ಬ್ರಹ್ಮಗಂಟು ಸೀರಿಯಲ್ ದೀಪ ಪಾತ್ರ ದಿನೇ ದಿನೇ ಕುರೂಪ ಹೆಚ್ಚಿಸಿಕೊಳ್ತಿದೆಯಾ? ಸೋಷಿಯಲ್ ಮೀಡಿಯಾದ ಈ ಫೋಟೋನೇ ಅದಕ್ಕೆ ಸಾಕ್ಷಿ. ಇನ್ನು ಆಕೆ ಏಕಾಏಕಿ ಸುಂದರಿಯಾಗಿ ಬದಲಾದ್ರೆ ಹೇಗಿರಬಹುದು!

ನಮಗೆ ಬೇಕೋ ಬೇಡ್ವೋ, ಸರಿಯಿದೆಯೋ ಇಲ್ವೋ ಒಂದು ಸಿದ್ಧಾಂತ ಅಂತೂ ಯಾವುದೋ ಕಾಲದಿಂದ ಮನರಂಜನಾ ಕ್ಷೇತ್ರದಲ್ಲಿ ಇದೆ. ಅದೇನು ಅಂದರೆ ಸಿನಿಮಾ ನಾಯಕ ಪ್ರಧಾನ. ಸೀರಿಯಲ್ ನಾಯಕಿ ಪ್ರಧಾನ. 'ರಾಮಾಚಾರಿ', 'ಹಿಟ್ಲರ್ ಕಲ್ಯಾಣ'ದಂಥಾ ಸೀರಿಯಲ್‌ಗಳು ನಾಯಕ ಪ್ರಧಾನದಂತೆ ಕಂಡರೂ ಇದರ ಕತೆ ಸುತ್ತೋದು ನಾಯಕಿಯ ಮೇಲೆಯೇ. ಸರಿ, ಈಗ ಮ್ಯಾಟರಿಗೆ ಬರಾಣ. ಸೀರಿಯಲ್‌ ಹೇಗೆ ನಾಯಕಿ ಪ್ರಧಾನ ಅನ್ನೋದಿದೆಯೋ ಆಕೆ ಪರಮ ಸುಂದರಿ ಆಗಿರಬೇಕು ಅನ್ನೋ ಅನ್‌ರಿಟರ್ನ್ಡ್‌ ಶಾಸನವೂ ಇದೆ. ಆದರೆ ಈ ಸೋ ಕಾಲ್ಡ್‌ ಚೌಕಟ್ಟನ್ನ ಮೀರಿ ಬಂದಿರೋ ಜೀ ಕನ್ನಡದ ಹೊಸ ಸೀರಿಯಲ್ ಬ್ರಹ್ಮಗಂಟು. ಇದರ ನಾಯಕಿ ಪರಮ ಸುಂದರಿ ಎಂಬುದಕ್ಕೆ ವಿರುದ್ಧ ಪದ. ಆದರೆ ಸೀರಿಯಲ್ ಹೀರೋಯಿನ್‌ನ ಮತ್ತೊಂದು ಗುಣಲಕ್ಷಣ ಆಕೆ ಸಿಕ್ಕಾಪಟ್ಟೆ ಒಳ್ಳೇವ್ಳಾಗಿರಬೇಕು ಅನ್ನೋದಕ್ಕೆ ಖಂಡಿತಾ ಕರೆಕ್ಟಾಗಿ ನಿಲ್ಲೋಳು. ಚೆಂದದ ಹೀರೋ ಹೀರೋಯಿನ್‌ಗಾಗಿ ಸೀರಿಯಲ್ ನೋಡ್ತಾರೆ ಅನ್ನೋ ಥಿಯರಿಯ ನಡುವೆಯೂ ಬ್ರಹ್ಮಗಂಟು ಹೀರೋಯಿನ್‌ಗೆ ಅಭಿಮಾನಿಗಳಿದ್ದಾರೆ. ಎಷ್ಟೋ ಹೆಣ್ಮಕ್ಕಳು ತಮ್ಮನ್ನು ಈಕೆಯ ಪಾತ್ರಕ್ಕೆ ಹೋಲಿಸಿ ಕಣ್ಣೀರು ಹಾಕ್ತಿದ್ದಾರೆ.

ವೀಕ್ಷಕರ ಈ ಎಮೋಶನ್‌ಗಾಗಿಯೇ ತಂದಿರುವ ಈ ಸೀರಿಯಲ್ ಆ ಲೆಕ್ಕದಲ್ಲಿ ತನ್ನ ಉದ್ದೇಶ ಈಡೇರಿಸಿಕೊಳ್ಳೋದ್ರಲ್ಲಿ ಯಶಸ್ವಿ ಆಗಿದೆ. ಕಪ್ಪು ಬಣ್ಣದ ದೇಹ, ಕಣ್ಣಿಗೆ ದೊಡ್ಡ ಕನ್ನಡಕ, ಹಳೇ ಬಟ್ಟೆಯನ್ನು ಹಾಕಿಕೊಂಡು, ತೊದಲಾಗಿ ಮಾತಾಡ್ತಾ, ಯಾವ ಆಂಗಲ್‌ನಲ್ಲೂ ಚಂದ ಕಾಣದ ದೀಪಾ ಪಾತ್ರ ತನ್ನ ಕುರೂಪದಿಂದಲೇ ಗಮನಸೆಳೆದಂಥಾದ್ದು. ಇಂಥಾ ಹುಡುಗೀನಾ ನೋಡೋಕೆ ಹಿಂಜರಿಯೋ ಸ್ಥಿತಿ ಇರುವಾಗ ಮದುವೆ ಯಾರು ಆಗ್ತಾರೆ. ಸೋ, ದೀಪಾಳನ್ನು ಮದುವೆಯಾಗುವವರೇ ಗತಿ ಇರಲಿಲ್ಲ.

 ಪ್ರೆಸ್​ ಮುಂದೆ ಎಲ್ಲಾ ಸತ್ಯ ಹೇಳಿಬಿಟ್ಟಳಲ್ಲಾ ದೀಪಾ! ಭಲೆ ಭಲೆ ಅಂತಿರೋ ಫ್ಯಾನ್ಸ್​... ಏನಿದು ಈ ಪರಿ ಟ್ವಿಸ್ಟ್​?

ಆದರೆ ಅಕ್ಕ ರೂಪಾ ಅವಳ ಮದುವೆ ದಿನ ಓಡಿ ಹೋಗಿದ್ದಕ್ಕೆ ಚಿರಾಗ್ ಎನ್ನುವ ಸುಂದರ ಹುಡುಗನ ಜೊತೆ ದೀಪಾ ಮದುವೆ ಆಯ್ತು. ಆ ಬಳಿಕ ಏನೇನೋ ಸರ್ಕಸ್ ಆಗಿ ಈಕೆ ಗಂಡನ ಮನೆ ಸೇರ್ಕೊಳ್ತಾಳೆ. ಅಲ್ಲಿ ಕೆಲಸದವರಿಗಿಂತ ಕಡೆಯಾದ ಟ್ರೀಟ್‌ಮೆಂಟ್ ಈಕೆಗೆ ಸಿಗುತ್ತದೆ. ತನ್ನ ಮೈದುನನಿಗಾಗಿ ಅತೀ ಸುಂದರಿಯ ತಲಾಶೆಯಲ್ಲಿದ್ದ ಓವರ್ ಸ್ವಭಾವದ ಅತ್ತಿಗೆ ಸೌಂದರ್ಯಾಗೆ ಇದರಿಂದ ದೊಡ್ಡ ಮುಖಭಂಗ ಆಗಿದೆ ಆಕೆ ಇವಳನ್ನು ಮನೆಯಿಂದ ಆಚೆ ಹಾಕಲು ಪ್ಲಾನ್ ಮಾಡ್ತಿದ್ದಾಳೆ.

ಈಗ ಪ್ರಶ್ನೆ ದೀಪಾ ಪಾತ್ರವನ್ನು ಸೀರಿಯಲ್‌ನವ್ರು ಟಿಆರ್‌ಪಿಗಾಗಿ ಇನ್ನಷ್ಟು ಕುರೂಪ ಮಾಡ್ತಾ ಹೋಗ್ತಿದ್ದಾರ ಅಂತ. ಯಾಕಂದರೆ ಆರಂಭದ ಎಪಿಸೋಡ್‌ಗಳಲ್ಲಿ ಈ ಪಾತ್ರವನ್ನು ಇಷ್ಟು ಕುರೂಪಿಯಾಗಿ ತೋರಿಸುತ್ತಿರಲಿಲ್ಲ. ಈಗೀಗ ಸಿಕ್ಕಾಪಟ್ಟೆ ಕುರೂಪಿಯಾಗಿ ತೋರಿಸುತ್ತಿದ್ದಾರೆ. ಇದು ವೀಕ್ಷರ ಸಿಂಪಥಿಯನ್ನು ಇನ್ನಷ್ಟು ಗಿಟ್ಟಿಸಿಕೊಳ್ಳೋದಕ್ಕೆ ಚಾನೆಲ್ ಮಾಡ್ತಿರೋ ತಂತ್ರ ಅನ್ನೋ ಮಾತು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿದೆ. ಅದಕ್ಕೆ ಸರಿಯಾಗಿ ಆರಂಭ ಸಂದರ್ಭದಲ್ಲಿನ ದೀಪಾ ಫೋಟೋ ಹಾಗೂ ಈಗ ತೋರಿಸ್ತಿರೋ ದೀಪಾ ಫೋಟೋವನ್ನು ಅಕ್ಕಪಕ್ಕದಲ್ಲಿಟ್ಟು ಕಂಪೇರ್ ಮಾಡೋದೂ ಜೋರಾಗಿದೆ. ಅದಕ್ಕೆ ಸರಿಯಾಗಿ ಒಂದಿಷ್ಟು ಹೆಂಗಳೆಯರು 'ಇವಳನ್ನೊಮ್ಮೆ ಪಾರ್ಲರ್‌ಗೆ ಕರ್ಕೊಂಡು ಹೋಗಿ ಚೇಂಚ್ ಮಾಡಿಸಬಾರದಾ?' ಅನ್ನೋ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಈ ಪರಮ ಕುರೂಪಿ ಒಮ್ಮಿಂದೊಮ್ಮೆ ಪರಮ ಸುಂದರಿಯಾಗಿ ಕಾಣಿಸಿಕೊಂಡರೆ ಹೇಗಿರಬಹುದು, ಆ ಥರವೂ ಒಂದಿನ ಆಗುತ್ತಾ? ಅನ್ನೋ ಲೆಕ್ಕಾಚಾರವೂ ನಡೀತಿದೆ.

ಈಗೀಗ ಸೀತಾರಾಮ ಸೀರಿಯಲ್ ಸಖತ್ ಬೋರಿಂಗ್, ನಮ್ಗೆ ಮೊದಲಿನ ಸೀತಾ, ರಾಮ್ ಬೇಕು ಅಂತಿರೋದ್ಯಾಕೆ ಫ್ಯಾನ್ಸ್

‘ಬ್ರಹ್ಮಗಂಟು’ ಸೀರಿಯಲ್‌ನ ದೀಪಾ ಪಾತ್ರಕ್ಕೆ ನಟಿ ದಿಯಾ ಪಳಕ್ಕಲ್ ಅವರು ಬಣ್ಣ ಹಚ್ಚುತ್ತಿದ್ದಾರೆ. ಇಷ್ಟು ದಿನಗಳ ಕಾಲ ಬಾಲನಟಿಯಾಗಿದ್ದ ದಿಯಾ ಈ ಬಾರಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. 

View post on Instagram