Actor Ramesh Aravind Daughter Niharika in Zee Kannada Saregamapa 2025: ಈ ಬಾರಿ ʼಸರಿಗಮಪʼ ವೇದಿಕೆಯಲ್ಲಿ  ನಟ ರಮೇಶ್‌ ಅರವಿಂದ್‌ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ 40 ವರ್ಷಗಳನ್ನು ಪೂರೈಸಿರುವ ರಮೇಶ್‌ ಅರವಿಂದ್‌ ಅವರ ಸಾಧನೆಯನ್ನು ಸರಿಗಮಪ ವೇದಿಕೆ ಸಂಭ್ರಮಿಸಿದೆ. ಈ ಸಂದರ್ಭದಲ್ಲಿ ಅವರ ಮಗಳು ಕೂಡ ಇದ್ದರು. 

ನಟ ರಮೇಶ್‌ ಅರವಿಂದ್‌ ಅವರು ಸದಾ ವೇದಿಕೆ ಮೇಲೆ ಸ್ಫೂರ್ತಿದಾಯಕ ಮಾತುಗಳನ್ನಾಡಿ ಎಲ್ಲರಿಗೂ ಧೈರ್ಯ ತುಂಬುವ ಕೆಲಸ ಮಾಡ್ತಾರೆ. ಆದರೆ ಈ ಬಾರಿ ಅವರು ʼಸರಿಗಮಪʼ ವೇದಿಕೆಯಲ್ಲಿ ಭಾವುಕರಾಗಿದ್ದಾರೆ.

ತಂದೆಗೋಸ್ಕರ ಕ್ಯಾಮರಾ ಮುಂದೆ ಬಂದ ಮಗಳು!
ಸರಿಗಮಪ ವೇದಿಕೆಯಲ್ಲಿ ರಮೇಶ್‌ ಅರವಿಂದ್‌ ಅವರ ʼಮಗಳು ಬೆಳ್ಮುಗಿಲುʼ ಎನ್ನುವ ಹಾಡನ್ನು ಸ್ಪರ್ಧಿಯೋರ್ವರು ಹಾಡಿದರು. ಅದೇ ಟೈಮ್‌ಗೆ ರಮೇಶ್‌ ಅರವಿಂದ್‌ರ ಮಗಳು ಕೂಡ ಬಂದರು. ಮಗಳನ್ನು ನೋಡಿ ರಮೇಶ್‌ ಸರ್ಪ್ರೈಸ್‌ ಆದರು. ನಿಹಾರಿಕಾ ಅವರು ಚಿತ್ರರಂದಿಂದ ದೂರ ಇರೋದಲ್ಲದೆ, ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೋಸ್ಕರ ಮಗಳು ಕ್ಯಾಮರಾ ಮುಂದೆ ಬಂದಿದ್ದು ರಮೇಶ್‌ ಅವರಿಗೆ ಅಚ್ಚರಿ ಉಂಟು ಮಾಡಿತ್ತು.

ಸರಿಗಮಪ ವೇದಿಕೆಯಲ್ಲಿ ರಮೇಶ್‌ ಅರವಿಂದ್‌ ಮಗಳು ನಿಹಾರಿಕಾ; ಅದೊಂದು ಕಾರಣಕ್ಕೆ ಕಣ್ಣೀರು ಹಾಕಿದ ತಂದೆ!

ರಮೇಶ್‌ ಅರವಿಂದ್‌ ಏನಂದ್ರು? 
ಮಗಳ ಬಗ್ಗೆ ಮಾತನಾಡಿದ ರಮೇಶ್‌ ಅರವಿಂದ್‌ ಅವರು, “ಇಷ್ಟು ವರ್ಷಗಳಲ್ಲಿ ನಿಹಾರಿಕಾ ವಿಚಾರದಲ್ಲಿ ಒಂದು ಕೆಟ್ಟ ಗಳಿಗೆಯೂ ಇಲ್ಲ” ಎಂದು ಹೇಳಿದ್ದರು. ಆಗ ನಿಹಾರಿಕಾ ಮಾತನಾಡಿ, “ಯಾಕೆ ಅಂತ ಹೇಳಿ, ಅವರು ಆ ರೀತಿ ನಮ್ಮನ್ನು ಬೆಳೆಸಿದ್ದಾರೆ” ಎಂದು ಹೇಳಿದ್ದಾರೆ. 

“ನಟ, ನಿರ್ದೇಶಕರಾಗಿ ನೋಡಿದ್ದೀರಾ. ನಮಗೆ ಅವರು ಅಪ್ಪ. ನಾವು ಅದೃಷ್ಟವಂತರು” ಎಂದು ನಿಹಾರಿಕಾ ಹೇಳಿದ್ದಾರೆ. ಮಗಳ ಮಾತು ಕೇಳಿ ರಮೇಶ್‌ ಅರವಿಂದ್‌ ಭಾವುಕರಾಗಿದ್ದಾರೆ. 

