Asianet Suvarna News Asianet Suvarna News

ಸತ್ಯ ಸೀರಿಯಲ್​ ವಿಲನ್​ಗಳು ಒಟ್ಟಿಗೇ ಒಳ್ಳೆಯವರಾದ ಖುಷಿಗೆ ಭರ್ಜರಿ ಡಾನ್ಸ್​! ಗಿರಿಜಮ್ಮಾ ಸಾಥ್​

ಸತ್ಯ ಸೀರಿಯಲ್​  ವಿಲನ್​ಗಳಾದ ದಿವ್ಯಾ ಮತ್ತು ಕೀರ್ತನಾ ಭರ್ಜರಿ ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಗಿರಿಜಮ್ಮಾ ಸಾಥ್​ ನೀಡಿದ್ದಾರೆ. 
 

Satya serial villains Divya and Keertana have done reels Girijamma has supported this suc
Author
First Published Aug 11, 2024, 2:24 PM IST | Last Updated Aug 11, 2024, 2:24 PM IST

ಕಳೆದ ಮೂರೂವರೆ ವರ್ಷಗಳಿಂದ ಎಲ್ಲರ ಮನ ಗೆದ್ದ ಜೀ ಕನ್ನಡದ ಸತ್ಯ ಸೀರಿಯಲ್​  ಕೊನೆಗೂ ಮುಕ್ತಾಯ ಕಂಡಿದೆ. ಇಬ್ಬರು ವಿಲ್​ನಗಳಾದ ಸತ್ಯ ಅಕ್ಕ ದಿವ್ಯಾ ಹಾಗೂ ಸತ್ಯಳ ನಾದಿನಿ ಕೀರ್ತನಾ ಕ್ಲೈಮ್ಯಾಕ್ಸ್​ನಲ್ಲಿ ಒಳ್ಳೆಯವಾಗಿದ್ದಾರೆ. ಕೊನೆ ಕ್ಷಣದವರೆಗೂ ಕೀರ್ತನಾ ತನ್ನ ನಿಜವಾದ ಬಣ್ಣವನ್ನು ತೋರಿಸುತ್ತಲೇ ಬಂದಿದ್ದಳು. ಅಂತಿಮ ಎಪಿಸೋಡ್​ನಲ್ಲಿ ಅವರು ಒಳ್ಳೆಯವಳಾಗುವ ಮೂಲಕ ಸೀರಿಯಲ್​  ಮುಕ್ತಾಯಗೊಳಿಸಲಾಗಿದೆ. ಕೆಲವು ಸೀರಿಯಲ್​ಗಳನ್ನು ಗಡಿಬಿಡಿಯಲ್ಲಿ ಅಂತಿಮಗೊಳಿಸಲಾಗುತ್ತಿತ್ತು. ಆದರೆ ಸತ್ಯ ಸೀರಿಯಲ್​ ಅನ್ನು ಸಮಾಧಾನಪೂರ್ವಕವಾಗಿ ಎಲ್ಲರಿಗೂ ನ್ಯಾಯ ಒದಗಿಸಿ ಸಂಪೂರ್ಣಗೊಳಿಸಿರುವ ನೆಮ್ಮದಿ ವೀಕ್ಷಕರಿಗೆ ಇದೆ.  ಸತ್ಯಾಳ ಮಾವ, ಊರ್ಮಿಯ ಗಂಡ ಲಕ್ಷ್ಮಣ, ಆತನ ಎರಡನೆಯ ಪತ್ನಿ ಹಾಗೂ ರೀತುವಿನ ಸ್ನೇಹಿತ ಸೇರಿದಂತೆ ಕೆಲವು ಕಲಾವಿದರು ಕೊನೆಯ ಸಂಚಿಕೆಯಲ್ಲಿ ಮಿಸ್​ ಆಗಿದ್ದಾರೆ. ಆದರೆ ವಿಶೇಷವೆಂದರೆ ಈ ಸೀರಿಯಲ್​ನಲ್ಲಿ ಹೈಲೈಟ್​ ಎನಿಸಿದರುವ ಕೀರ್ತನಾ ಪಾತ್ರಧಾರಿ ಬಿಟ್ಟರೆ ಬಹುತೇಕ ಎಲ್ಲರೂ ಮೊದಲಿನಿಂದಲೂ ಅವರೇ ಇದ್ದರು. ಮೇನ್​ ಕ್ಯಾರೆಕ್ಟರ್​ಗಳು ಅವರೇ ಇರುವುದೇ ಸಮಾಧಾನ ಎನ್ನುತ್ತಿದ್ದಾರೆ ವೀಕ್ಷಕರು. ಜೊತೆಗೆ ಎಲ್ಲರೂ ಒಳ್ಳೆಯವರಾಗಿ ಮಾಡಿ ಸೀರಿಯಲ್ ​ಮುಗಿಸಿರುವುದಕ್ಕೂ ಸಮಾಧಾನ ತಂದಿದೆ. 

