ಸರಿಗಮಪ ವೇದಿಕೆಯಲ್ಲಿ ರಮೇಶ್‌ ಅರವಿಂದ್‌ ಮಗಳು ನಿಹಾರಿಕಾ; ಅದೊಂದು ಕಾರಣಕ್ಕೆ ಕಣ್ಣೀರು ಹಾಕಿದ ತಂದೆ!

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸರಿಗಮಪʼ ರಿಯಾಲಿಟಿ ಶೋನಲ್ಲಿ ರಮೇಶ್‌ ಅರವಿಂದ್‌ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ರಮೇಶ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟು ನಲವತ್ತು ವರ್ಷಗಳು ಉರುಳಿವೆಯಂತೆ. ಈ ಖುಷಿಯನ್ನು ಸಂಗೀತ ವೇದಿಕೆ ಸಂಭ್ರಮಿಸಿದೆ. 
 

zee kannada saregamapa 2025 ramesh aravind complete 40 years in film industry

ಈ ಬಾರಿಯ ʼಸರಿಗಮಪʼ ರಿಯಾಲಿಟಿ ಶೋಗೆ ವಿಶೇಷ ಅತಿಥಿಯ ಆಗಮನವಾಗಿದೆ. ಹೌದು, ʼಸ್ಯಾಂಡಲ್‌ವುಡ್‌ ತ್ಯಾಗರಾಜʼ ಡಾ ರಮೇಶ್‌ ಅರವಿಂದ್‌ ಅವರ ಆಗಮನದಿಂದ ಶೋ ಕಳೆ ಹೆಚ್ಚಿದೆ. ಸ್ಯಾಂಡಲ್‌ವುಡ್‌ನ ಸ್ಫುರದ್ರೂಪಿ ನಟ ರಮೇಶ್ ಅರವಿಂದ್ ಅವರ 40 ವರ್ಷಗಳ ಸಿನಿ ಸಾಧನೆಯನ್ನು ಸಂಗೀತ ವೇದಿಕೆ ಸಂಭ್ರಮಿಸಿದೆ. ಸರಿಗಮಪ with ರಮೇಶ್ ಅರವಿಂದ್ ಎಂದೂ ಕರೆಯಬಹುದು.

ʼಅಮೆರಿಕ ಅಮೆರಿಕʼ ನಾಯಕಿ
ರಮೇಶ್‌ ಅರವಿಂದ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಉರುಳಿವೆ. ಇಷ್ಟು ವರ್ಷಗಳ ಕಾಲ ನಟ, ನಿರ್ದೇಶಕ, ನಿರೂಪಕ, ವಾಘ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಸರಿಗಮಪ ವೇದಿಕೆಯಲ್ಲಿ ʼಅಮೆರಿಕ ಅಮೆರಿಕʼ ಸಿನಿಮಾ ನಾಯಕಿ ಹೇಮಾ ಪ್ರಭಾತ್, ʼಚಂದ್ರಮುಖಿ ಪ್ರಾಣಸಖಿʼ ಸಿನಿಮಾ ನಟಿ ಭಾವನಾ ರಾಮಯ್ಯ, ಗೀತರಚನೆಕಾರ ಕೆ ಕಲ್ಯಾಣ್‌ ಅವರು ಕಾಣಿಸಿಕೊಂಡು, ರಮೇಶ್‌ ಅರವಿಂದ್‌ ಜೊತೆಗಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ತಮ್ಮ ರಾಣಾ ಮದುವೆ ಮುಗಿಸಿ ಭರ್ಜರಿ ಪಾರ್ಟಿ ಮಾಡಿದ Crazy Queen Rakshitha: ಮೇಘನಾ ರಾಜ್‌ ಭರ್ಜರಿ ಡ್ಯಾನ್ಸ್!‌

