Asianet Suvarna News Asianet Suvarna News

ಕೊನೆಗೂ ಸತ್ಯ ಸೀರಿಯಲ್ ಎಂಡ್: ನಿನ್ ಕೂದ್ಲು ಬೆಳೀಲೇ ಇಲ್ವಲ್ಲ ತಾಯಿ ಎಂದ ಫ್ಯಾನ್ಸ್

Zee Kannadaದಲ್ಲಿ ಪ್ರಸಾರವಾಗೋ ಸತ್ಯ ಸೀರಿಯಲ್‌ಗೆ ತೆರೆ ಬಿದ್ದಿದೆ. ಸತ್ಯ ಪಾತ್ರಕ್ಕೆ ವೀಕ್ಷಕರು ಕೊನೆಗೂ ನಿನ್ ಕೂದ್ಲು ಬೆಳೀಲೇ ಇಲ್ವಲ್ಲ ತಾಯಿ ಅಂತ ವ್ಯಂಗ್ಯವಾಗಿ ಕಾಮೆಂಟ್ ಮಾಡ್ತಿದ್ದಾರೆ.

 

zee kannada sathya serial acted gauthami jadhav cocluded bni
Author
First Published Aug 12, 2024, 3:01 PM IST | Last Updated Aug 12, 2024, 3:01 PM IST

ಒಂದಲ್ಲ ಎರಡಲ್ಲ ಸುದೀರ್ಘ ನಾಲ್ಕು ವರ್ಷಗಳ ಕಾಲ ಪ್ರಸಾರವಾದ ಸತ್ಯ ಸೀರಿಯಲ್‌ ಫೈನಲೀ ಕೊನೆಗೊಂಡಿದೆ. ಶನಿವಾರ ಕೊನೇ ಸಂಚಿಕೆ ಪ್ರಸಾರವಾಗಿ, ಸುಖಾಂತ್ಯದ ಮೂಲಕ ಧಾರಾವಾಹಿ ಮುಕ್ತಾಯವಾಗಿದೆ. ಗೌತಮಿ ಜಾಧವ್ ಮತ್ತು ಸಾಗರ್ ಬಿಳಿಗೌಡ ಮುಖ್ಯಭೂಮಿಕೆಯಲ್ಲಿದ್ದ ಬಹುತಾರಾಗಣದ ಈ ಸೀರಿಯಲ್‌ಅನ್ನು ಸ್ವಪ್ನ ಕೃಷ್ಣ ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದರು. ಸೀರಿಯಲ್‌ ಹೀಗೆ ಕೊನೆಯಾಗುತ್ತಿದ್ದಂತೆ, ಜೀ ಕನ್ನಡ ವಾಹಿನಿ ಸುದೀರ್ಘ ಪತ್ರದ ಮೂಲಕ ಧನ್ಯವಾದ ತಿಳಿಸಿದೆ.