ಇದೀಗ ಸೀರಿಯಲ್​ ಮುಗಿದ ಖುಷಿಗೆ ಇಬ್ಬರು ವಿಲನ್​ಗಳಾಗಿರುವ ಕೀರ್ತನಾ ಮತ್ತು ದಿವ್ಯಾ ಭರ್ಜರಿ ರೀಲ್ಸ್ ಮಾಡಿದ್ದಾರೆ. ಇದಕ್ಕೆ ಗಿರಿಜಮ್ಮಾ ಸ್ಟೆಪ್​  ಹಾಕುವ ಮೂಲಕ ನೆಟ್ಟಿಗರಿಂದ ಭೇಷ್​ ಭೇಷ್​ ಎನಿಸಿಕೊಂಡಿದ್ದಾರೆ.  ದಿವ್ಯಾಳ ಪಾತ್ರವನ್ನು ವಿಭಿನ್ನ ಶೇಡ್​ಗಳಲ್ಲಿ ತೋರಿಸುತ್ತಲೇ ಎಲ್ಲರ ಮನಸ್ಸನ್ನು ಗೆದ್ದವರು ಪ್ರಿಯಾಂಕಾ ಶಿವಣ್ಣ.  ಇವರು ತೆಲುಗು ಸೀರಿಯಲ್​ಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡಿಗರಿಗೆ ಪರಿಚಯವಾದದ್ದು ಅಗ್ನಿಸಾಕ್ಷಿಯ ವಿಲನ್​ ಪ್ರಿಯಾಂಕಾ ಮೂಲಕ. ಮೊದಲು ಈ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಅರ್ಧಕ್ಕೆ ಬಿಟ್ಟಾಗ ಆ ಅವಕಾಶ ಪ್ರಿಯಾಂಕಾ ಅವರಿಗೆ ಒದಗಿ ಬಂತು. ಈ ಸೀರಿಯಲ್​ನಲ್ಲಿ ನೆಗೆಟಿವ್​ ರೋಲ್​ ಮೂಲಕ ಎಲ್ಲರ ಮನೆ ಮಾತಾದರು ಪ್ರಿಯಾಂಕಾ.  ಇದೀಗ ಸತ್ಯ ಸೀರಿಯಲ್​ನಲ್ಲಿಯೂ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಿಯಾಂಕಾ ಅವರು ಅಗ್ನಿಸಾಕ್ಷಿಯಲ್ಲಿ ವಿಲನ್​ ಮಾಡುತ್ತಿದ್ದ ಸಮಯದಲ್ಲಿ ಇವರ ವಿರುದ್ಧ ಸಿಕ್ಕಾಪಟ್ಟೆ ಜನ ಬೈಯುತ್ತಿದ್ದುದನ್ನು ನೆನಪಿಸಿಕೊಂಡಿದ್ದರು. 

ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್​ ಮಾಡ್ಬೇಕು... ಏನದು? ಸೀತಾಳ ಪ್ರಶ್ನೆಗೆ ನಿಮ್ಗೆ ಗೊತ್ತಾ ಉತ್ತರ?

ಇನ್ನು ಗಿರಿಜಮ್ಮಾ ಆಗಿರೋ ಗಿರಿಜಾ ಲೋಕೇಶ್​ ಕುರಿತು ಎಲ್ಲರಿಗೂ ತಿಳಿದದ್ದೇ. ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಕಲಾತ್ಮಕ ನಟಿ ಮತ್ತು ರಂಗಭೂಮಿ ಕಲಾವಿದೆ.  ನಟ ಲೋಕೇಶ್ ರವರ ಧ ಪತ್ನಿ. ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇವರ ಮಗ. ಪುತ್ರಿ ಪೂಜಾ ಲೋಕೇಶ್ ಕೂಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಕ್ರಿಯವಾಗಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. `ಕ್ರೇಜಿ ಕರ್ನಲ್',`ಮುತ್ತಿನ ತೋರಣ' ಸೇರಿದಂತೆ ಅನೇಕ ಸೀರಿಯಲ್​ಗಳಲ್ಲಿ ಭಾಗವಹಿಸಿದ್ದಾರೆ.  `ಭುಜಂಗಯ್ಯನ ದಶಾವತಾರಗಳು' ಮತ್ತು `ಸಿದ್ಲಿಂಗು' ಚಿತ್ರಗಳಿಗೆ ಗಿರಿಜಾ  ಲೋಕೇಶ್​ ಅವರಿಗೆ ಕರ್ನಾಟಕ ರಾಜ್ಯದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತಂದುಕೊಟ್ಟಿವೆ. 

ಭರತನಾಟ್ಯದಲ್ಲಿ ಪರಿಣಿತಿ ಪಡೆದ ಗಿರಿಜಾ ಲೋಕೇಶ್​ ಅವರು, ಹದಿನಾಲ್ಕನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿದರು. ಇವರು ನಟಿಸಿದ ಮೊದಲ ನಾಟಕ `ಸಾಮ್ರಾಟ್ ಅಶೋಕ್ ಕುಮಾರ್'. ಈ ಸಮಯದಲ್ಲೇ ನಟ ಲೋಕೇಶ್ ಅವರ ಪರಿಚಯವಾಯಿತು. ಹಲವು ಭಾಷೆಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ಮೊದಲ ನಾಟಕ `ಮಾಡಿ ಮಡಿದವರು' ಎಂಬ ಸಾಮಾಜಿಕ ನಾಟಕ. ಸಾಕಷ್ಟು ನಾಟಕಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದ ಲೋಕೇಶರ ಜೊತೆ ಪ್ರೇಮಾಂಕುರವಾಗಿ ನಂತರ ಈ ಜೋಡಿ ಮದುವೆಯಾಯಿತು. ಮದುವೆಯಾದ ರಾತ್ರಿಯೇ `ಕಾಕನಕೋಟೆ' ನಾಟಕದಲ್ಲಿ ನಟಿಸಬೇಕಿತ್ತು. ಆ ದಿನ ನಾಟಕದಲ್ಲಿ ತಂದೆ ಮಗಳಾಗಿ ನಟಿಸಿದ್ದು ಈ ಜೋಡಿಯ ಕಲಾಪರತೆಗೆ ಹಿಡಿದ ಸಾಕ್ಷಿ.

ಸತ್ಯ ಸೀರಿಯಲ್​ ಮುಗಿದ ಬೆನ್ನಲ್ಲೇ ರಿಯಲ್​ ಪತಿ ಜೊತೆ ಗೌತಮಿ ಜಾಲಿ ಮೂಡ್​- ವಿಡಿಯೋ ವೈರಲ್​

Latest Videos
Follow Us:
Download App:
  • android
  • ios