Sathya Serial: ಫುಟ್ಬಾಲ್ ತರ ಸೇರಕ್ಕಿ ಒದ್ದಳಲ್ಲಾ ಸತ್ಯಾ, ಮದುಮಗಳು ಸೇರಕ್ಕಿ ಒದೆಯೋದ್ಯಾಕೆ?
ಸತ್ಯಾ ಸೀರಿಯಲ್‌ನಲ್ಲಿ ಸತ್ಯಾ ತನ್ನದೇ ಸ್ಟೈಲಲ್ಲಿ ಹೊಸ್ತಿಲ ಮೇಲಿನ ಸೇರಕ್ಕಿ ಒದೆಯುತ್ತಾಳೆ. ಅವಳು ಫುಟ್ಬಾಲ್ ಥರ ಒದ್ದ ಸೇರಕ್ಕಿ ನೋಡಿ ಮನೆಯವರೆಲ್ಲ ಕಕ್ಕಾಬಿಕ್ಕಿ. ಅಷ್ಟಕ್ಕೂ ನಮ್ಮ ಸಂಪ್ರದಾಯದಲ್ಲಿ ಮದುಮಗಳು ಸೇರಕ್ಕಿ ಒದೆಯೋದು ಯಾಕೆ?
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ 'ಸತ್ಯಾ' ಸೀರಿಯಲ್ ನೋಡಿದವರಿಗೆ ಅಮೂಲ್ ಬೇಬಿ ಜೊತೆ ಆಕೆಯ ಮದುವೆ ಆಗಿರೋದೆಲ್ಲ ಹಳೇ ವಿಷಯ. ಆಕೆ ಹೊಸ್ತಿಲ ಮೇಲಿನ ಸೇರಕ್ಕಿ ಒದೆದ ಸ್ಟೈಲ್ ಹೊಸ ವಿಷ್ಯ. ಇಲ್ಲಿ ಸತ್ಯ ಸೇರಕ್ಕಿ ಒದೆದದ್ದು ಕಂಡು ಹಲವರಿಗೆ ಫುಟ್‌ಬಾಲ್ ಮ್ಯಾಚ್ ನೆನಪಾದ್ರೂ ಆಶ್ಚರ್ಯ ಇಲ್ಲ. ಈ ಸೀರಿಯಲ್‌ನಲ್ಲಿ ಮೊದಲಿಂದಲೂ ಸತ್ಯಾಳನ್ನು ತೋರಿಸಿರೋ ರೀತಿನೇ ಹಾಗೆ. ಅಪ್ಪ ತೀರಿಕೊಂಡ ಮೇಲೆ ಮನೆಯ ಎಲ್ಲಾ ಜವಾಬ್ದಾರಿ ತನ್ನ ಹೆಗಲ ಮೇಲೆ ಹೊತ್ತುಕೊಳ್ಳುವ ಸತ್ಯಾ ಮೆಕ್ಯಾನಿಕ್ ಶಾಪ್ ಸೇರಿಕೊಂಡು ಮೆಕ್ಯಾನಿಕ್ ಕೆಲಸ ಮಾಡೋ ಡೇರಿಂಗ್ ಹುಡುಗಿ. ಆಕೆಗೆ ಪುಕ್ಕಲ ಸ್ವಭಾವದ ಹುಡುಗ ಕಾರ್ತಿಕ್ ಜೊತೆಗೆ ಸಣ್ಣ ಕ್ರಶ್ ಆಗೋದು, ಅವನಿಗೂ ಒಳಗೊಳಗೇ ಇಷ್ಟ ಆಗೋದು ಇದೆಲ್ಲ ಹಳೇ ಕತೆ. ಈಗ ಮಾತ್ರ ಸಿಟ್ಟಲ್ಲಿ ಅಮೂಲ್ ಬೇಬಿಯಂಥಾ ಹುಡುಗ ರೌಡಿ ಬೇಬಿ (Rowdy Baby) ಕೈ ಹಿಡಿದಾಗಿದೆ. ಮುಂದೆ ರೌಡಿ ಬೇಬಿ ಅಮೂಲ್ ಬೇಬಿ ಸಂಸಾರ ಹೇಗಿರುತ್ತೆ ಅನ್ನೋ ಕುತೂಹಲ ಪ್ರೇಕ್ಷಕರದ್ದು.
ರೌಡಿ ಬೇಬಿ ಸತ್ಯ ಸೇರಕ್ಕಿಯನ್ನು ಒದ್ದಾಗ ಕೆಲವರ ಮನಸ್ಸಲ್ಲಾದರೂ ಒಂದು ಪ್ರಶ್ನೆ ಎದ್ದಿರುತ್ತೆ. ಮನೆಯ ಹೊಸ್ತಿಲ ಮೇಲೆ ಸೇರು ತುಂಬಾ ಅಕ್ಕಿ ಇಟ್ಟು ಅದನ್ನು ಮದುಮಗಳಿಂದ (Bride) ಒದೆಸೋದು ಯಾಕೆ ಅಂತ. ಅದಕ್ಕೆ ಉತ್ತರ ಇಲ್ಲಿದೆ. ಹಿಂದೂ ಸಂಪ್ರದಾಯದಲ್ಲಿ ಮದುಮಗಳಿಂದ ಸೇರಕ್ಕಿ ಒದೆಸೋದಕ್ಕೆ ಒಂದೊಳ್ಳೆ ಹಿನ್ನೆಲೆ ಇದೆ. ಸೇರಲ್ಲಿ ಅಕ್ಕಿ ಹಾಕಿ ಬೆಲ್ಲದ (Jaggery) ಅಚ್ಚು ಇಟ್ಟು ಅದನ್ನು ಅಲಂಕರಿಸಿದ ಹೊಸ್ತಿಲ ಮೇಲೆ ಇಡುತ್ತಾರೆ. ಅದನ್ನು ಪಾದದಿಂದ ತಳ್ಳಿ ನವ ವಧು ಪತಿ ಗೃಹ ಪ್ರವೇಶಿಸುತ್ತಾಳೆ. ಈ ಸಂಪ್ರದಾಯದ ಪ್ರತೀ ಹಂತಕ್ಕೂ ಅರ್ಥವಿದೆ.
ಅನುಪಮಾ ಗೌಡ ಈಗ ಓಪನ್ ವಾಟರ್ ಡೈವರ್! ಸಾಹಸಕ್ಕೆ ಸಿಗ್ತು ಸರ್ಟಿಫಿಕೇಟ್
ಸೇರಿಗೆ ಶನಿ ಕಾರಕನಾದರೆ, ಅಕ್ಕಿಗೆ ಚಂದ್ರ ಕಾರಕ, ಬೆಲ್ಲಕ್ಕೆ ಗುರು ಕಾರಕ. ಅಕ್ಕಿ ಮೇಲೆ ಬೆಲ್ಲ ಇಡುವುದಕ್ಕೆ ಎರಡು ಕಾರಣ ಬೆಲ್ಲ ಅಂದರೆ ಮೃತ್ಯುಂಜಯ ಎಂಬ ಅರ್ಥವಿದೆ. ಮದುಮಗಳು ಕಾಲಿಟ್ಟ ಹೊಸ ಮನೆಯಲ್ಲಿ ಸಾವು ನೋವುಗಳಾಗದೇ ಇರಲಿ ಎಂಬುದು ಒಂದು ಅರ್ಥವಾದರೆ ಎಲ್ಲರ ಮನಸ್ಸು ಸಿಹಿಯಾಗಿರಲಿ ಅನ್ನುವುದು ಇನ್ನೊಂದು ಭಾವ. ಅಕ್ಕಿಗೆ ಚಂದ್ರ ಕಾರಕ, ಬೆಲ್ಲಕ್ಕೆ ಗುರು ಕಾರಕ. ಇವರಿಬ್ಬರು ಜೊತೆಯಾದಾಗ ಗಜಕೇಸರಿ ಯೋಗ. ಬಹಳ ಅದೃಷ್ಟ ತರುವ ಈ ಯೋಗ ಎಂದೂ ಮನೆಯವರಿಗಿರಲಿ ಅನ್ನುವ ಇನ್ನೊಂದು ಆಶಯ ಇದರ ಹಿಂದಿದೆ. ನವವಧುವನ್ನು ಜ್ಯೋತಿಷ್ಯದಲ್ಲಿ ಶುಕ್ರನಿಗೆ ಹೋಲಿಸುತ್ತಾರೆ. ಶುಕ್ರ ಎಂದರೆ ಲಕ್ಷ್ಮಿ ಅನ್ನುವ ಅರ್ಥದ ಜೊತೆಗೆ ಮನೆ ಎಂಬ ಅರ್ಥವೂ ಇದೆ. ಲಕ್ಷ್ಮಿಯಂತೆ ಮನೆ ಪ್ರವೇಶಿಸುವ ವಧು ಋಣ, ರೋಗ, ದಾರಿದ್ರ್ಯಗಳನ್ನು ಒದ್ದು ಮನೆಯಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ, ಬಾಂಧವ್ಯ ಬೆಳೆಸಲಿ ಎಂಬ ಉದ್ದೇಶ ಇದರ ಹಿಂದಿದೆ. ಅತ್ತೆ ಮತ್ತು ಮಾವನ ಜೊತೆಗೆ ನವವಧು ಉತ್ತಮ ಬಾಂಧವ್ಯ ಹೊಂದಿರಬೇಕು. ಆಗ ಅತ್ತೆ ಮಾವ ಗುರು ಹಿರಿಯರ ಆಶೀರ್ವಾದದಿಂದ ಮನೆ ತುಂಬುವ ಹೆಣ್ಣಿನಿಂದಾಗಿ ಮನೆ ಬೆಳೆಗುತ್ತದೆ ಎಂಬ ಇರಾದೆಯೂ ಇದೆ.
Doresani serial : ಪುರುಷೋತ್ತಮ್ ಅವರೇ ಅದೆಷ್ಟು ಬಾರಿ ಎದೆ ಹಿಡ್ಕೊಂಡು ಕೂರ್ತೀರಾ?
ವೈವಾಹಿಕ ಬದುಕಿನಲ್ಲಿ (Married LIfe) ಏನೇ ಅಡೆತಡೆ ಬಂದರೂ ಅದನ್ನು ಈ ಎಳೆಯ ಹೆಣ್ಣುಮಗಳು ತಾಳ್ಮೆಗೆಡದೇ ನಿವಾರಿಸಿಕೊಂಡು ಹೋಗಲಿ ಎಂಬ ಹಾರೈಕೆಯೂ ಇದೆ. ಗಂಡ ಹೆಂಡತಿ ಆಕರ್ಷಣೆಯಿಂದ ಶುದ್ಧ ಮನಸ್ಸಿಂದ ವೈವಾಹಿಕ ಜೀವನ ನಡೆಸಲಿ ಎಂಬ ಹಿನ್ನೆಲೆಯೂ ಇದಕ್ಕಿದೆ. ಒಟ್ಟಾರೆ ಈ ಸೇರು ಒದೆಯುವ ಸಂಪ್ರದಾಯ ಬಹಳ ಮಂಗಳಕರವಾದದ್ದು. ವಧುವಿನ ಮೂಲಕ ಮನೆಗೆ ಶುಭ ತರುವಂಥದ್ದು ಆಗಿದೆ.
ಇದೀಗ ಸೇರು ಒದ್ದು ಅಮೂಲ್ ಬೇಬಿಯೊಂದಿಗೆ ಮನೆ ಪ್ರವೇಶಿಸಿದ್ದಾಳೆ ಸತ್ಯ. ಅವಳಿಂದಾಗಿ ಅಮೂಲ್ ಬೇಬಿ ಮನೆಯಲ್ಲಿ ಶುಭ ನೆಲೆಸುತ್ತಾ? ಅವಳು ಆ ಮನೆಯನ್ನು ಬೆಳಗುವ ಗಟ್ಟಿ ಹೆಣ್ಣಾಗುತ್ತಾಳಾ ಅನ್ನೋದು ಮುಂದೆ ಗೊತ್ತಾಗುತ್ತೆ.
Sathya Serial: ಅಮೂಲ್ ಬೇಬಿ ನಡುದಾರೀಲಿ ಬಿಟ್ರೆ, ಮದ್ವೆ ಸೀರೆಯಲ್ಲೇ ಬೈಕ್ ಏರಿ ಬಂದ್ಲು ಸತ್ಯ!