ಮಂತ್ರಾಲಯಕ್ಕೆ ಭೇಟಿ ನೀಡಿದ ಶಿವರಾಜ್‌ಕುಮಾರ್ ಫ್ಯಾಮಿಲಿ; ಫೋಟೋ ವೈರಲ್
ಇಷ್ಟ ದೇವರ ದರ್ಶನ ಪಡೆದ ಹ್ಯಾಟ್ರಿಕ್ ಹೀರೋ ಫ್ಯಾಮಿಲಿ. ಸಾಮಾಜಿಕ ಜಾಲತಾಣದಲ್ಲಿ ಶ್ರೀ ಪೂಜ್ಯ ಗುರುಗಳನ್ನು ಭೇಟಿ ಮಾಡಿರುವ ಫೋಟೋ ವೈರಲ್....

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪತ್ನಿ ಗೀತಾ, ಪುತ್ರಿ ನಿವೇದಿತಾ ಮತ್ತು ತಂಗಿ ಮಗ ಧಿರೇನ್ ರಾಮ್‌ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದು ಆನಂತರ ಪೂಜ್ಯ ಗುರುಗಳನ್ನು ಭೇಟಿ ಮಾಡಿ ದರ್ಶನ ಪಡೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿದೇಶದಲ್ಲಿ ಚಿಕಿತ್ಸೆ ಪಡೆದು ಒಂದು ತಿಂಗಳ ನಂತರ ಭಾರತಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್ ಒಂದು ದಿನವೂ ರೆಸ್ಟ್ ತೆಗೆದುಕೊಳ್ಳದೆ ಪೆಂಡಿಂಗ್ ಇರುವ ಕೆಲಸಗಳನ್ನು ಮುಗಿಸಿಕೊಂಡಿದ್ದಾರೆ.
ಡಾ.ರಾಜ್‌ಕುಮಾರ್ ಫ್ಯಾಮಿಲಿಯ ಪ್ರತಿಯೊಬ್ಬರು ರಾಘವೇಂದ್ರ ಸ್ವಾಮಿ ಭಕ್ತರು. ಹೀಗಾಗಿ ತಮ್ಮ ಸಿನಿಮಾಗಳನ್ನು ಹೆಚ್ಚಾಗಿ ರಿಲೀಸ್ ಮಾಡುವುದೇ ಗುರುವಾರದಂದು.
ಆರಾಧನೆ ಸಮಯದಲ್ಲಿ ಅಣ್ಣಾವ್ರ ಕುಟುಂಬದಿಂದ ಯಾರಾದರೂ ಒಬ್ಬರು ಮಂತ್ರಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಂತ್ರಾಲಯಕ್ಕೂ ಅಣ್ಣಾವ್ರ ಫ್ಯಾಮಿಲಿಗೂ ತುಂಬಾ ಹತ್ತಿರದ ಕನೆಕ್ಷನ್ ಇದೆ.
ಅಣ್ಣಾವ್ರು ರಾಘವೇಂದ್ರ ವೈಭವ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ರಾಘವೇಂದ್ರ ಸ್ವಾಮಿ ಪೂಜಿಸುತ್ತಾರೆ.