ನಟಿ ʼಕ್ರೇಜಿ ಕ್ವೀನ್ʼ ರಕ್ಷಿತಾ ಪ್ರೇಮ್ ಸಹೋದರ ರಾಣಾ-ರಕ್ಷಿತಾ ಮದುವೆಯಾಗಿದೆ. ಈ ಮದುವೆ ಬಳಿಕ ಭರ್ಜರಿ ಪಾರ್ಟಿ ಮಾಡಲಾಗಿದೆ.
ನಟಿ ʼಕ್ರೇಜಿ ಕ್ವೀನ್ʼ ರಕ್ಷಿತಾ ಪ್ರೇಮ್ ಸಹೋದರ ನಟ ರಾಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ದೂರಿ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಈ ಮದುವೆ ಬಳಿಕ ಗ್ರ್ಯಾಂಡ್ ಆಗಿ ಆರತಕ್ಷತೆ ಮಾಡಲಾಗಿತ್ತು. ಈಗ ಪಾರ್ಟಿ ಕೂಡ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಮೇಘನಾ ರಾಜ್, ರಕ್ಷಿತಾ ಪ್ರೇಮ್ ಅವರು ಡ್ಯಾನ್ಸ್ ಮಾಡಿದ್ದಾರೆ.
ಭರ್ಜರಿ ಡ್ಯಾನ್ಸ್!
ಕನ್ನಡ ಸಿನಿಮಾಗಳ ಕೆಲ ಹಾಡುಗಳಿಗೆ ರಕ್ಷಿತಾ ಪ್ರೇಮ್, ಮೇಘನಾ ರಾಜ್, ಪ್ರಮೀಳಾ ಜೋಶಾಯ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೊರಿಯೋಗ್ರಾಫರ್ಸ್ ಎಲ್ಲರೂ ಸೇರಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ರಾಣಾ ಅವರು ಪತ್ನಿ ರಕ್ಷಿತಾ ಜೊತೆಗೆ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ರಕ್ಷಿತಾ ಪ್ರೇಮ್ ಅವರ ತಾಯಿ ಕೂಡ ಡ್ಯಾನ್ಸ್ ಮಾಡಿದ್ದಾರೆ.
'ನಾನು ಸಾಯೋವರೆಗೂ ಇಲ್ಲೇ ಇರ್ತೀನಿ'; 1 ವಿಡಿಯೋ ಮೂಲಕ ನೂರಾರು ಗಾಸಿಪ್‌ಗೆ ತೆರೆ ಎಳೆದ Actor Darshan
ಭರ್ಜರಿ ಮದುವೆ, ಆರತಕ್ಷತೆ!
ಫೆಬ್ರವರಿ 7ರಂದು ರಾಣಾ ಹಾಗೂ ರಕ್ಷಿತಾ ಮದುವೆ ನಡೆದಿದೆ. ರಾಣಾ ಮದುವೆಯಾಗಿರುವ ಹುಡುಗಿ ಹೆಸರು ಕೂಡ ರಕ್ಷಿತಾ ಎನ್ನೋದು ವಿಶೇಷ. ರಕ್ಷಿತಾ, ರಾಣಾ ಅವರು ಏಳು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ರಾಣಾ ಅವರ ವೃತ್ತಿ ಜೀವನ ಸೆಟಲ್ ಆಗಿ ಅಂತ ರಕ್ಷಿತಾ ಕಾಯುತ್ತಿದ್ದರು. ಈಗ ಇವರಿಬ್ಬರು ಕುಟುಂಬಸ್ಥರು, ಚಿತ್ರರಂಗದ ಗಣ್ಯರು, ಸ್ನೇಹಿತರ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಕೂಡ ಇವರ ಮದುವೆಗೆ ಬಂದು ಹಾರೈಸಿದ್ದರು. ಇನ್ನು ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು ಆಗಮಿಸಿದ್ದರು. ಒಂದು ಕಾಲದಲ್ಲಿ ರಮ್ಯಾ ಹಾಗೂ ರಕ್ಷಿತಾ ಅವರು ಬೇಡಿಕೆಯ ಹೀರೋಯಿನ್‌ಗಳಾಗಿದ್ದರು. ಇವರಿಬ್ಬರನ್ನು ಒಂದೇ ವೇದಿಕೆಯಲ್ಲಿ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ.
Raana Rakshitha Marriage: ʼಕ್ರೇಜಿಕ್ವೀನ್ʼ ರಕ್ಷಿತಾ ಸಹೋದರ ರಾಣಾ ಮದುವೆಯಲ್ಲಿ ಚಿತ್ರರಂಗದ ಗಣ್ಯರು!
ರಕ್ಷಿತಾ-ರಾಣಾ ಮದುವೆಯಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳು!
ಇನ್ನು ರಕ್ಷಿತಾ, ರಾಣಾ ಮದುವೆಗೆ ನಟ ಕಿಚ್ಚ ಸುದೀಪ್-ಪ್ರಿಯಾ ದಂಪತಿ, ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ, ಚಿನ್ನೇಗೌಡ್ರು, ಶ್ರೀಮುರಳಿ, ನಿಖಿಲ್ ಚೆಲುವರಾಯಸ್ವಾಮಿ ದಂಪತಿ, ಬಿವೈ ಯಜುವೇಂದ್ರ, ಶರ್ಮಿಳಾ ಮಾಂಡ್ರೆ, ಅನುಪಮಾ ಗೌಡ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೃಷಿ ತಾಪಂಡ, ಪ್ರಿಯಾಂಕಾ ಉಪೇಂದ್ರ, ಮಾಳವಿಕಾ ಅವಿನಾಶ್, ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ, ರಘು ಮುಖರ್ಜಿ, ಅನು ಪ್ರಭಾಕರ್, ಭಾರತಿ ವಿಷ್ಣುವರ್ಧನ್, ಸುಮಿತ್ರಾ, ಅನಿರುದ್ಧ, ಅಮೃತಾ ಅಯ್ಯಂಗಾರ್, ಶ್ರುತಿ, ಸಿಪಿ ಯೋಗೇಶ್ವರ್, ಸುಧಾರಾಣಿ, ಮೇಘನಾ ರಾಜ್, ತರುಣ್ ಸುಧೀರ್, ಪ್ರಮೀಳಾ ಜೋಶಾಯ್ ಮುಂತಾದವರು ಭಾಗವಹಿಸಿದ್ದಾರೆ.
ಅಂದಹಾಗೆ ರಕ್ಷಿತಾ ಪ್ರೇಮ್ ಮದುವೆಯ ನಂತರದಲ್ಲಿ ಇವರ ಕುಟುಂಬದಲ್ಲಿ ನಡೆದ ದೊಡ್ಡ ಕಾರ್ಯಕ್ರವಿದು. ಹೀಗಾಗಿ ಅದ್ದೂರಿಯಾಗಿ ಮದುವೆ ಮಾಡಲಾಗಿದೆ. ಇನ್ನು ಸೆಲೆಬ್ರಿಟಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.
ರಕ್ಷಿತಾ ಪ್ರೇಮ್ ಏನಂದ್ರು?
ತಮ್ಮನ ಪತ್ನಿಯ ಬಗ್ಗೆ ಮಾತನಾಡಿದ್ದ ರಕ್ಷಿತಾ ಪ್ರೇಮ್ ಅವರು, “ರಕ್ಷಿತಾ ತುಂಬಾ ಒಳ್ಳೆಯವಳು. ರಾಣಾ-ರಕ್ಷಿತಾ 7 ವರ್ಷಗಳಿಂದ ಪ್ರೀತಿಸಿದ್ದಾರೆ. ರಾಣಾ ಸೆಟಲ್ ಆಗಬೇಕು ಅಂತ ರಕ್ಷಿತಾ ಕಾದಿದ್ದಾಳೆ. ರಾಣಾ 2ನೇ ಸಿನಿಮಾ ಶುರುವಾಗಿದೆ. ರಾಣಾ ಪತ್ನಿ ಹೆಸರು ರಕ್ಷಿತಾ ಅನ್ನೋದು ಸಮಸ್ಯೆ ಅಲ್ಲ. ನನ್ನ ಮೊದಲ ಹೆಸರು ಶ್ವೇತಾ ಆಗಿತ್ತು. ಹೀಗಾಗಿ ನಾವು ನಮ್ಮ ಮನೆಯಲ್ಲಿ ಮ್ಯಾನೇಜ್ ಮಾಡ್ತೀವಿ. ರಕ್ಷಿತಾ ತುಂಬ ಸಿಂಪಲ್ ಹುಡುಗಿ, ಸಾಂಪ್ರದಾಯಿಕ ಕುಟುಂಬದಿಂದ ಬಂದವಳು” ಎಂದು ಹೇಳಿದ್ದರು.