ತಂದೆಗೆ ಸರ್ಪ್ರೈಸ್‌ ಕೊಟ್ಟ ಮಗಳು 
ಇನ್ನು ಹೇಮಾ ಪ್ರಭಾತ್‌, ರಮೇಶ್‌ ಅರವಿಂದ್‌ ಅವರು ಡ್ಯುಯೆಟ್‌ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಇನ್ನು ಹೇಮಾ ಅವರು ಹಾಡು ಕೂಡ ಹಾಡಿದ್ದರು. ಭಾವನಾ ರಾಮಯ್ಯ, ರಮೇಶ್‌ ಕೂಡ ಒಂದು ಡ್ಯಾನ್ಸ್‌ ಮಾಡಿದ್ದರು. ಸರಿಗಮಪ ಸ್ಪರ್ಧಿಗಳು ರಮೇಶ್‌ ಅರವಿಂದ್‌ ಸಿನಿಮಾಗಳ ಹಾಡು ಹಾಡಿದ್ದಾರೆ. ಇನ್ನು ರಮೇಶ್‌ ಅರವಿಂದ್‌ ಅವರ ಪುತ್ರಿ ನಿಹಾರಿಕಾ ಕೂಡ ಆಗಮಿಸಿ, ತಂದೆಗೆ ಸರ್ಪ್ರೈಸ್‌ ಕೊಟ್ಟಿದ್ದಾರೆ. 

ಕ್ಯಾಮರಾ ಮುಂದೆ ಬರಲು ಇಷ್ಟಪಡದ ಮಗಳು! 
ರಮೇಶ್‌ ಅರವಿಂದ್‌ ಅವರು ಮಗಳನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಸಿನಿಮಾ ರಂಗದಿಂದ ದೂರ ಇರೋ ನಿಹಾರಿಕಾ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದರು. ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು. ನಿಹಾರಿಕಾ ಅವರು ಅಷ್ಟಾಗಿ ಕ್ಯಾಮರಾ ಮುಂದೆ ಬರಲು ಇಷ್ಟಪಡೋದಿಲ್ಲ ಎಂದು ಸಾಕಷ್ಟು ಕಡೆ ರಮೇಶ್‌ ಅವರೇ ಹೇಳಿಕೊಂಡಿದ್ದಾರೆ. 

'Bigg Boss Kannada' ನಿರೂಪಣೆಗೆ ʼಗೋಲ್ಡನ್‌ ಸ್ಟಾರ್‌ʼ ಗಣೇಶ್, ರಮೇಶ್‌ ಅರವಿಂದ್‌ ಅವ್ರನ್ನ ಕಾಂಟ್ಯಾಕ್ಟ್‌ ಮಾಡಲಾಗಿದ್ಯಾ?

ಸಿಕ್ಕಾಪಟ್ಟೆ ಆಕ್ಟಿವ್‌ ಆಗಿರೋ ರಮೇಶ್!‌ 
ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ರಮೇಶ್‌ ನಟಿಸಿದ್ದಾರೆ. 1986ರಲ್ಲಿ ರಮೇಶ್‌ ಅರವಿಂದ್‌ ಅವರು ʼಸುಂದರ ಸ್ವಪ್ನಗಳುʼ ಚಿತ್ರದಲ್ಲಿ ನಟಿಸಿದ್ದರು. ಇದೇ ಅವರ ಮೊದಲ ಸಿನಿಮಾ. ʼಪ್ರೀತಿಯಿಂದ ರಮೇಶ್ʼ‌, ʼʼಮಾಸದ ಮಾತು ವಿಥ್‌ ರಮೇಶ್‌ʼ, ʼಆರ್ಟ್‌ ಆಫ್‌ ಸಕ್ಸಸ್‌ʼ ಪುಸ್ತಕಗಳನ್ನು ಬರೆದಿರುವ ರಮೇಶ್‌ರ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ಅನೇಕರು ಕಾಯುತ್ತಿರುತ್ತಾರೆ. 

ʼವೀಕೆಂಡ್‌ ವಿಥ್‌ ರಮೇಶ್‌ʼ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿರುವ ರಮೇಶ್‌ ಸಿಕ್ಕಾಪಟ್ಟೆ ಆಕ್ಟಿವ್.‌ ಪ್ರತಿ ವರ್ಷ ಸಿನಿಮಾಗಳನ್ನು ಮಾಡುತ್ತ, ನಿರೂಪಣೆ, ಬರಹ, ಭಾಷಣ ಎಂದು ಫುಲ್‌ ಬ್ಯುಸಿ ಆಗಿರುತ್ತಾರೆ. ರಮೇಶ್‌ ಅರವಿಂದ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 
 

Latest Videos
Follow Us:
Download App:
  • android
  • ios