'ಯಾವನೋ ಅಲ್ಲ ಕಣೋ, ಯಾವಳೋ ಅಂತ, ಡಿಸೆಂಬರ್ 7, 2020ರಂದು ಕಿರುತೆರೆಗೆ ಕಾಲಿಟ್ಟು ಕರ್ನಾಟಕದಾದ್ಯಂತ ಮನೆಮಾತಾದ ಧಾರಾವಾಹಿ 'ಸತ್ಯ'. ಹೆಣ್ಣಂದ್ರೆ ಹೀಗೇ ಇರಬೇಕು ಅನ್ನೋ ಕಟ್ಟುಪಾಡುಗಳನ್ನು ಮೀರಿ, ಹೆಣ್ಣು ಅಬಲೆಯಲ್ಲ, ಸಬಲೆ ಅಂತ ತೋರಿಸಿಕೊಟ್ಟಿದ್ದು 'ಸತ್ಯ'. ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ಸಮಾಜದ ಮುಂದೆ ತಲೆ ಎತ್ತಿ ಬದುಕುತ್ತಿರೋ ಅದೆಷ್ಟೋ ಹೆಣ್ಣು ಮಕ್ಕಳನ್ನು ಪ್ರತಿನಿಧಿಸಿದ ಪಾತ್ರ ಇದು. ಕಷ್ಟ-ನಷ್ಟ, ನೋವು-ನಲಿವುಗಳ ನಡುವೆಯೂ ದೃಢ ಮನಸಿನಿಂದ ಗೆಲ್ಲೋದು ಸಾಧ್ಯ ಅಂತ ತೋರಿಸಿದ ಕಥೆ ಇದು. ತಂದೆಯನ್ನು ಕಳೆದುಕೊಂಡು ಮೆಕ್ಯಾನಿಕ್ ಕೆಲಸ ಮಾಡೋ ಹೆಣ್ಣುಮಗಳೊಬ್ಬಳು, ಶ್ರೀಮಂತ ಕುಟುಂಬದ ಕಾರ್ತಿಕ್‌ನ ಕೈ ಹಿಡಿದು ಪೊಲೀಸ್ ಅಧಿಕಾರಿ ಆದ ಪಯಣ ಎಲ್ಲರಿಗೂ ಸ್ಫೂರ್ತಿ. ಅತ್ತೆ-ಸೊಸೆ ಲವ್ ಸ್ಟೋರಿ ಮೂಲಕ ಮನುಷ್ಯ ಸಂಬಂಧದ ಹೊಸ ಬಾಗಿಲು ತೆರೆದಿದ್ದೂ ಈ ಧಾರಾವಾಹಿ. ಸತ್ಯಾಳ ಸಾಹಸ ಸನ್ನಿವೇಶಗಳ ಮೂಲಕ ಮನರಂಜನೆಗೆ ಹೊಸ ಆಯಾಮ ಕೊಟ್ಟು, ಕಥೆಯ ಜೊತೆಗೆ ಹಲವಾರು ಸಾಮಾಜಿಕ ವಿಷಯಗಳ ಕುರಿತು ಹೇಳುತ್ತಾ ಬಂದು, ನಿಮ್ಮೆಲ್ಲರ ಪ್ರೀತಿ ಗಳಿಸಿದ್ದ 'ಸತ್ಯ' ಧಾರಾವಾಹಿ ಪ್ರಯಾಣ ಇಂದು ಕೊನೆಗೊಳ್ಳುತ್ತಿದೆ. ವಾಹಿನಿಯ ಈ ಪ್ರಯತ್ನವನ್ನು ಇಷ್ಟು ದಿನ ಹರಸಿ, ಹಾರೈಸಿದ ಕರ್ನಾಟಕದ ಜನತೆಗೆ ತುಂಬು ಹೃದಯದ ಧನ್ಯವಾದಗಳು' ಎಂಬ ಪತ್ರದ ಮೂಲಕ ಜೀ ಕನ್ನಡದ ವೀಕ್ಷಕರಿಗೆ ಥ್ಯಾಂಕ್ಯೂ ಹೇಳಿದೆ.

 ಸತ್ಯ ಸೀರಿಯಲ್​ ವಿಲನ್​ಗಳು ಒಟ್ಟಿಗೇ ಒಳ್ಳೆಯವರಾದ ಖುಷಿಗೆ ಭರ್ಜರಿ ಡಾನ್ಸ್​! ಗಿರಿಜಮ್ಮಾ ಸಾಥ್​

