ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಛಾಯಾ ಸಿಂಗ್, ಶಿವರಾಜ್ ಕುಮಾರ್ ಅವರ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಶಿವಣ್ಣನಿಗೆ ರಾಖಿ ಕಟ್ಟಿದ ಛಾಯಾ ಸಿಂಗ್, ಶಿವಣ್ಣನ ಸರಳತೆ ಬಗ್ಗೆ ಹೃದಯಸ್ಪರ್ಶಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ನಟಿ ಛಾಯಾಸಿಂಗ್.‌ ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. ಸದ್ಯ ಕಿರುತೆರೆಯಲ್ಲೂ ಸದ್ದು ಮಾಡುತ್ತಿದ್ದಾರೆ. ರಜಪೂತ್‌ ಕುಟುಂಬಕ್ಕೆ ಸೇರಿದ ನಟಿ ಛಾಯಾ ಸಿಂಗ್‌ ಮೂಲತಃ ಉತ್ತರ ಪ್ರದೇಶದವರು. ಆದರೆ ಇವರು ಬೆಳೆದಿದ್ದು, ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ. ನಟಿ ಛಾಯಾ ಸಿಂಗ್‌ ತಂದೆ ಗೋಪಾಲ್‌ ಸಿಂಗ್‌. ತಾಯಿ ಚಮನ್‌ ಲತಾ. ಇವರ ಪತಿಯೂ ಎಲ್ಲರಿಗೂ ಚಿರಪರಿಚಿತರು. ಅವರು ಬೇರೆ ಯಾರು ಅಲ್ಲ. ಖ್ಯಾತ ತಮಿಳು ನಟ ಕೃಷ್ಣ. ನಟಿ ಛಾಯಾ ಸಿಂಗ್‌ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿ ಚಿತ್ರರಂಗದಲ್ಲಿ ದೊಡ್ಡ ಖ್ಯಾತಿ ಗಳಿಸಿದ್ದಾರೆ..

ಸದ್ಯ ಛಾಯಾ ಸಿಂಗ್‌ ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ಸದಾಶಿವ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಅದ್ಭುತ ನಟನೆಗೆ ಸೀರಿಯಲ್‌ ಪ್ರಿಯರು ಫಿದಾ ಆಗಿದ್ದಾರೆ.ಇದೀಗ ಛಾಯಾ ಸಿಂಗ್ ಶಿವಣ್ಣನಿಗೆ ರಾಖಿ ಕಟ್ಟಿದ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದರಲ್ಲಿ ಛಾಯಾ ಸಿಂಗ್ ಶಿವಣ್ಣನ ಬಗ್ಗೆ ಹೇಳಿರೋ ಮಾತಿಗೆ ಸಾಕಷ್ಟು ಜನ ಕಾಮೆಂಟ್ಸ್‌ ಮಾಡಿದ್ದಾರೆ. ಇನ್ನು ಶಿವರಾಜ್‌ ಕುಮಾರ್ ಒಂಥರಾ ಸ್ಯಾಂಡಲ್‌ವುಡ್‌ನ ಅಣ್ಣನ ಥರ ಇರೋರು. ಅಣ್ಣನ ಅಕ್ಕರೆ, ಪ್ರೀತಿಗೆ ಅನೇಕ ಸಿನಿಮಾಗಳಲ್ಲಿ ಜೀವ ತುಂಬಿದವರು.

 ಡಿಕೆಡಿ ವೇದಿಕೆಯಲ್ಲಿ ಜಸ್ಕರಣ್‌ ಸಿಂಗ್‌ ‘ದ್ವಾಪರ‘ ಮೋಡಿ! ಕನ್ನಡ ಪ್ರೀತಿಗೆ, ಇಂಪಾದ ದನಿಗೆ ಮರುಳಾದ ಪ್ರೇಕ್ಷಕರು

ಸೂಪರ್‌ ಡೂಪರ್‌ ಹಿಟ್ ಆಗಿರೋ 'ತವರಿಗೆ ಬಾ ತಂಗಿ' ಸಿನಿಮಾದಲ್ಲಿ ಅಣ್ಣನಾಗಿ ಅವರ ಅಮೋಘ ಅಭಿನಯವನ್ನು ಕನ್ನಡಿಗರು ಮರೆಯೋದುಂಟೇ. 'ಮುತ್ತಣ್ಣ ಪೀಪಿ ಊದಿದ.. ನನ್ನ ತಂಗಿಯ ಮದುವೆ' ಅನ್ನೋ ಹಾಡು ಎಲ್ಲ ಅಣ್ಣ ತಂಗಿ ಪ್ರೀತಿಗೆ ಸಾಕ್ಷಿಯಾಗಿ ನಿಲ್ಲೋ ಹಾಡು ಅಂತಲೇ ಹೇಳಬಹುದು. ಒಂಥರಾ 'ಅಣ್ಣತನ'ಕ್ಕೆ ಬ್ರಾಂಡ್‌ ಅಂಬಾಸಿಡರ್ ಆಗಿರೋ ಶಿವರಾಜ್‌ಕುಮಾರ್ ಅವರನ್ನು ಹೆಸರಿಡಿದು ಕರೆಯೋದೇ ಕಡಿಮೆ. ಎಲ್ಲರೂ 'ಶಿವಣ್ಣ' ಅಂತಲೇ ಹೇಳೋದು.

ಇನ್ನು ಶಿವಣ್ಣ ದಕ್ಷಿಣ ಭಾರತದ ಬ್ಯುಸಿಯೆಸ್ಟ್ ನಟ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅಷ್ಟು ಮಾತ್ರ ಅಲ್ಲ, ಇನ್ನೊಂದು ಮಜಾ ಸಂಗತಿ ಅಂದರೆ ಅವರ ಸಿನಿಮಾದಲ್ಲಿ ಅವರ ಜೊತೆ ಡ್ಯುಯೆಟ್ ಹಾಡೋ ಹೀರೋಯಿನ್‌ಗಳೂ ಆಫ್‌ಸ್ಕ್ರೀನ್‌ನಲ್ಲಿ ಅವರನ್ನು 'ಶಿವಣ್ಣ' ಅಂತಲೇ ಕರಿಯೋದುಂಟು. ಇಂಥಾ ಟೈಮಲ್ಲಿ ಕಿಚ್ಚ ಸುದೀಪ್ ಮೊದಲಾದವರು ಶಿವಣ್ಣನ ಕಾಲೆಳೆಯೋದನ್ನು ನೋಡೋದೂ ಮಜಾನೇ.

ಮಗಳಿಂದ ರಾಖಿ ಕಟ್ಟಿಸಿಕೊಂಡ ನಟ, ನಿರೂಪಕ ಜೈ ಭಾನುಶಾಲಿ... ಟೀಕೆಗಳಿಗೆ ಡೋಂಟ್ ಕೇರ್ ಎಂದ ನಟ

ಈಗ ವಿಷಯಕ್ಕೆ ಬರಾಣ. ಜೀ ಕನ್ನಡದಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಸಖತ್ ಪಾಪ್ಯುಲರ್ ಆಗ್ತಿದೆ. ಇದಕ್ಕೆ ಜಡ್ಜ್ ಆಗಿ ಶಿವಣ್ಣ ಇದ್ದಾರೆ. ಈ ಶೋಗೆ 'ಅಮೃತಧಾರೆ' ಸಿನಿಮಾ ಖ್ಯಾತಿಯ ಛಾಯಾ ಸಿಂಗ್ ಬಂದಿದ್ದಾರೆ. ಆಕೆ ಈ ಟೈಮಲ್ಲಿ ಶಿವಣ್ಣನ ಕೈಗೆ ರಾಖಿ ಕಟ್ಟಿದ್ದಾರೆ. ಅವರ ಪಾಲಿಗಿದು ಬಹಳ ಎಮೋಶನಲ್ ಮೊಮೆಂಟ್. ಹೀಗಾಗಿ ರಾಖಿ ಕಟ್ಟುವಾಗ ಕೈ ನಡುಗಿದೆ. ಈ ವೇಳೆ ಛಾಯಾ ಸಿಂಗ್ ಬಹಳ ಭಾವುಕವಾಗಿ ಶಿವಣ್ಣನ ಸಿಂಪ್ಲಿಸಿಟಿಗೆ ಒಂದು ಉದಾಹರಣೆ ಕೊಟ್ಟಿದ್ದಾರೆ. 'ಆಗ ಮಫ್ತಿ ಸಿನಿಮಾ ಶೂಟ್ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆ. ನಡುವೆ ಶಿವಣ್ಣನ ಫೋನ್. ಎಲ್ಲಿದ್ದೀಯಮ್ಮಾ ಅಂತ ಕೇಳಿದ್ರು. ಬೆಂಗಳೂರಿಗೆ ಹೊರಡ್ತಿದ್ದೀನಿಣ್ಣಾ ಅಂದೆ. ಏನಿಲ್ಲ, ಇವತ್ತು ರಾಖಿ ಹಬ್ಬ. ಅದಕ್ಕೆ ವಿಶ್ ಮಾಡಾಣ ಅಂತ ಕಾಲ್ ಮಾಡಿದೆ ಅಂದರು. ನಂಗೆ ಆ ಕ್ಷಣ ಬಹಳ ಅಮೂಲ್ಯ ಅನಿಸಿತು' ಅಂದಿದ್ದಾರೆ ಛಾಯಾ.