ತಮ್ಮ ರಾಣಾ ಮದುವೆ ಮುಗಿಸಿ ಭರ್ಜರಿ ಪಾರ್ಟಿ ಮಾಡಿದ Crazy Queen Rakshitha: ಮೇಘನಾ ರಾಜ್‌ ಭರ್ಜರಿ ಡ್ಯಾನ್ಸ್!‌

ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ 
ರಮೇಶ್‌ ಅರವಿಂದ್‌ ಅವರು 40 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಈ ಖುಷಿಯನ್ನು ಸರಿಗಮಪ ಸಂಗೀತ ವೇದಿಕೆ ಸಂಭ್ರಮಿಸಿದೆ. ಅಷ್ಟೇ ಅಲ್ಲದೆ ಸರಿಗಮಪ with ರಮೇಶ್ ಅರವಿಂದ್ ಎಂದೂ ಕೂಡ ಹೆಸರಿಟ್ಟು ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ರಮೇಶ್‌ ಅರವಿಂದ್‌ ಜೊತೆಗೆ ನಟಿಸಿದ ಕಲಾವಿದರು ಕೂಡ ಆಗಮಿಸಿದ್ದರು. ರಮೇಶ್‌ ಅರವಿಂದ್‌ ಅವರು ಇಲ್ಲಿಯವರೆಗೆ ನಟ, ನಿರ್ದೇಶಕರಾಗಿ, ನಿರೂಪಕರಾಗಿ, ವಾಘ್ಮಿಯಾಗಿಯೂ ಹೆಸರು ಮಾಡಿದ್ದಾರೆ. ಇನ್ನು ಈ ಸಂಗೀತ ವೇದಿಕೆಯಲ್ಲಿ ʼಅಮೆರಿಕ ಅಮೆರಿಕʼ ಸಿನಿಮಾ ಹೀರೋಯಿನ್ ಹೇಮಾ ಪ್ರಭಾತ್ ಕೂಡ ಆಗಮಿಸಿ, ರಮೇಶ್‌ ಜೊತೆ ಡ್ಯಾನ್ಸ್‌ ಮಾಡಿದ್ದಾರೆ, ಆ ಚಿತ್ರದ ಫೇಮಸ್‌ ಡೈಲಾಗ್‌ ಹೇಳಿದ್ದಾರೆ. ಇನ್ನು ʼಚಂದ್ರಮುಖಿ ಪ್ರಾಣಸಖಿʼ ಸಿನಿಮಾದಲ್ಲಿ ನಟಿಸಿದ್ದ ಭಾವನಾ ರಾಮಯ್ಯ ಕೂಡ ರಮೇಶ್‌ ಅರವಿಂದ್‌ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ಇವರೆಲ್ಲರೂ ರಮೇಶ್‌ ಜೊತೆಗಿನ ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಗೀತರಚನೆಕಾರ ಕೆ ಕಲ್ಯಾಣ್‌ ಅವರು ಸಂಗೀತ ವೇದಿಕೆಗೆ ಆಗಮಿಸಿ, ʼಸ್ಯಾಂಡಲ್‌ವುಡ್‌ ತ್ಯಾಗರಾಜ್‌ʼ ಗುಣಗಾನ ಮಾಡಿದ್ದಾರೆ. 

'Bigg Boss Kannada' ನಿರೂಪಣೆಗೆ ʼಗೋಲ್ಡನ್‌ ಸ್ಟಾರ್‌ʼ ಗಣೇಶ್, ರಮೇಶ್‌ ಅರವಿಂದ್‌ ಅವ್ರನ್ನ ಕಾಂಟ್ಯಾಕ್ಟ್‌ ಮಾಡಲಾಗಿದ್ಯಾ?

ಪುಸ್ತಕಗಳನ್ನು ಬರೆದಿರುವ ನಟ ಇವರು! 
1986ರಲ್ಲಿ ಸುಂದರ ಸ್ವಪ್ನಗಳುʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟ ರಮೇಶ್‌ ಅರವಿಂದ್‌ ಅವರು ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕರಾಗಿ ಕೆಲ ಸಿನಿಮಾಗಳನ್ನು ಅವರು ನಿರ್ದೇಶನ ಕೂಡ ಮಾಡಿದ್ದರು. ಇನ್ನು ಬರಹಗಾರರಾಗಿರೋ ಅವರು, ʼಪ್ರೀತಿಯಿಂದ ರಮೇಶ್ʼ‌, ʼಆರ್ಟ್‌ ಆಫ್‌ ಸಕ್ಸಸ್‌ʼ, ʼಮಾಸದ ಮಾತು ವಿಥ್‌ ರಮೇಶ್‌ʼ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಕಿರುತೆರೆ, ಹಿರಿತೆರೆ, ಸಭೆ-ಸಮಾರಂಭ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಇನ್ನು ರಮೇಶ್‌ ಅರವಿಂದ್‌ ಅವರು ಮ್ಯಾನೇಜರ್‌ ನೇಮಕ ಮಾಡಿಕೊಂಡಿಲ್ಲ. ಅವರ ಎಲ್ಲ ಕೆಲಸಗಳನ್ನು ಪತ್ನಿ ಅರ್ಚನಾ ಅವರೇ ನೋಡಿಕೊಳ್ತಾರಂತೆ.

View post on Instagram