ಸೀತಾರಾಮ ಧಾರಾವಾಹಿಯಲ್ಲಿ ಡಾ. ಶ್ಯಾಮ್ ಪಾತ್ರಧಾರಿ ಅರ್ಜುನ್ ಅದಿದೇವ್, ಪಾತ್ರದಲ್ಲಿನ ನಕಾರಾತ್ಮಕ ಬೆಳವಣಿಗೆಯಿಂದ ಹೊರನಡೆದಿದ್ದಾರೆ. ಮಗುವಿನ ಮೇಲಿನ ಅತಿಯಾದ ಪ್ರೀತಿಯ ಚಿತ್ರಣ ತಮ್ಮ ನಿಜ ಜೀವನದ ಮಗುವಿನ ಮೇಲಿನ ಪ್ರೀತಿಗೆ ವಿರುದ್ಧವಾಗಿತ್ತು. ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿರುವ ಅವರು, ಪ್ರೇಕ್ಷಕರ ಮೆಚ್ಚುಗೆ ಗಳಿಸಲು ಸಿದ್ಧತೆಯೊಂದಿಗೆ ನಟಿಸುವ ಆಶಯ ವ್ಯಕ್ತಪಡಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಡಾಕ್ಟರ್ ಶ್ಯಾಮ್ ಪಾತ್ರದಲ್ಲಿ ಅರ್ಜುನ್ ಅದಿದೇವ್ ಕಾಣಿಸಿಕೊಂಡಿದ್ದರು. ಸಿಹಿ ಪುಟ್ಟ ನಿಜವಾದ ತಂದೆ ಸಿಕ್ಕ ಎಪಿಸೋಡ್‌ಗಳು ನಿಜಕ್ಕೂ ಹೆಚ್ಚು ಟಿಆರ್‌ಪಿ ಪಡೆಯಿತ್ತು. ಆದರೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದು ಶ್ಯಾಮ್ ತಂದೆಯಾಗಿ ಕಾಣಿಸಿಕೊಂಡ ಪೀರಿಯಡ್ ತುಂಬಾ ಬೇಗ ಮುಗಿಯಿತ್ತು. ಹಲವರು ಶ್ಯಾಮ್ ಪಾತ್ರ ಮುಗಿದಿದೆ ಅಂದುಕೊಂಡರು ಇನ್ನೂ ಕೆಲವರು ಶ್ಯಾಮ್ ಸೀರಿಯಲ್‌ನಿಂದ ಹೊರ ನಡೆದರು ಎನ್ನಲಾಗಿತ್ತು. ನಿಜಕ್ಕೂ ಡಾಕ್ಟರ್ ಶ್ಯಾಮ್ ಪಾತ್ರಕ್ಕೆ ಏನ್ ಆಯ್ತು ಎಂದು ಅರ್ಜುನ್ ಹಂಚಿಕೊಂಡಿದ್ದಾರೆ. 

'ಶ್ಯಾಮ್ ಪಾತ್ರ ತುಂಬಾ ಇಷ್ಟ ಆಗಿತ್ತು. ಪಾತ್ರವನ್ನು ಪ್ರೀತಿ ಮಾಡಬೇಕು ಹಾಗೆ ಜನ ಕೂಡ ಶ್ಯಾಮ್ ಪಾತ್ರವನ್ನು ತುಂಬಾ ಇಷ್ಟ ಪಡುತ್ತಿದ್ದರು. ಆರಂಭದಲ್ಲಿ ಜನ ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದರು ಆಮೇಲೆ ಕ್ಯಾರೆಕ್ಟರ್ ಬೇರೆ ರೀತಿಯೇ ಬದಲಾಗಿತ್ತು. ನಾನು ಸಿಹಿಯನ್ನು ಇಷ್ಟ ಪಡುತ್ತಿದ್ದ ರೀತಿಯಲ್ಲಿ ಜನರು ಇಷ್ಟ ಪಟ್ಟರು ಆದರೆ ಬೇಕು ಬೇಕು ಎಂದು ಇಷ್ಟ ಪಡುತ್ತಿದ್ದ ಘಟನೆಯನ್ನು ರಿಸೀವ್‌ ಮಾಡಿಕೊಳ್ಳಲು ಇಷ್ಟ ಪಡಲಿಲ್ಲ. ಶ್ಯಾಮ್‌ ನೆಗೆಟಿವ್ ಕ್ಯಾರೆಕ್ಟರ್ ಅಲ್ಲ. ನನಗೂ ಒಬ್ಬ ಮಗನಿದ್ದಾನೆ. ನನ್ನ ಮಗನಿಗೆ ಒಂದೂವರೆ ವರ್ಷ ಆಗಿದೆ. ಮಗನಿಗೆ ಇಷ್ಟ ಆಗುವುದನ್ನು ನೋಡೋದಕ್ಕೆ ಮಾಡುವುದಕ್ಕೆ ಇಷ್ಟ ಪಡುತ್ತೀನಿ. ಈಗ ಯಾರೋ ಬಂದು ಎತ್ಕೊಳ್ತಾರೆ ನಮ್ಮ ಜೊತೆಗೆ ಬರಲ್ಲ ಅಂದಾಗ ಅತ್ತುಕೊಂಡು ಬರೋದನ್ನು ನೋಡೋಕೆ ನಂಗು ಇಷ್ಟ ಆಗಲ್ಲ. ಹೀಗಾಗಿ ಬಿಟ್ಟು ಬಂದಿದ್ದೀನಿ' ಎಂದು ಖಾಸಗಿ ಕನ್ನಡ ವೆಬ್‌ ಪೋರ್ಟಲ್‌ನಲ್ಲಿ ಸುದ್ದಿಯಾಗಿದೆ. 

ಗಯ್ಯಾಳಿ ಹೆಂಗಸಾಗಿ ಕಾಣಿಸೋ ಅನುಪಲ್ಲವಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು ಹೀಗೆ!

'ಮುಂದೊಂದು ದಿನ ನಾನು ಟಾಪ್‌ನಲ್ಲಿ ನಿಂತುಕೊಳ್ಳುತ್ತೀನಿ ಅದ್ಭುತ ಸಬ್ಜೆಕ್ಟ್‌ಗಳು ಸಿಗಲಿದೆ ಅನ್ನೋ ನಂಬಿಕೆ ಇದೆ. ಒಳ್ಳೆ ಪಾತ್ರಗಳು ಸಿಗುವ ನಿರೀಕ್ಷೆ ಕೂಡ ಇದೆ. ಅದಕ್ಕೋಸ್ಕರವೇ ನಾನು ತುಂಬಾ ವರ್ಕ್‌ ಮಾಡುತ್ತಿದ್ದೀನಿ. ಖಂಡಿತಾ ಆ ಗುರಿಯನ್ನು ರೀಚ್ ಮಾಡುತ್ತೀನಿ. ಜನರ ಮುಂದೆ ತಯಾರಿ ಮಾಡಿಕೊಂಡೇ ನಟಿಸಬೇಕು. ಅವರು ಆಗ ತುಂಬಾ ಪ್ರೀತಿ ತೋರಿಸುತ್ತಾರೆ. ಇಲ್ಲಂದ್ರೆ ಹೇಗಿರ್ತೀವೋ ಹಾಗೆ ಬಂದಾಗ ಇವನದ್ದು ಇಷ್ಟೇ ಅಂದುಕೊಂಡು ಬಿಡುತ್ತಾರೆ.ಪ್ರತಿ ಪರ್ಫಾರ್ಮೆನ್ಸ್‌ನಲ್ಲೂ ಡೆವಲ್ಪ್‌ ಆಗಬೇಕು' ಎಂದು ಅರ್ಜುನ್ ಹೇಳಿದ್ದಾರೆ. 

ಕಿಚ್ಚ ಸುದೀಪ್‌ ಬದಲು ಹುಚ್ಚ ಸುದೀಪ್ ಎಂದುಬಿಟ್ಟ ಕೆ.ಮಂಜು; ಪ್ಯಾಚಪ್ ಮಾಡಿದ್ದು ಹೇಗೆ ನೋಡಿ....