ಡಿಕೆಡಿಗೆ ನ್ಯಾಯ ಒದಗಿಸಲು ಸೀತಾರಾಮ ಸೀರಿಯಲ್ ಹಾಳು ಮಾಡಿಬಿಟ್ರಾ? ಇದೇನಿದು ನೆಟ್ಟಿಗರ ತಕರಾರು?
ಡಾನ್ಸ್ ಕರ್ನಾಟಕ ಡಾನ್ಸ್ಗಾಗಿ ಸೀತಾರಾಮದಿಂದ ಸಿಹಿಯ ಪಾತ್ರಕ್ಕೆ ಕುತ್ತು ತರಲಾಯ್ತಾ? ಸೀತಾರಾಮ ಸೀರಿಯಲ್ ಫ್ಯಾನ್ಸ್ ಹೇಳ್ತಿರೋದೇನು?
ಸೀತಾ ಮತ್ತು ರಾಮರ ಮಿಲನವಾಗುವುದನ್ನೇ ಕಾಯುತ್ತಿದ್ದ ಪ್ರೇಕ್ಷಕರೇ ಈಗ ಯಾಕೋ ಈ ಸೀರಿಯಲ್ ವಿರುದ್ಧ ತಿರುಗಿಬಿದ್ದಿದ್ದಾರೆ. ಸೀತಾ-ರಾಮರ ಕಲ್ಯಾಣ ನಿರ್ವಿಘ್ನವಾಗಿ ನಡೆದಿದೆ. ಅಲ್ಲಿಯವರೆಗೂ ಪ್ರೇಕ್ಷಕರು ಸಕತ್ ಉತ್ಸಾಹದಲ್ಲಿದುದು ಸೀರಿಯಲ್ ಪ್ರೊಮೋ ಬಿಡುಗಡೆಯಾದ ತಕ್ಷಣ, ಬರುವ ಕಮೆಂಟ್ಸ್ಗಳೇ ಸಾಕ್ಷಿಯಾಗಿದ್ದವು. ಅಷ್ಟಕ್ಕೂ ಈ ಸೀರಿಯಲ್ ತುಂಬಾ ಇಷ್ಟವಾಗಲು ಕಾರಣವಾದದ್ದು ಸಿಹಿಯ ಕ್ಯಾರೆಕ್ಟರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಐದಾರು ವರ್ಷದ ಪುಟಾಣಿಯ ನಟನೆ ನೋಡುವುದಕ್ಕಾಗಿಯೇ ವೀಕ್ಷಕರು ಕಾದು ಕುಳಿತಿರುತ್ತಿದ್ದರು. ಒಂದು ಹಂತದಲ್ಲಿ ಬಾಲಕಿಯನ್ನು ಅತಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕ್ಯಾತೆ ತೆಗೆದಿದ್ದರೂ ಆಕೆಗಾಗಿಯೇ ಸೀರಿಯಲ್ ನೋಡುವ ದೊಡ್ಡ ವರ್ಗವೇ ಇತ್ತು. ಅದರೆ ಈಗ ಸೀರಿಯಲ್ ಹಳ್ಳ ಹಿಡಿಯುತ್ತಿದೆ ಎನ್ನುವುದು ಅಭಿಮಾನಿಗಳ ಅಭಿಮತ.
ಭಾರ್ಗವಿ ಚಿಕ್ಕಿಯ ಕುತಂತ್ರಕ್ಕೆ ಸಿಹಿ ಬೋರ್ಡಿಂಗ್ ಸ್ಕೂಲ್ ಸೇರಿದ್ದಾಳೆ. ಬೋರ್ಡಿಂಗ್ ಸ್ಕೂಲ್ ಅಂದ್ರೇನು ಎಂಬುದರ ಅರಿವೂ ಇಲ್ಲದ ಚಿಕ್ಕ ಹುಡುಗಿಯ ತಲೆಗೆ ಅದನ್ನು ತುಂಬಿದವರು ಯಾರು ಎಂಬ ಬಗ್ಗೆ ಸ್ವಲ್ಪವೂ ಯೋಚನೆ ಮಾಡದ ಸೀತಾ ಮತ್ತು ರಾಮ ಆಕೆಯನ್ನು ಬಿಟ್ಟುಕೊಟ್ಟಿದ್ದಾರೆ. ಒಂದಿಷ್ಟು ಎಪಿಸೋಡ್ಗಳಲ್ಲಿ ಇದೇ ವಿಷಯವಾಗಿ ಚರ್ಚೆ ನಡೆದಂತೆ ತೋರುತ್ತಿದ್ದರೂ ಮಗಳೇ ಸರ್ವಸ್ವ ಎಂದುಕೊಂಡಿರೋ ಸೀತಾ ಮಗಳನ್ನು ಬಿಟ್ಟುಕೊಟ್ಟಿರುವುದು ಪ್ರೇಕ್ಷಕರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಸಿಹಿ ಸೀತಾಳ ಮಗಳು ಹೌದೋ ಅಲ್ವೋ ಗೊತ್ತಿಲ್ಲ. ಆದರೆ ತಾತ ರಾಮನಿಂದ ಒಂದು ಮಗು ಬೇಕು ಎಂದಾಗ ಹೈಡ್ರಾಮಾ ಮಾಡಿದ್ದ ಸೀತಾ ಸಿಹಿಯೇ ಎಲ್ಲಾ ಎಂದಿದ್ದಳು. ಮತ್ತೆ ಮಗು ಬೇಡ ಅಂದಿದ್ದಳು. ಅದರೆ ಇದೀಗ ಸಿಹಿಯ ಮನಸ್ಸನ್ನು ಬದಲಾಯಿಸಲು ವಿಫಲವಾಗಿದ್ದಾಳೆ.
ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್
ಸಿಹಿಯ ಕ್ಯಾರೆಕ್ಟರ್ ಇಲ್ಲದಂತೆ ಮಾಡಲು ಕಾರಣ, ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ಸಿಹಿ ಪಾತ್ರಧಾರಿಯಾಗಿರುವ ರೀತು ಸಿಂಗ್ ಭಾಗವಹಿಸುತ್ತಿರುವುದೇ ಕಾರಣ ಎನ್ನುವುದು ಅಭಿಮಾನಿಗಳ ಅಭಿಮತ. ಡಿಕೆಡಿಯಲ್ಲಿ ಡಾನ್ಸ್ ಕಲಿಯಲು ಅಲ್ಲಿಯೇ ಇರುವುದು ಅನಿವಾರ್ಯ. ಇದು ದೊಡ್ಡವರ ಜೊತೆಗಿನ ಸ್ಪರ್ಧೆ ಆಗಿರುವ ಕಾರಣ, ತುಂಬಾ ತರಬೇತಿ ಬೇಕಾಗುತ್ತದೆ. ಜೊತೆಗೆ ರೀತು ಶಾಲೆಗೂ ಹೋಗಬೇಕಿದೆ. ಸೀತಾರಾಮ ಸೀರಿಯಲ್ ಹಾಗೂ ಡಿಕೆಡಿಯಲ್ಲಿ ಏಕಕಾಲದಲ್ಲಿ ಶೂಟಿಂಗ್ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸೀತಾರಾಮ ಸೀರಿಯಲ್ ಅನ್ನೇ ಹಾಳು ಮಾಡಲಾಗಿದೆ ಎನ್ನುವ ಆಕ್ರೋಶ ನೆಟ್ಟಿಗರದ್ದು!
ಒಂದು ಕ್ಯಾರೆಕ್ಟರ್, ಒಂದು ಸೀರಿಯಲ್ನಲ್ಲಿ ಇರುವಾಗ ಮತ್ತೆ ಅವರನ್ನು ಇನ್ನೊಂದು ಷೋಗೆ ಕರೆದುಕೊಂಡು ಯಾಕೆ ಹೋಗಬೇಕು, ಒಂದು ಷೋ ಟಿಆರ್ಪಿಗೋಸ್ಕರ ಒಳ್ಳೆಯ ಸೀರಿಯಲ್ ಹಾಳು ಮಾಡುವುದು ಎಷ್ಟು ಸರಿ ಎಂದೆಲ್ಲಾ ಒಂದೇ ಸಮನೆ ಸೀತಾರಾಮ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್ ಮೂಲಕ ಕಿಡಿ ಕಾರುತ್ತಿದ್ದಾರೆ. ಸೀತಾರಾಮ ಸೀರಿಯಲ್ ಈಗ ಯಾವುದೇ ಕುತೂಹಲ ಉಳಿಸಿಕೊಳ್ಳಲಿಲ್ಲ. ಭಾರ್ಗವಿ ಚಿಕ್ಕಮ್ಮನ ಕುತಂತ್ರ ಮನೆಯವರಿಗೆ ಗೊತ್ತಾಗುವುದು ಒಂದೇ ಇರುವುದು, ಜೊತೆಗೆ ಸಿಹಿ ಸೀತಾಳ ಮಗಳು ಹೌದೋ ಅಲ್ಲವೋ ಎನ್ನುವುದು ಬಿಟ್ಟರೆ ಏನೂ ಸ್ವಾರಸ್ಯ ಇಲ್ಲ. ಒಂದೊಳ್ಳೆ ಧಾರಾವಾಹಿಯನ್ನು ಹೀಗೆ ಹಾಳು ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ. ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ಗೆ ಕಳಿಸಿರುವ ಹಿಂದೆ ನಿರ್ದೇಶಕರ ಉದ್ದೇಶ ಏನಿದ್ಯೋ ಗೊತ್ತಿಲ್ಲ, ಆದರೆ ಸದ್ಯ ನೆಟ್ಟಿಗರು ಮಾತ್ರ ಕಿಡಿಕಿಡಿ ಆಗಿರೋದಂತೂ ದಿಟ.
ಡಿಕೆಡಿ ವೇದಿಕೆಯಲ್ಲಿ ಜಸ್ಕರಣ್ ಸಿಂಗ್ ‘ದ್ವಾಪರ‘ ಮೋಡಿ! ಕನ್ನಡ ಪ್ರೀತಿಗೆ, ಇಂಪಾದ ದನಿಗೆ ಮರುಳಾದ ಪ್ರೇಕ್ಷಕರು