2022ರ ಕೂಲ್ Rapid ಫಯರ್‌ನಲ್ಲಿ ಪಟ್ಟ ಪಟ್ಟ ಉತ್ತರ ಕೊಟ್ಟ ನಮ್ರತಾ ಗೌಡ. ಬೇಸರದ ವಿಚಾರ, ಜಾಲೆಂಜ್‌ ಏನು, ಯಾವುದಕ್ಕೆ ಹೆಚ್ಚಿಗೆ ಭಯ ಪಡುತ್ತಾರೆಂದು ಹೇಳಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ನಾಗಿಣಿಯ ಪ್ರಮುಖ ಪಾತ್ರದಾರಿ ನಮ್ರತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ 2022 ರಿಕ್ಯಾಪ್ ಮಾಡಿದ್ದಾರೆ. ಯಾರೂ ಗೊತ್ತಿರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

- ಒಂದು ವರ್ಷದ ಹಿಂದೆ ಇದ್ದ ನಮ್ರತಾಗೆ ಒಂದು ಸಲಹೆ
2022ರಲ್ಲಿ ನಾನು ತುಂಬಾ ಎಮೋಷನಲಿ ಮೆಸಪ್‌ನಲ್ಲಿದೆ(ಗೊಂದಲ). ಏನೇ ಆದರೂ ಮನಸ್ಸಿಗೆ ಹಚ್ಚಿಕೊಳ್ಳುತ್ತಿದ್ದೆ ತುಂಬಾ ಬೇಸರ ಆಗುತ್ತಿತ್ತು ಎಮೋಷನಲಿ ವೀಕ್ ಅಗಿದ್ದೆ. ಈ ವರ್ಷ ಎಮೋಷನಲಿ ಮತ್ತು ದೈಹಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದೀನಿ. ಒಂದು ವರ್ಷದ ಹಿಂದೆ ಇದ್ದ ನಮ್ರತಾಗೆ ಒಂದು ಸಲಹೆ ಕೊಡಬೇಕು ಅಂದ್ರೆ ಸ್ಟ್ರಾಂಗ್ ಆಗಿರು ಎಲ್ಲರಿಗೂ ಕಷ್ಟ ಬರುತ್ತೆ ಅದನ್ನು ದಾಟಿ ಮುನ್ನುಗುವುದು ಮುಖ್ಯ ಎನ್ನುವೆ.

- ಫ್ಯೂಚರ್‌ನಲ್ಲಿ ನಿಮಗೆ ನೀವೇ ಹಾಕಿಕೊಳ್ಳುವ ಚಾಲೆಂಜ್
ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾನು ಫಿಟ್ ಆಗಿರಬೇಕು ಎಂದು ನನಗೆ ನಾನು ಚಾಲೆಂಜ್ ಮಾಡಿಕೊಳ್ಳುವೆ. ಈ ವರ್ಷ ನೆಮ್ಮದಿಯಾಗಿರಬೇಕು ಪೀಸ್‌ಪುಲ್ ಜೀವನ ಬದುಕಬೇಕು ಎಂದು. 

ನಂಬರ್ ದೇವರಾಣೆ ಕೊಡಲ್ಲ; ಮದುವೆ ಆಗುವ ಹುಡುಗನ ಬಗ್ಗೆ ಸುಳಿವು ಕೊಟ್ಟ ಕಿರುತೆರೆ ನಟಿ ನಮ್ರತಾ ಗೌಡ

- ಈ ಕ್ಷಣ ಖುಷಿಯಾಗಿದ್ದೀರಾ?
ಹೌದು ನಾನು ಖುಷಿಯಾಗಿರುವೆ. ಇದೇ ಪ್ರಶ್ನೆ 2022ರಲ್ಲಿ ಕೇಳಿದರೆ ಅನುಮಾನದಲ್ಲಿ ಉತ್ತರ ಕೊಡಬೇಕಿತ್ತುಆದರೆ ಈ ವರ್ಷ ಖುಷಿಯಾಗಿರುವೆ.

- 2022ರ ಬೇಸರದ ಸಂಗತಿ?
ನನ್ನ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದಕ್ಕೆ ತುಂಬಾ ಬೇಸರ ಅಗಿದೆ. ಅವರಿಲ್ಲದೆ ಅವರ ಕೊನೆ ಎರಡು ಸಿನಿಮಾ ನೋಡಲು ಮಾನಸಿಕವಾಗಿ ಕಷ್ಟವಾಯ್ತು. ಅಭಿಮಾನಿಯಾಗಿ ಅವರನ್ನು ತುಂಬಾ ಇಷ್ಟ ಪಡುತ್ತೀನಿ.

ಕಾಶ್ಮೀರದಲ್ಲಿ ನಾಗಿಣಿ; 8 ದಿನಕ್ಕೆ 50 ಸಾವಿರ ಖರ್ಚು ಮಾಡಿದ ಕಿರುತೆರೆ ನಟಿ ನಮ್ರತಾ ಗೌಡ

- ಬೆಸ್ಟ್‌ ಗ್ಯಾಡ್ಜೆಟ್?
ಇತ್ತೀಚಿಗೆ M1 mac book pro ಖರೀದಿ ಮಾಡಿದೆ. ಅದಕ್ಕೆ ಬೇಜಾನ್ ಕಾಸಾಗಿ ಬಜೆಟ್‌ ಮೀರಿದೆ. ಏರ್‌ಪಾಡ್‌ ಪ್ರೋ ನನ್ನ ಲಿಸ್ಟ್‌ನಲ್ಲಿದೆ ಅದಕ್ಕೆ 60 ಸಾವಿರ ಬೇಕು ಹೀಗಾಗಿ ನಾನು ಕಾಯುತ್ತಿರುವೆ.

- ಡ್ರೀಮ್ ಕಾರು ಅಥವಾ ಬೈಕ್?
ಇಷ್ಟು ವರ್ಷ ಹ್ಯಾರಿಯರ್‌ ಕಾರು ಡ್ರೀಮ್ ಕಾರು ಆಗಿತ್ತು ಜೀವನದಲ್ಲಿ ಚೆನ್ನಾಗಿ ಬೆಳೆದ ಮೇಲೆ ಡಿಫೆಂಡರ್ ಖರೀದಿಸಬೇಕು ಅಂತ ಆಸೆ ಇದೆ.

- 2022ರಲ್ಲಿ ಭೇಟಿ ಮಾಡಿದ ಬೆಸ್ಟ್ ವ್ಯಕ್ತಿ?
ನಾನು introvert ವ್ಯಕ್ತಿ ವೇದಿಕೆ ಮೇಲೆ ಮತ್ತು ಕ್ಯಾಮೆರಾ ಎದುರು ಮಾತ್ರ ಧೈರ್ಯವಾಗಿ ಬೋಲ್ಡ್‌ ಆಗಿರುವೆ. ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವ ವಿಚಾರ ಬಂದ್ರೆ ನಾನು ಸೋಷಿಯಲ್ ಅಲ್ಲ ಹೀಗಾಗಿ 2022ರಲ್ಲಿ ಹೊಸ ವ್ಯಕ್ತಿಗಳ ಪರಿಚಯ ಮಾಡಿಕೊಂಡಿಲ್ಲ. ನನ್ನ ಕ್ಲೋಸ್‌ ಸರ್ಕಲ್‌ ಜನರು ಮಾತ್ರ ನನಗೆ ಸಾಕು. 

- ಅತಿ ಹೆಚ್ಚು ಭಯ ಪಡುವುದು
ಇದುವರೆಗೂ ನಾನು ಎಲ್ಲಿಯೂ ಹೇಳಿಕೊಂಡಿಲ್ಲ ಆದರೆ ನನಗೆ ಆಕ್ಸಿಡೆಂಟ್ ಮತ್ತು ಸ್ಪೀಡ್ ಆಗಿ ಹೋಗುವುದು ಅಂದ್ರೆ ನನಗೆ ತುಂಬಾನೇ ಭಯ ಆಗುತ್ತದೆ. ರಸ್ತೆಯಲ್ಲಿ ದೂರ ಪ್ರಯಾಣ ಮಾಡುವಾಗ ಅಥವಾ ನನ್ನ ಆಪ್ತರು ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಗೊತ್ತಾಗುತ್ತಿದ್ದರಂತೆ ಒಂದು ರೀತಿ ಭಯ ಶುರುವಾಗುತ್ತೆ. ನನ್ನ ತಲೆಯಲ್ಲಿ ಇಮ್ಯಾಜಿನೇಷನ್ ಕ್ರಿಯೇಟ್ ಮಾಡಿಕೊಂಡು ಭಯ ಪಡುವೆ. ಎಷ್ಟೇ ಪಾಸಿಟಿವ್ ಆಗಿ ಯೋಚನೆ ಮಾಡಿದರೂ ಭಯ ಆಗುತ್ತೆ.

YouTube video player