Asianet Suvarna News Asianet Suvarna News

ನಂಬರ್ ದೇವರಾಣೆ ಕೊಡಲ್ಲ; ಮದುವೆ ಆಗುವ ಹುಡುಗನ ಬಗ್ಗೆ ಸುಳಿವು ಕೊಟ್ಟ ಕಿರುತೆರೆ ನಟಿ ನಮ್ರತಾ ಗೌಡ

ಡ್ರೀಮ್ ಬಾಯ್ ಹೇಗಿರಬೇಕು? ನಂಬರ್ ಏನು? ಯಾವ ಊರು.... ಪದೇ ಪದೇ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟ ನಮ್ರತಾ ಗೌಡ...

Actress Namratha Gowda answers netizens question about personal life vcs
Author
First Published Dec 22, 2022, 9:53 AM IST

ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ನಮ್ರತಾ ಗೌಡ ಇದೀಗ ನಾಗಿಣಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕಾರಣ ಯುಟ್ಯೂಬ್‌ ಚಾನೆಲ್‌ ಆರಂಭಿಸಿ ತಮ್ಮ ಜೀವನ ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ನೆಟ್ಟಿಗರು ಪದೇ ಪದೇ ಕೇಳಿರುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. 

- ನಿಮ್ಮ ಮನೆ ಎಲ್ಲಿದೆ ಮೇಡಂ ಪ್ಲೀಸ್ ಹೇಳಿ
ನಾನೀರುವುದು ಬೆಂಗಳೂರಿನಲ್ಲಿ. ನನ್ನ ಮನೆ ನನ್ನ ಊರು ಎಲ್ಲಾ ಬೆಂಗಳೂರು. ನನಗೆ ಯಾವ ಊರು ಏನೂ ಇಲ್ಲ 

- ನೀವು ಸಿಂಗಲ್? 
ಸಿಂಗಲ್ ಸಿಂಗಲ್ ಸಿಂಗಲ್ ಅಂತ 20 ಜನ ಕೇಳಿದ್ದಾರೆ. ಒಬ್ರೋ ಇಬ್ರೋ ಅಂತಲ್ಲ ತುಂಬಾ ಜನ...ಹೌದು ನಾನು ಸಿಂಗಲ್ ಆಗಿರುವೆ. ಎಷ್ಟು ಸಿಂಗಲ್ ಆಗಿದ್ದೀನಿ ಅಂದ್ರೆ ಸಿಂಗಲ್ ಅನ್ನೋ ಪದಕ್ಕೆ ಬೇಸರ ಆಗ್ಬೇಕು ಅಷ್ಟು ಸಿಂಗಲ್ ಇದ್ದೀನಿ. ನನ್ನ ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣ ಸಿಂಗಲ್. ಕೆಲಸ ಮಾಡುವ ಸಮಯದಲ್ಲಿ ಕೆಲಸ ಮಾಡಬೇಕು ಆಮೇಲೆ ಮದ್ವೆ ಮಕ್ಕಳು ಎಲ್ಲಾ ಮಾಡಿಕೊಳ್ಳಬೇಕು. 

- ನೀವು ಸೀರೆಗಳನ್ನು ಎಲ್ಲಿ ತೆಗೆದುಕೊಳ್ಳುತ್ತೀರಾ?
ಬಹುತೇಕ ಸೀರೆಗಳನ್ನು ಡಿಸೈನರ್‌ಗಳ ಬಳಿ ಡಿಸೈನ್ ಮಾಡಿಸುವುದು ಅದು ಬಿಟ್ಟರೆ ಸೀರೆ ತೆಗೆದುಕೊಳ್ಳುವುದು ಎಲ್ಲಾ ಕಂಚಿ ಸೀರೆ. ಸಿಲ್ಕ್‌ ಸೀರೆಗಳು ಹೆಚ್ಚಿಗೆ ಬಳಸುವುದು ಆದರೆ ಈ ಸೀಸನ್‌ನಲ್ಲಿ ನನಗೆ ಕಾಟನ್ ಸೀರೆಗಳು ತುಂಬಾ ಇಷ್ಟವಾಗುತ್ತಿದೆ ಅದಿಕ್ಕ 7-8 ಸೀರೆಗಳನ್ನು ತೆಗೆದುಕೊಳ್ಳುತ್ತಿರುವೆ. ನಾನು ಸಿಲ್ಕ್‌ ಸೀರೆಗಳ ಫ್ಯಾನ್.

Actress Namratha Gowda answers netizens question about personal life vcs

- ಮುಂದಿನ ಧಾರಾವಾಹಿ ಅಥವಾ ಸಿನಿಮಾ ರಂಗಕ್ಕೆ ಬರುವುದು ಯಾವಾಗ?
ಮುಂದಿನ ಪ್ರಾಜೆಕ್ಟ್‌ ಯಾವುದು ಎಂದು ಗೊತ್ತಿಲ್ಲ ಆದರೆ ಸದ್ಯಕ್ಕೆ ಇರುವ ಪ್ರಾಜೆಕ್ಟ್‌ ಮುಗಿಸಬೇಕು. ಲೀಡ್ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಯಾವಾಗ ಎಂಟ್ರಿ ಕೊಡುತ್ತೀನಿ ಗೊತ್ತಿಲ್ಲ. ಒಳ್ಳೆ ಸಿನಿಮಾ ಮೂಲಕ ಎಂಟ್ರಿ ಕೊಡಬೇಕು ಸಿನಿಮಾ ರಿಲೀಸ್ ಆದ್ಮೇಲೆ  ಜನರಿಗೆ ತುಂಬಾ ಕನೆಕ್ಟ್‌ ಆಗಬೇಕು ಅನ್ನೋ ಆಸೆ ತುಂಬಾ ಇದೆ. ಆ ಒಂದು ಪ್ರಾಜೆಕ್ಟ್‌ ಬರಲಿ ಅಂತ ಕಾಯುತ್ತಿರುವೆ. 

- ಯಾರನ್ನು ಮದುವೆ ಆಗಲು ಇಷ್ಟ ಪಡುತ್ತೀರಾ? ನೀವು ಇಷ್ಟ ಪಟ್ಟವರ ಅಥವಾ ನಿಮ್ಮ ಕುಟುಂಬ ಇಷ್ಟ ಪಟ್ಟವರು?
ಇಂಟ್ರೆಸ್ಟಿಂಗ್ ಪ್ರಶ್ನೆ ಇದು. ನನಗೆ ನನ್ನ ಕುಟುಂಬ ತುಂಬಾ ಮುಖ್ಯ. ನನ್ನ ಕುಟುಂಬ ಅಂದ್ರೆ ಕೇವಲ ತಂದೆ-ತಾಯಿ ಮಾತ್ರ. ನಾನು ಇಷ್ಟ ಪಟ್ಟವರನ್ನು ನನ್ನ ಪೋಷಕರು ಇಷ್ಟ ಪಡುತ್ತಾರೆ ಅಥವಾ ನನ್ನ ಪೋಷಕರು ಆಯ್ಕೆ ಮಾಡುವವರನ್ನು ನಾನು ಇಷ್ಟ ಪಡುವೆ. ನಮ್ಮ ಮೂವರ ಮೈಂಡ್‌ ಒಂದೇ. ನನ್ನ ಸ್ನೇಹಿತರು ನನಗಿಂತ ನನ್ನ ತಂದೆ-ತಾಯಿಗೆ ಕ್ಲೋಸ್. ನಾನು ಮದುವೆ ಆಗುವ ಹುಡುಗ ನನ್ನ ತಂದೆ ತಾಯಿನ ಇಷ್ಟ ಪಡಬೇಕು ಅವರ ಕುಟುಂಬವನ್ನು ನಾನು ಅಷ್ಟೇ ಪ್ರೀತಿ ಮಾಡುತ್ತೀನಿ. 

ಕಾಶ್ಮೀರದಲ್ಲಿ ನಾಗಿಣಿ; 8 ದಿನಕ್ಕೆ 50 ಸಾವಿರ ಖರ್ಚು ಮಾಡಿದ ಕಿರುತೆರೆ ನಟಿ ನಮ್ರತಾ ಗೌಡ

- ಫೋನ್ ನಂಬರ್? 
ಫೋನ್‌ ನಂಬರ್‌ನ ದೇವರ ಆಣೆ ಕೊಡುವುದಿಲ್ಲ.

- ನೀವು ತುಂಬಾ ಭಯ ಪಡುವುದು ಯಾವ ವಿಚಾರಕ್ಕೆ?
ನನಗೆ ಎತ್ತರ ಅಂದ್ರೆ ಭಯ ತುಂಬಾ ಆಗುತ್ತಿತ್ತು ಆದರೆ ಈ ವೃತ್ತಿಗೆ ಬಂದ ಮೇಲೆ ಏರಿಯಲ್ ಆಕ್ಟಸ್‌ ಮಾಡಿ, ಬೆಟ್ಟದ ಮೇಲೆ ಶೂಟಿಂಗ್ ಮಾಡಿ ಆ ಭಯ ದೂರ ಆಗಿದೆ.

Viral Prank: ನಾಗಿಣಿ 2 ನಟಿ ನಮ್ರತಾ ಗೌಡ ಕಾಲಿಗೆ ಪೆಟ್ಟು, ಸ್ಥಿತಿ ಗಂಭೀರ

- ಯಾವ ತರ ಹುಡುಗ ಬೇಕು? ಇಷ್ಟ ಆಗುತ್ತಾರೆ?
ಇಷ್ಟು ವರ್ಷಗಳು ಕಳೆದ ಮೇಲೆ ನನಗೆ ದೈಹಿಕ ನೋಟ ಮುಖ್ಯವಾಗುವುದಿಲ್ಲ. ನನಗೆ ಮುಖ್ಯ ಆಗುವುದು ಅವರು ನಮ್ಮನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಷ್ಟು ಪ್ರೀತಿ ಮಾಡುತ್ತಾರೆ ಅವರ ಜೀವನದಲ್ಲಿ ನಿಮ್ಮ ಆದ್ಯತೆ ಎನು. ಪ್ರೀತಿಸಬೇಕು ಅತಿಯಾಗಿ ಪ್ರೀತಿಸಬೇಕು ಅಷ್ಟೆ. 

 

Follow Us:
Download App:
  • android
  • ios