ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಾದ 'ಅಮೃತಧಾರೆ' ಮತ್ತು 'ನಾ ನಿನ್ನ ಬಿಡಲಾರೆ' ಧಾರಾವಾಹಿಗಳಲ್ಲಿ ಇದೇ ವಾರ ಅಚ್ಚರಿಯ ಘಟನೆಯೊಂದು ನಡೆದಿದೆ.
Kannada Serial: ಸಂಜೆಯಾಗುತ್ತಿದ್ದಂತೆ ಮಹಿಳೆಯರು ಸೀರಿಯಲ್ ನೋಡಲು ಕುಳಿತುಕೊಳ್ಳುತ್ತಾರೆ. ಸಂಜೆ 6 ಗಂಟೆಗೂ ಮೊದಲೇ ಕೆಲವರು ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ಒಂದಿಷ್ಟು ಮಂದಿ ಅಡುಗೆ ಕೆಲಸಗಳನ್ನು ಮಾಡಿಕೊಳ್ಳುತ್ತಾ ಸೀರಿಯಲ್ ನೋಡುತ್ತಾರೆ. ಜೀ ಕನ್ನಡದ ಸೀರಿಯಲ್‌ಗಳು ಹೆಚ್ಚು ಟಿವಿಆರ್ ರೇಟಿಂಗ್ ಪಡೆದುಕೊಳ್ಳುತ್ತವೆ. ಪ್ರತಿದಿನ ಸೀರಿಯಲ್ ನೋಡುಗರಲ್ಲೊಂದು ಪ್ರಶ್ನೆಯೊಂದು ಮೂಡಿದೆ. ಇಷ್ಟು ದಿನ ನಡೆಯದ ಘಟನೆಯೊಂದು ಎರಡು ಸೀರಿಯಲ್‌ಗಳಲ್ಲಿ ನಡೆದಿದೆ. ಏನಿದು ಅಚ್ಚರಿ ಎಂದು ಧಾರಾವಾಹಿ ವೀಕ್ಷಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆ ಎರಡು ಧಾರಾವಾಹಿಗಳು ಯಾವವು? ನಡೆದ ಘಟನೆ ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಅಮೃತಧಾರೆ
ಸಂಜೆ 7 ಗಂಟೆಯ ಅಮೃತಧಾರೆ ಮತ್ತು ರಾತ್ರಿ 9.30ಕ್ಕೆ ಪ್ರಸಾರವಾಗುವ ನಾ ನಿನ್ನ ಬಿಡಲಾರೆ ಸೀರಿಯಲ್ ತಮ್ಮದೇ ಆದ ವೀಕ್ಷಕರನ್ನು ಹೊಂದಿದ್ದು, ಉತ್ತಮ ಟಿವಿಆರ್ ಜೊತೆ ಮುನ್ನಗ್ಗುತ್ತಿವೆ. ಅಮೃತಧಾರೆ ಸೀರಿಯಲ್ ಪ್ರಸಾರವಾದ ಕೆಲ ತಿಂಗಳ ಬಳಿಕ ಗೌತಮ್ ದಿವಾನ್ ತಾಯಿ ಭಾಗ್ಯಾ ಪಾತ್ರವನ್ನು ಪರಿಚಯಿಸಲಾಗಿತ್ತು. ಈ ಮೂಲಕ ಧಾರಾವಾಹಿಗೆ ರೋಚಕ ತಿರುವು ನೀಡಲಾಗಿತ್ತು. ಅಮ್ಮ ಸಿಕ್ಕ ಖುಷಿ ಒಂದಾದ್ರೆ ಮಾತನಾಡಲ್ಲ ಎಂಬ ವಿಚಾರ ತಿಳಿದ ಗೌತಮ್ ಮತ್ತು ಭೂಮಿಕಾ ಬೇಸರಗೊಂಡಿದ್ದರು.
ನಾ ನಿನ್ನ ಬಿಡಲಾರೆ
ಕೆಲ ತಿಂಗಳ ಹಿಂದೆಯಷ್ಟೇ ಪ್ರಸಾರವಾಗುತ್ತಿರುವ 'ನಾ ನಿನ್ನ ಬಿಡಲಾರೆ' ಸೀರಿಯಲ್ ಎಲ್ಲಾ ಹಳೆ ಧಾರಾವಾಹಿಗಳನ್ನು ಹಿಂದಿಕ್ಕುವಲ್ಲಿ ಸಕ್ಸಸ್ ಆಗಿದೆ. ತಾಯಿ ಇಲ್ಲದ ಹಿತಾಗೆ ಮಾತು ಬರುತ್ತಿರಲಿಲ್ಲ. ಸೀರಿಯಲ್ ಆರಂಭವಾದಾಗಿನಿಂದ ಹಿತಾ ಒಂದೇ ಒಂದು ಡೈಲಾಗ್ ಹೇಳಿರಲಿಲ್ಲ. ತಮ್ಮ ನಟನೆಯಿಂದಲೇ ಎಲ್ಲವನ್ನು ಹೇಳುತ್ತಿದ್ದ ಪುಟ್ಟ ಹಿತಾಗೆ ಎಲ್ಲರೂ ಫಿದಾ ಆಗಿದ್ದಾರೆ. ಕಣ್ಮುಂದೆಯೇ ತಾಯಿ ಅಂಬಿಕಾ ಬೆಂಕಿಗಾಹುತಿ ಆಗಿದ್ದನ್ನು ನೋಡಿದ ಆಘಾತಕ್ಕೆ ಹಿತಾಳ ಮಾತು ನಿಂತಿತ್ತು. ಆತ್ಮಕ್ಕೆ ಮುಕ್ತಿ ಸಿಗದ ಹಿನ್ನೆಲೆ ಅಂಬಿಕಾ ಮನೆ ಸುತ್ತವೇ ಸುತ್ತಾಡುತ್ತಿದ್ದಾಳೆ.
