ವಾಹ್...! ಏನ್ ಸುಂದರಿ ಇವಳು, ಮೇಕಪ್ ಹಾಕದಿದ್ದರೂ ಸೂಪರ್ ಎಂದು ಅಚ್ಚರಿಯಿಂದ ನೋಡುವ ವೀಕ್ಷಕರಿಗೆ ಕೆಲ ದಿನಗಳ ಹಿಂದೆ ನಡೆದ ರ್ಯಾಂಪ್ ಶೋನೇ ಸಾಕ್ಷಿ.

 

ದೀಪಾವಳಿ ಪ್ರಯುಕ್ತ ಬಿಗ್ ಬಾಸ್‌ ಮನೆಯಲ್ಲಿ ಮ್ಯಾಕ್ಸ್ ಬ್ರಾಂಡ್ ಬಟ್ಟೆಗಳನ್ನು ಸ್ಪರ್ಧಿಗಳು ಆಯ್ಕೆ ಮಾಡಿಕೊಂಡು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ನೀಡಬೇಕಿತ್ತು. ಸ್ಪರ್ಧಿಗಳೆಲ್ಲರೂ ಚಂದ ಚಂದವಾಗಿ ರೆಡಿಯಾಗಿದ್ದರು. ಇಡೀ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮನೆಮಂದಿಯೆಲ್ಲಾ ರ್ಯಾಂಪ್ ಮಾಡಿದರು. ಆನಂತರ ಸೂಪರ್ ಆಗಿ ರ್ಯಾಂಪ್ ಮಾಡಿದವರಿಗೆ ಬಹುಮಾನ ನೀಡಲಾಗಯಿತು. ಈ ಟಾಸ್ಕ್ ನಲ್ಲಿ ವಿಜೇತರಾದವರು ರಾಜು ತಾಳಿಕೋಟೆ ಹಾಗೂ ಪ್ರಿಯಾಂಕಾ.

ಮೊದಲ ಗೇರ್ ನಲ್ಲಿ 15 ಕಿಮೀ ಡ್ರೈವ್ ಮಾಡಿದ್ರಂತೆ ಬಿಗ್ ಬಾಸ್ ಸ್ವಾಮೀಜಿ!

ಈ ಟಾಸ್ಕ್‌ಗೆಂದು ಸ್ಪರ್ಧಿಗಳು ರೆಡಿಯಾಗುವ ವಿಡಿಯೋವನ್ನು ಬಿಗ್ ಬಾಸ್ voot.com ನಲ್ಲಿ ಶೇರ್ ಮಾಡಲಾಗಿದೆ. ಡ್ರೆಸ್ಸಿಂಗ್ ರೂಮ್ ನೋಡಲು ದೊಡ್ಡದಾಗಿದ್ದು ಸ್ಪರ್ಧಿಗಳು ತಂದಿರುವ ಉಡುಪುಗಳನ್ನೆಲ್ಲಾ ಅಲ್ಲಿ ಇಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ವೇಳೆ ಸ್ಪರ್ಧಿಗಳಿಗೆ ಎರಡರಿಂದ ಮೂರು ಸೂಟ್ ಕೇಸ್ ಕೊಡುವುದನ್ನು ತೋರಿಸಿದ್ದರು. ಈ ಹಿಂದೆ ಇದೇ ತರಹದ ಕಾರ್ಯಕ್ರಮದಲ್ಲಿ ನಿವೇದಿಕಾ ಗೌಡ ವಿಜೇತರಾಗಿದ್ದರು.

BB7: ರಾತ್ರಿಯೆಲ್ಲಾ ಎಕ್ಸಾಮ್ ಗೆ ಓದಿ ಮಾರನೇ ದಿನ ಬಸ್ ನಲ್ಲಿ ನಿದ್ದೆ ಮಾಡಿದ ಕಿಲಾಡಿ!