Asianet Suvarna News Asianet Suvarna News

ಸೀತಾರಾಮ: ಸಿಹಿಗೆ ಮೇಘಶ್ಯಾಮ್ ಯಾರು? ನಿಜ ತಂದೆಯ ಎಂಟ್ರಿಯೇ?

ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರ ಬೋರ್ಡಿಂಗ್ ಸ್ಕೂಲ್ ಸೇರಿದ್ದು, ಅಲ್ಲಿ ಡಾ. ಮೇಘಶ್ಯಾಮ್ ಎಂಟ್ರಿ ಆಗಿದೆ. ಸಿಹಿಗೆ ಮೇಘಶ್ಯಾಮ್ ಯಾರು ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದ್ದು, ಅವರೇ ಸಿಹಿಯ ನಿಜ ತಂದೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

zee kannada seetharama serial sihi father dr meghashyam entry
Author
First Published Aug 20, 2024, 11:32 PM IST | Last Updated Aug 20, 2024, 11:32 PM IST

ಸೀತಾರಾಮ ಸೀರಿಯಲ್ ಎಲ್ಲೋ ಡಲ್ ಹೊಡೀತಿದ್ಯಲ್ಲಪ್ಪಾ ಅಂತ ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಕ್ಯೂ ಗೈ ಎಂಟ್ರಿ ಆಗಿದೆ. ಅದು ಮತ್ಯಾರೂ ಅಲ್ಲ, ಡಾ. ಮೇಘಶ್ಯಾಮ್. ಈ ಪಾತ್ರ ನೋಡಿ ಈ ಸೀರಿಯಲ್ ಫ್ಯಾನ್ಸ್‌ ಮುಂದಿನ ಎಪಿಸೋಡ್‌ಗೆ ಕುರ್ಚಿ ತುದೀಲಿ ಕೂತಿದ್ದಾರೆ. ಈ ಪಾತ್ರ ಎಂಟ್ರಿಯೇ ಸಖತ್ ಇಂಟರೆಸ್ಟಿಂಗ್ ಆಗಿದೆ. ಈ ಪಾತ್ರಕ್ಕೂ ನಮ್ ಸಿಹಿ ಪಾತ್ರಕ್ಕೂ ಏನೋ ಲಿಂಕ್ ಇದೆ. ಆದರೆ ತಾವಂದುಕೊಂಡಿರೋದು ನಿಜಾನೇ ಹೌದಲ್ವಾ ಅನ್ನೋ ಕನ್ಫರ್ಮೇಶನ್‌ಗೆ ಈ ಸೀರಿಯಲ್ ಫ್ಯಾನ್ಸ್ ಕಾಯ್ತಿದ್ದಾರೆ.

ಇನ್ನೊಂದೆಡೆ ಈ ಸೀರಿಯಲ್ ಹೀರೋ ರಾಮ್ ಮತ್ತು ನಾಯಕಿ ಸೀತಾರನ್ನು ಒಂದುಮಾಡಿದ್ದೇ ಪುಟಾಣಿ ಸಿಹಿ. ಆದರೆ ವಿಲನ್ ಭಾರ್ಗವಿ ಕುತಂತ್ರ ಈ ಮುದ್ದು ಬಂಗಾರಿಯನ್ನು ಅಪ್ಪ ಅಮ್ಮನಿಂದ ಬೇರ್ಪಡುವ ಹಾಗೆ ಮಾಡಿದೆ. ಈ ಪುಟಾಣಿ ತಾನೇ ಹಠ ಹಿಡಿದು ಬೋರ್ಡಿಂಗ್ ಸ್ಕೂಲ್ ಸೇರ್ಕೊಂಡಿದ್ದಾಳೆ. ಇದರ ಹಿಂದೆ ಭಾರ್ಗವಿಯ ದುಷ್ಟ ಮನಸ್ಸಿದೆ. ಇನ್ನೊಂದೆಡೆ ತಾತ ಸೂರಿಗೆ ತನ್ನ ಮನೆ ಶ್ರೀರಾಮ್ ಸೀತಾ ಕುಡಿ ಬೇಕು ಎಂಬ ಆಸೆ ಇದೆ. ಆ ಮಗುವನ್ನು ನೋಡಿಯೇ ತಾನು ಕೊನೆಯುಸಿರೆಳೆಯೋದು ಅಂತ ತಾತ ಕೂತಿದ್ದಾರೆ. ಆದರೆ ಸೀತಾಗೆ ಸಿಹಿ ಬಿಟ್ಟು ಮತ್ತೊಂದು ಮಗು ಮಾಡ್ಕೊಳ್ಳೋಕೆ ಸುತಾರಾಂ ಇಷ್ಟ ಇಲ್ಲ.

 ಡಿಕೆಡಿಗೆ ನ್ಯಾಯ ಒದಗಿಸಲು ಸೀತಾರಾಮ ಸೀರಿಯಲ್​ ಹಾಳು ಮಾಡಿಬಿಟ್ರಾ? ಇದೇನಿದು ನೆಟ್ಟಿಗರ ತಕರಾರು?

ಈ ನಡುವೆ ಬೋರ್ಡಿಂಗ್ ಸ್ಕೂಲ್ ಸೇರಿದ್ದಾಳೆ. ಹಾಗಿದ್ರೆ ಮುಂದೆ ಸಿಹಿ ಪಾತ್ರ ‘ಸೀತಾರಾಮ’ ಧಾರಾವಾಹಿಯಲ್ಲಿ ಇರಲ್ವಾ ಎಂಬ ಪ್ರಶ್ನೆ ಎದ್ದಿದೆ. ಸಿಹಿ ಪಾತ್ರಧಾರಿ ಬಾಲನಟಿ ರೀತು ಸಿಂಗ್‌ಗೆ ಈಗ 6 ವರ್ಷದ ಹರೆಯ. ಈ ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಅವಳು ಶಿವರಾಜ್‌ಕುಮಾರ್, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ, ಚಿನ್ನಿ ಪ್ರಕಾಶ್ ಸಾರಥ್ಯದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ’ ಸ್ಪರ್ಧಿಯೂ ಹೌದು. ಈ ಶೋಗೆ ಸಿಕ್ಕಾಪಟ್ಟೆ ರಿಹರ್ಸಲ್ ಮಾಡಬೇಕಾಗುತ್ತದೆ. ಏಕಕಾಲಕ್ಕೆ ಧಾರಾವಾಹಿ ಶೂಟಿಂಗ್, ರಿಯಾಲಿಟಿ ಶೋ ಮಾಡುವುದು, ರಿಯಲ್ ಲೈಫ್‌ನಲ್ಲಿ ಶಾಲೆಗೆ ಹೋಗುವುದು ತುಂಬ ಚಾಲೆಂಜಿಂಗ್. ಸಿಹಿ ಬೋರ್ಡಿಂಗ್ ಸ್ಕೂಲ್ ಇಶ್ಯೂ ಬರೋದಕ್ಕೆ ಇದೇ ಕಾರಣವಾ ಎಂಬ ಮಾತು ಕೇಳಿ ಬರುತ್ತಿದೆ.

ಆದರೆ ಸದ್ಯ ಬೋರ್ಡಿಂಗ್ ಸ್ಕೂಲ್ ಸ್ಟೋರಿ ಓಪನ್‌ ಅಪ್ ಆಗಿದೆ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಡಾ ಮೇಘಶ್ಯಾಮ್ ಬಂದಿದ್ದಾನೆ. ಮೇಘಶ್ಯಾಮ್ ಡಾಕ್ಟರ್ ಆಗಿದ್ದು, ಆ ಶಾಲೆಯ ಮಕ್ಕಳನ್ನು ನೋಡಿಕೊಳ್ಳಲು ಬಂದಿದ್ದನು. ಆಗ ಅವನಿಗೆ ಸಿಹಿ ಪರಿಚಯ ಆಗುತ್ತದೆ. ಆದರೆ ಈತನ ಎಪಿಯರೆನ್ಸ್ ನೋಡಿದ ಕೂಡಲೇ ಸೀರಿಯಲ್ ಎಕ್ಸ್‌ಪರ್ಟ್‌ಗಳ ಗೆಸ್‌ವರ್ಕ್ ಶುರುವಾಗಿದೆ. ಅವರಿಗೆ ಅವರ ಗೆಸ್‌ ಬಗ್ಗೆ ಏನೋ ನಿಜನೇ ಇರುತ್ತೆ ಎಂಬ ಕಾನ್ಫಿಡೆನ್ಸ್ ಇದೆ. ಇದರ ಜೊತೆಗೆ ಇದಕ್ಕೊಂದು ಅಧಿಕೃತ ಸೀಲ್ ಯಾವಾಗ ಬೀಳುತ್ತೆ ಅಂತ ಅವರು ಕಾಯ್ತಿದ್ದಾರೆ.

 ಡಿಕೆಡಿಗೆ ನ್ಯಾಯ ಒದಗಿಸಲು ಸೀತಾರಾಮ ಸೀರಿಯಲ್​ ಹಾಳು ಮಾಡಿಬಿಟ್ರಾ? ಇದೇನಿದು ನೆಟ್ಟಿಗರ ತಕರಾರು?

ಮತ್ತೇನಿಲ್ಲ, ಈತನೇ ಸಿಹಿಯ ರಿಯಲ್ ತಂದೆ ಅಂತಿದ್ದಾರೆ ಈ ಸೀರಿಯಲ್ ಫ್ಯಾನ್ಸ್. ಈ ಸೀರಿಯಲ್ ಪ್ರೋಮೋದಲ್ಲಿ ಒಬ್ಬ ಕ್ಯೂಟ್ ಗೈ ಎಂಟ್ರಿ ಆಗಿದೆ. ಈ ಡಾ ಮೇಘಶ್ಯಾಮ್ ಸಿಹಿ ತಂದೆಯೇ ಇರ್ಬೇಕು ಅಂತ ಆಲ್‌ ಮೋಸ್ಟ್ ಎಲ್ಲರೂ ಗೆಸ್‌ ಮಾಡಿದ್ದಾರೆ. ಬಹುಶಃ ಶಾಲಿನಿ-ಮೇಘಶ್ಯಾಮ್ ಅವರಿಗೆ ಸಿಹಿ ಮಗಳಾಗಿರಬಹುದು. ಮಗು ಮೇಲೆ ಮಮಕಾರ ಇಲ್ಲದ ಶಾಲಿನಿ ಅದನ್ನು ಅನಂತಲಕ್ಷ್ಮೀಗೆ ಹೇಳಿ ಅನಾಥಾಶ್ರಮಕ್ಕೆ ನೀಡಿರಬಹುದು. ಆ ವೈದ್ಯರಿಂದಲೇ ಸೀತಾ ಸಿಹಿಯನ್ನು ಪಡೆದು ತನ್ನ ಮಗಳು ಅಂತ ಸಾಕುತ್ತಿರಬಹುದು. ಒಟ್ಟಿನಲ್ಲಿ ಸಿಹಿ ಜನ್ಮ ರಹಸ್ಯ ಯಾವಾಗ ಬಯಲಾಗತ್ತೋ ಏನೋ ಎಂದು ವೀಕ್ಷಕರು ಕಾಯ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios