ಕಿಚ್ಚ ಸುದೀಪ್ ಬದಲು ಹುಚ್ಚ ಸುದೀಪ್ ಎಂದುಬಿಟ್ಟ ಕೆ.ಮಂಜು; ಪ್ಯಾಚಪ್ ಮಾಡಿದ್ದು ಹೇಗೆ ನೋಡಿ....

Synopsis
ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕೆ ಮಂಜು ಮಾಡಿದ ಎಡವಟ್ಟು ಸಖತ್ ವೈರಲ್. ಸುದೀಪ್ ಪ್ರತಿಕ್ರಿಯೆ ನೀಡಿದ್ದು ಹೀಗೆ ನೋಡಿ.........
ಶ್ರೇಯಸ್ ಕೆ.ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ನಟಿಸಿರುವ 'ವಿಷ್ಣು ಪ್ರಿಯಾ' ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿದ್ದರು. ಸುದೀಪ್‌ರನ್ನು ಉದ್ದೇಶಿಸಿ ಮಾತನಾಡುವಾಗ ಕಿಚ್ಚ ಅನ್ನೋ ಬದಲು ಹುಚ್ಚ ಎಂದುಬಿಟ್ಟರು. ಸುದೀಪ್‌ರನ್ನು ಈ ರೀತಿ ಕರೆದಿರುವುದಕ್ಕ ಅಭಿಮಾನಿಗಳು ಗರಂ ಆಗಿದ್ದಾರೆ. ಆದರೆ ಸುದೀಪ್ ಮಾತ್ರ ಸಿಕ್ಕಾಪಟ್ಟೆ ಕೂಲ್ ಆಗಿ ಉತ್ತರಿಸಿದ್ದಾರೆ.
'ನಿಜಕ್ಕೂ ಥ್ಯಾಂಕ್ಸ್ ನಮ್ಮ ಹುಚ್ಚ ಸುದೀಪ್ ಅವರಿಗೆ. ಕಿಚ್ಚ ಸುದೀಪ್ ಅವರು. ಯಾಕೆ ಹುಚ್ಚ ಅಂದೆ ಅಂದರೆ ಈ ಸಿನಿಮಾ ನೋಡಿದಾಗ ಹುಚ್ಚ ಸಿನಿಮಾ ನೆನಪಿಗೆ ಬರುತ್ತದೆ. ನಾವೇ ರೈಟ್ಸ್ ತಂದು ಮಾಡುವುದಕ್ಕೆ ಹೋಗಿದ್ವಿ. ಆ ಸಿನಿಮಾದ ಉಸಿರೇ ಉಸಿರೇ ಆ ಹಾಡನ ಫೀಲಿಂಗ್ ಈ ಸಿನಿಮಾ ಹಾಡು ನೋಡಿದಾಗ ಬಂತು. ಹುಚ್ಚ ಸಿನಿಮಾ ತರ ಯಶಸ್ವಿ ಅಗಲಿ ಅಂತ ಕೇಳಿಕೊಂಡೆ. ಬೇರೆ ಏನೂ ಇಲ್ಲ' ಎಂದು ವೇದಿಕೆ ಮೇಲೆ ಕೆ. ಮಂಜು ಮಾತನಾಡಿದ್ದರು.
ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!
ಕಿಚ್ಚನ ಹುಚ್ಚ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆ.ಮಂಜು ಮಾತನಾಡಿದ ನಂತರ ಸುದೀಪ್ ಮಾತನಾಡಬೇಕಿತ್ತು. ಆಗ 'ಕೆ.ಮಂಜು ಕಡೆಯಿಂದ ಏನೋ ಒಂದು ಮಿಸ್ಟೇಕ್ ಆಯ್ತು. ಸ್ಟೇಜ್ ಮೇಲೆ ಚೆನ್ನಾಗಿ ಪ್ಯಾಚಪ್ ಮಾಡಿಬಿಟ್ಟರು. ಅಷ್ಟೇ ಅಲ್ಲ ಅದರ ಮೇಲೆ ಸ್ವಲ್ಪ ಹೊಗಳಿ ಹುಚ್ಚ ಯಾಕೆ ಅಂತ ಹೇಳಿ ಚೆನ್ನಾಗಿ ಪ್ಯಾಚಪ್ ಮಾಡಿದ್ರಿ' ಎಂದು ಸುದೀಪ್ ನಗುತ್ತಲೇ ನೇರವಾಗಿ ಉತ್ತರಿಸಿದ್ದರು.
ಫೇಮಸ್ ಆಗ್ತಿದ್ದಂತೆ ಕೂದಲು ತುಂಡು ಮಾಡಿಸಿಕೊಂಡ ಭವ್ಯಾ ಗೌಡ ಸಹೋದರಿ ದಿವ್ಯಾ ; ಫೋಟೋ ವೈರಲ್
'50ನೇ ಸಿನಿಮಾ ಒಂದು ಸಂಸ್ಥೆಯಿಂದ ಬಂದಿರೋದು ಜೋಕ್ ಅಲ್ಲ. ಚಿಕ್ಕ ಸಿನಿಮಾ ಆಗಿರಬಹುದು ದೊಡ್ಡ ಸಿನಿಮಾ ಆಗಿರಬಹುದು....ಅತಿ ದೊಡ್ಡದಾಗಿರಬಹುದು...ಟೋಟಲ್ ಆಗಿ ಒಂದು 50 ಸಿನಿಮಾಗಳು ಒಂದು ಸಂಸ್ಥೆಯಿಂದ ಬರುತ್ತಿದೆ ಅಂದರೆ ನಿಜಕ್ಕೂ ಗ್ರೇಟ್. ನನಗೆ ನಿಜಕ್ಕೂ ಗೊತ್ತಿರಲಿಲ್ಲ. ನನಗೆ ಖುಷಿಯಾಗುತ್ತಿದೆ. ನಿಮ್ಮ ಮೇಲೆ ಹೆಮ್ಮೆ ಅನಿಸುತ್ತಿದೆ. ಇದು ಚಿಕ್ಕ ಕೊಡುಗೆ ಅಲ್ಲವೇ ಅಲ್ಲ' ಎಂದ ಸುದೀಪ್ ಹೇಳಿದ್ದಾರೆ.
ಸೆಲೆಬ್ರಿಟಿಗಳ ಜೊತೆ ಡಾ. ಬ್ರೋ ಫೋಟೋ ವೈರಲ್; ನೀವು ಕೂಡ ಸ್ಟಾರ್ ಎಂದ ನೆಟ್ಟಿಗರು