ಆದರೆ ಈ ಸೀರಿಯಲ್‌ ಅನ್ನು ಮೊದಲು ಮನಸಾರೆ ಬೈಯ್ಯುತ್ತಿದ್ದವರೆಲ್ಲ ಈಗ 'ಛೇ ಮುಗೀತಾ?' ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಈ ಸೀರಿಯಲ್ ಎಂಡ್ ಆಗ್ತಿದ್ದ ಹಾಗೆ ವೀಕ್ಷಕರು ಮಾಡ್ತಿರೋ ಕಾಮೆಂಟ್ಸ್ ಸಖತ್ ಮಜವಾಗಿದೆ. ಹೆಚ್ಚಿನವರು ಸತ್ಯನ ಕೂದಲಿನ ಬಗ್ಗೆ ಕಾಮೆಂಟ್ ಮಾಡಿದ್ದು ವಿಶೇಷ. 'ಕೊನೆಗೂ ನಿನ್ನ ಕೂದ್ಲೇ ಬೆಳೀಲಿಲ್ವಲ್ಲ ತಾಯೀ..' ಅಂತ ಒಬ್ಬ ವೀಕ್ಷಕಿ ಕಾಮೆಂಟ್ ಮಾಡಿದರೆ, ಮತ್ತೊಬ್ರು, 'ಸತ್ಯ ಫೈರ್. ಆದರೆ ಅಷ್ಟು ಚೆಂದ ಇರೋ ಕೂದಲು ತೋರಿಸದೇ ಬರೀ ವಿಗ್‌ನಲ್ಲೇ ಸೀರಿಯಲ್ ಮುಗಿಸಿಬಿಟ್ಟಿದ್ದೀರಿ' ಅಂತ ಅಂತ ಮತ್ತೊಬ್ಬರು ಹೇಳಿದ್ದಾರೆ. 'ಶೆಡ್‌ನಲ್ಲೇ ಕೋಟೆ ಫ್ಯಾಮಿಲಿ ಒಂದಾಯ್ತಲ್ಲಾ..' ಅನ್ನೋ ಡಾರ್ಕ್ ಹ್ಯೂಮರ್ ಬಂದಿದೆ.

ಅಫ್‌ಕೋರ್ಸ್ ಸೀರಿಯಲ್ ಕೊನೆಯಲ್ಲಿ ಕೋಟೆಮನೆ ಒಂದಾಗಿದೆ. ಸೋ ಎಲ್ಲ ಸೀರಿಯಲ್‌ನಂತೇ ಇದೂ ಹ್ಯಾಪಿ ಎಂಡಿಂಗ್. 'ಸಿಂಧೂರ' ಅನ್ನೋ ಸೀರಿಯಲ್‌ನ ರಿಮೇಕ್ ಆಗಿದ್ದ 'ಸತ್ಯಾ' ಧಾರಾವಾಹಿ ಒಂದಲ್ಲ ಎರಡಲ್ಲ ಒಟ್ಟು ೬ ಬಾಷೆಗೆ ರಿಮೇಕ್ ಆಗಿರೋದು ವಿಶೇಷ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಹೃದಯ ಸಮಸ್ಯೆ ಇರೋರು ನೋಡ್ಬಾರ್ದಾ? ಏನಾಗ್ತಿದೆ ಇಲ್ಲಿ!

ಗೌತಮಿ ಜಾಧವ್ ಈ ಸೀರಿಯಲ್‌ನಲ್ಲಿ ಸತ್ಯ ಪಾತ್ರವನ್ನು ನಿರ್ವಹಿಸಿ ಬೆನ್ನುತಟ್ಟಿಸಿಕೊಂಡಿದ್ದಾರೆ. ಅನೇಕ ಸ್ಟಂಟ್‌ಗಳು, ಬೈಕ್‌ ಓಡಿಸುತ್ತಿದ್ದದ್ದು, ಮೆಕ್ಯಾನಿಕ್ ಕೆಲಸ ಮಾಡ್ತಿದ್ದದ್ದು ಇತ್ಯಾದಿ ಹೆಣ್ಣುಮಕ್ಕಳು ಸಾಮಾನ್ಯವಾಗಿ ಮಾಡದೇ ಇರೋ ಕೆಲಸಗಳಿಂದಲೇ ಈ ಪಾತ್ರ ಗುರುತಿಸಿಕೊಂಡಿತ್ತು. ಬಹಳ ಸ್ಟ್ರಾಂಗ್ ಪಾತ್ರ ಅಂತ ಬೆನ್ನು ತಟ್ಟಿಸಿಕೊಂಡಿತ್ತು. ಸದ್ಯ ಈ ಸೀರಿಯಲ್ ಎಂಡ್ ಆಗಿದೆ. 'ಅಣ್ಣಯ್ಯ' ಎಂಟ್ರಿ ಕೊಡುವಾಗ 'ಸತ್ಯ' ಗುಡ್‌ಬೈ ಹೇಳಿದ್ದಾಳೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios