Kannada

ವೈಷ್ಣವಿ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಫೆಬ್ರವರಿ 20ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Kannada

ಸಿಂಪಲ್ ಬರ್ತ್ ಡೇ

ಈ ಹಿನ್ನೆಲೆಯಲ್ಲಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಪೋಸ್ಟ್ ಮಾಡಿ ತಮ್ಮ ಬರ್ತ್ ಡೇ ಸಂಭ್ರಮ ಹೇಗಿತ್ತು ಎಂದು ತಿಳಿಸಿದ್ದಾರೆ.

Image credits: Instagram
Kannada

ಹೃದಯ ಕರಗಿತು

ಈ ವರ್ಷ, ನನ್ನ ಹುಟ್ಟುಹಬ್ಬ ಮೃದು, ಶಾಂತ ಮತ್ತು ಶುದ್ಧ ಪ್ರೀತಿಯಿಂದ ತುಂಬಿತ್ತು. ಅದು ಭವ್ಯ ಸಡಗರ ಇರಲಿಲ್ಲ, ಆದರೆ ಅದು ಅರ್ಥಪೂರ್ಣವಾಗಿತ್ತು. ಸಮಯ, ಶ್ರಮ, ಎಲ್ಲದರ ಹಿಂದಿನ ಭಾವನೆ ನನ್ನ ಹೃದಯವನ್ನು ಕರಗಿಸಿದವು.

Image credits: Instagram
Kannada

ಸ್ಪೆಷಲ್ ಡೇ

ನನ್ನ ದಿನದಂದು ನೀವು ನನ್ನನ್ನು ಎಷ್ಟು ವಿಶೇಷವೆಂದು ಭಾವಿಸಿದ್ದೀರಿ ಎಂಬುದನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ವೈಷ್ಣವಿ ಗೌಡ ಬರೆದು ಕೊಂಡಿದ್ದಾರೆ.

Image credits: Instagram
Kannada

ಪತಿಯಿಂದ ಸ್ಪೆಷಲ್ ವಿಶ್

ಹುಟ್ಟುಹಬ್ಬದ ದಿನ ವೈಷ್ಣವಿ ಪತಿ ಅನುಕೂಲ್ ಮಿಶ್ರಾ ಸ್ಪೆಷಲ್ ಫೋಟೊ ಪೋಸ್ಟ್ ಮಾಡಿ, ಮುದ್ದಿನ ಪತ್ನಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯ ತಿಳಿಸಿದ್ದರು.

Image credits: Instagram
Kannada

ಕೆಂಪು ಡ್ರೆಸಲ್ಲಿ ಮಿಂಚಿಂಗ್

ವೈಷ್ಣವಿ ಗೌಡ ಕೆಂಪು ಬಣ್ಣದ ಗೌನ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಇವರ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.

Image credits: Instagram
Kannada

ಯಾವಾಗ ಕಿರುತೆರೆಗೆ?

ವೈಷ್ಣವಿ ಗೌಡ ಕೊನೆಯದಾಗಿ ಸೀತಾ ರಾಮದಲ್ಲಿ ನಟಿಸಿದ್ದರು. ಮುಂದೆ ಯಾವ ಸೀರಿಯಲ್ ನಲ್ಲಿ ನಟಿಸಲಿದ್ದಾರೆ? ಮತ್ತೆ ಯಾವಾಗ ನೋಡಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

Image credits: Instagram
Kannada

ಮದುವೆ ನಂತ್ರ ನಟನೆಗೆ ಬ್ರೇಕ್ ಕೊಟ್ರ?

ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆ, ಕಳೆದ ವರ್ಷ ಜೂನ್ ತಿಂಗಳಲ್ಲಿ ವೈಷ್ಣವಿ ಅನುಕೂಲ್ ಮಿಶ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿಲ್ಲ.

Image credits: Instagram
Kannada

ಮಿನಿ ಸೀರೀಸ್ ನಲ್ಲಿ ನಟನೆ

ಮದುವೆ ಬಳಿಕ ವೈಷ್ಣವಿ ಒಂದು ಮಿನಿ ಸೀರೀಸ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಮತ್ತೆ ಕಿರುತೆರೆಗೆ ಯಾವಾಗ ಬರ್ತಾರೆ ಅನ್ನೋದು ಗೊತ್ತಿಲ್ಲ.

Image credits: Instagram

ಬಿಗ್ ಬಾಸ್ ಬೆಡಗಿ Spandana Somannaಗೆ ನಿಜವಾಗ್ಲೂ ಲವ್ ಆಗಿದ್ಯಂತೆ!

ಥಂಪಾದಿಂದಲೇ ಗಂಡು ಹೈಕ್ಳ ಕಣ್ಣು ತಂಪಾಗಿಸಿದ ನಿವೇದಿತಾ ಗೌಡ!

ನಿವೇದಿತಾ ಗೌಡ ಫಾರಿನ್‌ ಟ್ರಿಪ್‌ಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತೆ? ಸತ್ಯ ಬಯಲು!

ಆಂಟಿ ಥರ ಕಾಣ್ತೀಯ ಅಂದಿದ್ದ ಗಿಲ್ಲಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಕಳ್ಳಪುಟ್ಟಿ