ಈ ವಾರ ನಡೆದ ಮ್ಯಾಜಿಕ್!
ಈ ವಾರ ಎರಡೂ ಸೀರಿಯಲ್‌ಗಳಲ್ಲಿ ಮ್ಯಾಜಿಕ್ ನಡೆದಿದೆ. ಅಮೃತಧಾರೆ ಸೀರಿಯಲ್ ನಲ್ಲಿ ಭಾಗ್ಯಗೆ ಮಾತು ಬಂದಿದೆ. ಭಾಗ್ಯ ಮೊದಲ ಬಾರಿಗೆ ಮಗ ಗೌತಮ್ ಹೆಸರು ಹೇಳಿದ್ದಾಳೆ. ಈ ವಿಷಯ ತಿಳಿದು ಗೌತಮ್-ಭೂಮಿಕಾ ಖುಷಿಯಾಗಿದ್ದಾರೆ. ಇತ್ತ ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿಯೂ ಪುಟ್ಟ ಮೇಡಂ ಹಿತಾ ಮಾತನಾಡಲು ಆರಂಭಿಸಿದ್ದಾಳೆ.
ಅಪಘಾತಕ್ಕೊಳಗಾಗಿದ್ದ ದುರ್ಗಾಳನ್ನು ಉಳಿಸಿಕೊಳ್ಳಲು ದೇವಿಯ ಆಶೀರ್ವಾದದಿಂದ ಹಿತಾ, ಅಮ್ಮಾ ಎಂದು ಕೂಗಿದ್ದಾಳೆ. ಮನೆಗೆ ಬಂದ ನಂತರವೂ ದುರ್ಗಾ ಜೊತೆಯಲ್ಲಿಯೂ ಹಿತಾ ಮಾತನಾಡಿದ್ದಾಳೆ. ಹಿತಾ ಮಾತನಾಡುತ್ತಿರುವ ವಿಷಯವನ್ನು ದುರ್ಗಾ, ಮನೆಯಲ್ಲಿರೋರ ಮುಂದೆ ಹೇಳಿದ್ದಾಳೆ. ಆದ್ರೆ ಹಿತಾ ಮನೆಯವರ ಮುಂದೆ ಮಾತನಾಡದೇ ಮೂಗಿಯಂತೆ ನಟಿಸಿದ್ದಾಳೆ. ಇದರಿಂದ ಹಿತಾ ತಂದೆ ಶರತ್ ಕಣ್ಣೀರು ಹಾಕಿದ್ರೆ, ಮಾಯಾ ನಿಟ್ಟುಸಿರು ಬಿಟ್ಟಿದ್ದಾಳೆ.
ಎರಡೂ ಧಾರಾವಾಹಿಗಳಲ್ಲಿ ರೋಚಕ ತಿರುವು
ಅಮೃತಧಾರೆ ಮತ್ತು ನಾ ನಿನ್ನ ಬಿಡಲಾರೆ ಧಾರಾವಾಹಿಗಳಲ್ಲಿ ಇಷ್ಟು ದಿನ ಮಾತುಗಳಿಲ್ಲದ ಭಾಗ್ಯಾ ಮತ್ತು ಹಿತಾ ಪಾತ್ರಕ್ಕೆ ಜೀವ ಬಂದಿದೆ. ಭಾಗ್ಯಾಗೆ ಮಾತು ಬಂದಿರುವ ವಿಷಯ ತಿಳಿದರೆ ಶಕುಂತಲಾ ಏನು ಮಾಡ್ತಾಳೆ ಎಂದು ಕುತೂಹಲ ಮೂಡಿದೆ. ಈಗಾಗಲೇ ಅಣ್ಣ ಲಕ್ಷ್ಮೀಕಾಂತ್ ಜೈಲುಪಾಲು ಅಗಿರೋದರಿಂದ ಶಕುಂತಲಾ ಒಂಟಿಯಾಗಿದ್ದಾಳೆ. ಈಗ ಭಾಗ್ಯಾಗೆ ಮಾತು ಬಂದಿರುವ ವಿಷಯ ಶಕುಂತಲಾಗೆ ದೊಡ್ಡ ಶಾಕ್ ನೀಡಲಿದೆ. ಇನ್ನು ಹಿತಾ ಮಾತನಾಡಲು ಆರಂಭಿಸಿದ್ರೆ ಮಾಯಾಳಾ ಡಬಲ್ ಗೇಮ್ ಬಯಲಾಗೋದು ಫಿಕ್ಸ್ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
