- Home
- Entertainment
- TV Talk
- ಪ್ರೇಮಕಾವ್ಯ ಸೀರಿಯಲ್ 'ಸ್ನೇಹ' ಬೋಲ್ಡ್ ಲುಕ್; ಸಂಸಾರ ಹಾಳು ಮಾಡೋ ವಿಲನ್ ಅಂತಾ ಬೈದವ್ರೇ ಈ ಫೋಟೋ ನೋಡಿ ಫಿದಾ!
ಪ್ರೇಮಕಾವ್ಯ ಸೀರಿಯಲ್ 'ಸ್ನೇಹ' ಬೋಲ್ಡ್ ಲುಕ್; ಸಂಸಾರ ಹಾಳು ಮಾಡೋ ವಿಲನ್ ಅಂತಾ ಬೈದವ್ರೇ ಈ ಫೋಟೋ ನೋಡಿ ಫಿದಾ!
Prema kavya Actress Shweta Koglur 'ಪ್ರೇಮಕಾವ್ಯ' ಧಾರಾವಾಹಿಯಲ್ಲಿ ಖಳನಾಯಕಿ ಸ್ನೇಹಾ ಪಾತ್ರಧಾರಿ ಶ್ವೇತಾ ಕೊಗ್ಲೂರ್, ತಮ್ಮ ಬೋಲ್ಡ್ ಬೀಚ್ ಫೋಟೋಶೂಟ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಿಂದ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದಾರೆ.

ಪ್ರೇಮಕಾವ್ಯ ಧಾರಾವಾಹಿಯಲ್ಲಿ ವಿಲನ್ ಶೇಡ್‌ನ ಸ್ನೇಹಾ ಪಾತ್ರದಲ್ಲಿ ಗಮನಸೆಳೆದಿರುವವರು ನಟಿ ಶ್ವೇ ಕೊಗ್ಲೂರ್. ಇಡೀ ಸಂಸಾರವನ್ನೇ ಹಾಳು ಮಾಡುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಅವರು ಬೀಚ್‌ನಲ್ಲಿ ಮಾಡಿಸಿರುವ ಬೋಲ್ಡ್ ಫೋಟೋಶೂಟ್ ಎಲ್ಲರ ಹುಬ್ಬೇರಿಸಿದೆ. ಸಖತ್ ಮಾಡರ್ನ್ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಬೀಚ್ ವೆಕೇಷನ್‌ಗೆ ಹೋಗಿರುವ ಶ್ವೇತಾ ಕೊಗ್ಲೂರ್ ಅಲ್ಲಿಯ ಫೋಟೋಗಳನ್ನು ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರೇಮಕಾವ್ಯ ಧಾರವಾಹಿಯ ಸ್ನೇಹಾ ಇವರೇನಾ ಎನ್ನುವಷ್ಟರ ಮಟ್ಟಿಗೆ ನೆಟ್ಟಗರು ಈ ಫೋಟೋ ನೋಡಿ ಅಚ್ಚರಿಪಟ್ಟಿದ್ದಾರೆ.
ಉತ್ತಮವಾಗಿ ಡಾನ್ಸ್ ಕೂಡ ಮಾಡುವ ನಟಿ ಶ್ವೇತಾ ಕೊಗ್ಲೂರ್, ಈ ಹಿಂದೆ ದೊರೆಸಾನಿ ಹೆಸರಿನ ಸೀರಿಯಲ್‌ನಲ್ಲೂ ನಟಿಸಿದ್ದರು. ಅದಕ್ಕೂ ಮುನ್ನ ಉದಯ ಟಿವಿಯಲ್ಲಿ ಪ್ರಸಾರವಾಗ್ತಿದ್ದ ಸೇವಂತಿ ಸೀರಿಯಲ್‌ನಲ್ಲೂ ಪಾತ್ರ ಮಾಡಿದ್ದರು.
ಸ್ಟಾರ್ ಸುವರ್ಣ ವಾಹಿನಿಯ ಮುದ್ದು ಮನಸೇ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಶ್ವೇತಾಗೆ ದೊರೆಸಾನಿ ಸೀರಿಯಲ್‌ನಲ್ಲೂ ವಿಲನ್ ಪಾತ್ರವೇ ಸಿಕ್ಕಿತ್ತು. ಈಗ ಪ್ರೇಮಕಾವ್ಯದಲ್ಲೂ ಅದೇ ಮಾದರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

