ಲಿ ಗುರುರಾಯರ ಜನನವಾಯಿತು. ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಅವರು ಪ್ರತಿಪಾದಿಸಿದ್ದರು. ಭಕ್ತರು ಇವರನ್ನು ರಾಯರು, ಗುರುರಾಯರು, ಗುರುರಾಜರು ಎಂದು ಕರೆಯುತ್ತಾರೆ. 
ಗುರುರಾಯರ ಸಶರೀರ ಆಂಧ್ರ ಪ್ರದೇಶದ ತುಂಗಭದ್ರಾ ನದಿ ದಂಡೆ ಮೇಲೆ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಲಕ್ಷಗಟ್ಟಲೇ ಭಕ್ತರು ಬಂದು ರಾಯರ ಕೃಪೆಗೆ ಪಾತ್ರರಾಗುತ್ತಾರೆ. ರಾಯರೇ ಹೇಳಿದಂತೆ 700 ವರ್ಷದವರೆಗೆ ಅವರು ಬೃಂದಾವನದಲ್ಲಿ ಜೀವಂತವಾಗಿರುತ್ತಾರಂತೆ. 

ಮದುವೆಯಾಗಿದ್ದ ವೆಂಕಟನಾಥರು
ಪೂರ್ವಾಶ್ರಮದಲ್ಲಿ ಇವರನ್ನು ವೆಂಕಟನಾಥರು ಎಂಬುದಾಗಿತ್ತು. ರಾಯರಿಗೆ ಸರಸ್ವತಿ ಎನ್ನುವವರ ಜೊತೆ ಮದುವೆ ಆಗಿತ್ತು. ಸರಸ್ವತಿ ಅವರು ಅಕಾಲಿಕ ಮರಣವನ್ನಪ್ಪಿದ್ದರು. ಪತ್ನಿಗೆ ಮೋಕ್ಷ ಸಿಕ್ಕಿರಲಿಲ್ಲ. ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಹುಡುಕುತ್ತಿರುವಾಗ, ಅವರಿಗೆ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದರಂತೆ. ಆಮೇಲೆ ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸಿ ಎಂದು ಹೇಳಿದರಂತೆ. ಶ್ರೀ ರಾಘವೇಂದ್ರ ತೀರ್ಥರು ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ಮಾಡಲಾಯ್ತು. ಸನ್ಯಾಸ ದೀಕ್ಷೆ ಪಡೆದ ನಂತರ ಅವರು ಸರಸ್ವತಿ ಆತ್ಮಕ್ಕೆ ಮೋಕ್ಷ ನೀಡಿದರು ಎಂದು ಹೇಳಲಾಗುವುದು.

ಮಂತ್ರಾಲಯದಲ್ಲಿ ಕುಮಾರಸ್ವಾಮಿ: ರಾಯರ ದರ್ಶನ, ರಾಜ್ಯ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸಿದ ಹೆಚ್‌ಡಿಕೆ

ಲೆಕ್ಕಕ್ಕೆ ಸಿಗದಷ್ಟು ರಾಯರ ಪವಾಡಗಳು!
ರಾಯರು ಇದುವರೆಗೂ ಮಾಡಿದ ಪವಾಡಗಳಿಗೆ ಲೆಕ್ಕವೇ ಇಲ್ಲ. ಎಷ್ಟೋ ಜನರ ಜೀವ ಉಳಿದಿದೆ, ಅನಾರೋಗ್ಯ ಸಮಸ್ಯೆ ನಿವಾರಣೆ ಆಗಿದೆ, ಬಡತನದಲ್ಲಿದ್ದವರಿಗೆ ಆರ್ಥಿಕ ಚೈತನ್ಯ ಸಿಕ್ಕಿದೆ, ಕೆಲಸ ಸಿಕ್ಕಿದೆ, ವಿವಾಹ ಯೋಗ ಸಿಕ್ಕಿದೆ. ಹೀಗೆ ರಾಯರನ್ನು ನಂಬಿದವರಿಗೆ ಕಷ್ಟವಿಲ್ಲ ಎಂದು ಹೇಳಲಾಗುವುದು.

Breaking News: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಂತ್ರಾಲಯ ಮಠದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ದುರ್ಮರಣ!

ಈ ಹಿಂದೆ ಕನ್ನಡದಲ್ಲಿ ಒಂದು ಪ್ರಯೋಗ ಆಗಿತ್ತು! 
ಈ ಹಿಂದೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ʼಗುರು ರಾಘವೇಂದ್ರ ವೈಭವʼ  ಧಾರಾವಾಹಿಯ ಪ್ರಸಾರ ಆಗಿತ್ತು. ಪರೀಕ್ಷಿತ್‌ ಸೇರಿ ಶ್ರೀನಿವಾಸ ಮೂರ್ತಿ, ಪವಿತ್ರಾ ಲೋಕೇಶ್, ಶಿವರಾಂ, ಲೋಕೇಶ್, ಶಂಕರ್ ಭಟ್, ಮಾಸ್ಟರ್ ಸೌರಭ್,  ಲಕ್ಷ್ಮಿ ಹೆಗಡೆ, ಪಡೆಗೆರೆ, ಪ್ರಶಾಂತ್ ಎನ್ನುವವರು ಧಾರಾವಾಹಿಯಲ್ಲಿ ನಟಿಸಿದ್ದರು. 200 ಎಪಿಸೋಡ್‌ ಪ್ರಸಾರ ಆಗಿತ್ತು. ಈಗ ಜೀ ಕನ್ನಡ ವಾಹಿನಿಯಲ್ಲಿ ಯಾವ ರೀತಿ ಈ ಧಾರಾವಾಹಿ ಪ್ರಸಾರ ಆಗಲಿದೆ ಎಂಬ ಕುತೂಹಲ ಶುರುವಾಗಿದೆ. ಗುರುರಾಯರ ಮಹಿಮೆಯನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಈ ಧಾರಾವಾಹಿ ಶೂಟಿಂಗ್‌ ಶುರು ಆಗಿದೆ ಎನ್ನಲಾಗಿದೆ. 
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios