ಕ್ಷಣ ಕ್ಷಣಕ್ಕೂ ಚಿತ್ರಹಿಂಸೆ ಅನುಭವಿಸ್ತಿರೋ ದೀಪಾ ಎಲ್ಲವನ್ನೂ ಮಾಧ್ಯಮದವರ ಎದುರು ಹೇಳಿಬಿಟ್ಟಳಾ? ಪ್ರೊಮೋ ನೋಡಿ ಫ್ಯಾನ್ಸ್​ ಫುಲ್​ ಖುಷ್​  

ಬಾಹ್ಯ ಸೌಂದರ್ಯವೇ ಮುಖ್ಯ. ಅದರ ಮುಂದೆ ಉಳಿದೆಲ್ಲವೂ ನಗಣ್ಯ ಎನ್ನುವ ಹೆಚ್ಚಿನ ಜನರ ಮನೋಭಾವನೆಗೆ ತಕ್ಕಂತೆ ಬಿಂಬಿತಗೊಂಡಿದೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್​. ಸ್ಫುರದ್ರೂಪಿ ಅಕ್ಕ, ಅಂತರಂಗದಲ್ಲಿ ಸೌಂದರ್ಯ ಇರುವ ತಂಗಿ. ಮದುವೆಯ ದಿನ ಅಕ್ಕ ಓಡಿ ಹೋದ ಕಾರಣ ಎಲ್ಲರ ಮರ್ಯಾದೆ ಉಳಿಸಲು ನೋಡಲು ಸುಂದರಿಯಲ್ಲದ ತಂಗಿ ದೀಪಾ ಮದುವೆಯಾಗುತ್ತಾಳೆ. ಆದರೆ ಸೌಂದರ್ಯವನ್ನೇ ಮುಂದು ಮಾಡಿಕೊಂಡು ಹೆಜ್ಜೆಹೆಜ್ಜೆಗೂ ಆಕೆಗೆ ಟಾರ್ಚರ್​ ಕೊಡಲಾಗುತ್ತದೆ. ಮಾನಸಿಕವಾಗಿ ಮಾತ್ರವಲ್ಲದೇ ಬಹಿರಂಗವಾಗಿಯೂ ಇವಳಿಗೆ ಟಾರ್ಚರ್​ ನೀಡಲಾಗುತ್ತದೆ. ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಇದು ದೀಪಾಳ ವರ್ಣನೆ. ತೆಳ್ಳಗೆ, ಬೆಳ್ಳಗೆ ಇದ್ದರಷ್ಟೇ ಸೌಂದರ್ಯ ಎನ್ನುವ ಈ ಕಾಲದಲ್ಲಿ, ಬಾಹ್ಯ ಸೌಂದರ್ಯಕ್ಕೇ ಮನಸೋಲುವವರು ಎಲ್ಲರೂ, ಮನದ ಸೌಂದರ್ಯವನ್ನು ನೋಡುವವರೇ ಇಲ್ಲ ಎನ್ನುವುದಕ್ಕೆ ದೀಪಾ ಸಾಕ್ಷಿಯಾಗಿ ನಿಲ್ಲುತ್ತಾಳೆ. ಈ ಸೀರಿಯಲ್​ನಲ್ಲಿ ಕ್ಷಣಕ್ಷಣಕ್ಕೂ ಬಾಡಿಶೇಮಿಂಗ್​ ಅನುಭವಿಸುತ್ತಿದ್ದಾಳೆ ದೀಪಾ. ನೋಡಲು ಚೆನ್ನಾಗಿಲ್ಲ ಎನ್ನುವ ಒಂದೇ ಕಾರಣಕ್ಕೆ ಮನೆಯ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ. 

ಆಕೆಯನ್ನು ಮನೆಯಿಂದ ಹೊರಹಾಕಲು ಸಿಗುವ ಒಂದೇ ಒಂದು ಅವಕಾಶಗಳನ್ನೂ ಮನೆಯ ಯಜಮಾನಿ ಸೌಂದರ್ಯ ತಪ್ಪಿಸಿಕೊಳ್ಳುವುದಿಲ್ಲ. ಆದರೆ ಅದಕ್ಕೆ ಏನು ಮಾಡಿದರೂ ಕಾಲ ಕೂಡಿ ಬಂದಿರಲಿಲ್ಲ. ಎಲ್ಲಾ ರೀತಿಯ ಟಾರ್ಚರ್​ ಕೊಟ್ಟು ನೋಡಾಯಿತು. ದೈಹಿಕವಾಗಿಯೂ ಹಿಂಸಿಸಲಾಯಿತು. ಆದರೆ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ ದೀಪಾ. ಮನೆಯವರಿಗೂ ಈ ವಿಷಯವನ್ನು ತಿಳಿಸಲಿಲ್ಲ. ಮನೆ ಕೆಲಸದಾಕೆ ಮಾಡಿದ ಚಿಕ್ಕ ತಪ್ಪನ್ನು ತನ್ನ ತಲೆಯ ಮೇಲೆ ಹಾಕಿಕೊಂಡಿರೋ ದೀಪಾ, ಇದೀಗ ಮನೆಯಿಂದ ಹೊರಹೋಗುವ ಸಂದರ್ಭ ಬಂದಿದೆ. ಆದರೆ ಆಕೆಗೆ ಮನೆ ಎದುರು ಇರುವ ಔಟ್​ಹೌಸ್​ನಲ್ಲಿ ಉಳಿಯುವ ಏರ್ಪಾಡು ಮಾಡಲಾಗಿದೆ. ನೀವಾಗಿಯೇ ಬಂದು ಕರೆಯುವವರೆಗೂ ಮನೆಗೆ ಬರುವುದಿಲ್ಲ ಎಂದು ಸೌಂದರ್ಯಳಿಗೆ ಭಾಷೆ ಕೊಟ್ಟಿದ್ದಾಳೆ.

ಎಲ್ಲವೂ ಸರಿಯಾಗ್ತಿದೆ ಅನ್ನೋ ಹೊತ್ತಲ್ಲೇ ತುಳಸಿ-ಮಾಧವ್​ ನಡುವೆ ಬಿರುಕು! ಮನೆಬಿಟ್ಟು ಹೋಗೆ ಬಿಟ್ಟಳಲ್ಲಾ!

ದೊಡ್ಡವರ ಮನೆಯ ವಿಷಯ ಇದು. ಪ್ರೆಸ್​ನವರಿಗೆ ಗೊತ್ತಾಗಿದೆ. ದೀಪಾಳನ್ನೂ ಮಾತನಾಡಲು ಕರೆದಿದ್ದಾರೆ. ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಸೌಂದರ್ಯ ಖುದ್ದಾಗಿ ದೀಪಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಪ್ರೆಸ್​ನವರು ಕೇಳುವ ಪ್ರಶ್ನೆಗೆ ದೀಪಾ ಗಂಡ ಚಿರಾಗ್​ ಉತ್ತರ ಕೊಡುತ್ತಿದ್ದಾನೆ.ಕೊನೆಗೆ ಪ್ರೆಸ್​ನವರು ದೀಪಾ ಮಾತನಾಡಬೇಕು ಎಂದಾಗ, ದೀಪಾ, ನನಗೆ ಇಲ್ಲಿ ಸರಿಯಾಗಿ ನೋಡಿಕೊಳ್ತಿಲ್ಲ. ನನ್ನನ್ನು ಈ ಮನೆಯಲ್ಲಿ ತುಂಬಾ ಕೆಟ್ಟದಾಗಿ ನೋಡಿಕೊಳ್ತಿದ್ದಾರೆ. ದಾರಿ ತೋರಿಸಬೇಕಾದ ಸೌಂದರ್ಯ ಅವ್ರಿಗೆ ನನ್ನನ್ನು ಮನೆಯಿಂದ ಯಾವಾಗ ಹೊರಗೆ ಹಾಕಬೇಕು ಎನ್ನೋದೆ ಯೋಚನೆ. ಸದಾ ನನ್ನ ವಿರುದ್ಧ ಹೊಂಚು ಹಾಕ್ತಾನೇ ಇರ್ತಾನೆ. ನನ್ನ ಗಂಡನ ವಿಷಯಕ್ಕೆ ಬರಬೇಕು ಎಂದ್ರೆ, ಅವರಿಗೆ ಹೆಂಡ್ತಿ ಅನ್ನೋ ಭಾವನೆನೇ ಇಲ್ಲ. ಎಲ್ಲರೂ ಸೇರಿ ತುಂಬಾ ಹಿಂಸೆ ಕೊಡುತ್ತಾರೆ ಎಂದು ಸತ್ಯ ಹೇಳಿಬಿಟ್ಟಿದ್ದಾಳೆ!

ಇದರ ಪ್ರೊಮೋ ಬಿಡುಗಡೆಯಾಗಿದೆ. ದೀಪಾ ನಿಜ ನುಡಿದಿದ್ದಕ್ಕೆ ಕೆಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದು ನಿಜವಾಗಲು ಸಾಧ್ಯವೇ? ಖಂಡಿತಾ ಇಲ್ಲ. ಇದು ಸೌಂದರ್ಯಳ ಕನಸು ಎನ್ನುವುದು ಸ್ಪಷ್ಟ. ಇದು ಕನಸೇ ಎಂದು ಹಲವರು ಹೇಳುತ್ತಿದ್ದಾರೆ ಕೂಡ. ತಾನು ಅನುಭವಿಸುತ್ತಿರುವ ಚಿತ್ರಹಿಂಸೆಯನ್ನು ದೀಪಾಳಂತ ಹುಡುಗಿ ಹೇಳಲು ಸಾಧ್ಯವೇ ಇಲ್ಲ, ಹೆಣ್ಣು ಎಲ್ಲವನ್ನೂ ಸಹಿಸಿಕೊಂಡು ಇರುವುದಕ್ಕೇನೇ ಅವಳ ಮೇಲೆ ಇಷ್ಟೊಂದು ದೌರ್ಜನ್ಯ ನಡೆಯುತ್ತಿರುವುದು, ಇದು ಕನಸಾಗದೇ ನನಸಾಬೇಕು, ಇಂಥ ವಿಷಯ ಜಗಜ್ಜಾಹೀರವಾಗಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಇನ್ನು ಏನಾಗುತ್ತದೆಯೋ ಎನ್ನುವುದನ್ನು ಸೀರಿಯಲ್​ ನೋಡಿ ತಿಳಿಯಬೇಕಷ್ಟೇ. 

ಬದಲಾದ ಭಾಗ್ಯ- ಭೂಮಿಕಾ: ಸೀರಿಯಲ್​ ಪ್ರೇಮಿಗಳಲ್ಲಿ ಆಕ್ರೋಶ- ನಿರ್ದೇಶಕರ ವಿರುದ್ಧ ಗರಂ