Asianet Suvarna News Asianet Suvarna News

ರಸ್ತೆಯಲ್ಲಿ ಹೂಬತ್ತಿ ಮಾರುವ ಅಜ್ಜಿಯ ಮನೆ ಬಾಡಿಗೆ ಜವಾಬ್ದಾರಿ ಹೊತ್ತ ಅನುಶ್ರೀ, ದಿನಸಿ ವ್ಯವಸ್ಥೆ ಮಾಡಿದ ತರುಣ್ ಸುಧೀರ್!

ಮಹಾನಟಿ ವೇದಿಕೆಯಲ್ಲಿ ಹೆಮ್ಮೆಯ ಸಾಧಕರನ್ನು ಪರಿಚಯಿಸಿ ಕೊಟ್ಟ ರಿಯಾ ಬಗರೆ. ಸ್ಥಳದಲ್ಲೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಡೆಸಿದ ರಮೇಶ್..
 

Zee Kannada Mahanati Anushree to pay Bhagyalakshmi ajji rent and Tarun Sudhir to buy grocery vcs
Author
First Published Apr 22, 2024, 10:09 AM IST

ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಎರಡನೇ ಸಂಚಿಕೆಯಲ್ಲಿ ಜೀವನಕ್ಕೆ ಸ್ಪೂರ್ತಿ ತುಂಬುವ ಸಾಮಾನ್ಯ ಸಾಧಕರನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರೆ. ಶಿವಾಜಿನಗರದ ಸಿಂಗ್ನಲ್‌ಗಳಲ್ಲಿ ಹೂಬತ್ತಿ ಮಾರುವ ಅಜ್ಜಿಯ ಜೀವನದ ಕಥೆಯನ್ನು ರಿಯಾ ಬಗರೆ ನಟಿಸಿದ್ದಾರೆ. 

ಕೋಲಾರ ಮೂಲದ ಭಾಗ್ಯಲಕ್ಷ್ಮಮ್ಮರಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಹಲವು ವರ್ಷಗಳ ಹಿಂದೆ ಮಗನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದವರಿಗೆ ದೊಡ್ಡ ಕಷ್ಟ ಎದುರಾಗಿತ್ತು. 25 ವರ್ಷದ ಮಗನಿಗೆ ಎರಡು ಕಿಡ್ನಿ ಫೇಲ್ ಆಗಿತ್ತು. ಬೆಂಗಳೂರಿನಲ್ಲಿ ಇರುವ ಎಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿದ್ದರು..ಎಷ್ಟೇ ವಿಚಾರಿಸಿದ್ದರೂ ಕಿಡ್ನಿ ಇದೆ ಆದರೆ 10- 20 ಲಕ್ಷ ಆಗುತ್ತೆ ಎಂದು ಡಿಮ್ಯಾಂಡ್ ಮಾಡಿದರಂತೆ. ಅಷ್ಟು ಹಣದ ವ್ಯವಸ್ಥೆ ಮಾಡಲು ಕಷ್ಟವಾಗುತ್ತದೆ ಎಂದು ತಾಯಿ ಕರಳು ತಮ್ಮ ಒಂದು ಕಿಡ್ನಿಯನ್ನು ಮಗನಿಗೆ ಕೊಟ್ಟರಂತೆ. ನನ್ನ ಮಗನ ಜೀವ ಉಳಿಸಿದೆ. ಆಪರೇಷನ್ ಆಗಿ ಎರಡು ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡರು. ಮಗ ಇಲ್ಲ ಅನ್ನೋ ದುಖಃದಲ್ಲಿ ಕೊರಗುತ್ತಿದ್ದ ಪತಿ ತೀರಿಕೊಂಡರಂತೆ.

ಮಗು ಕಳೆದುಕೊಂಡ ನೋವಿಗೆ ಕೊರಗಿ ಕೊರಗಿ ಡಿಪ್ರೆಶನ್‌ಗೆ ಜಾರಿದ್ದೆ; ಆರೋಗ್ಯದ ಬಗ್ಗೆ ನಟಿ ಪ್ರೇಮಾ ಸ್ಪಷ್ಟನೆ

ಭಾಗ್ಯಲಕ್ಷ್ಮಿ ಅವರ ಕಥೆ ಕೇಳಿ ಮಹಾನಟಿ ಕಾರ್ಯಕ್ರಮದಲ್ಲಿ ಇದ್ದ ಪ್ರತಿಯೊಬ್ಬರು ಭಾವುಕರಾಗುತ್ತಾರೆ. ಸ್ವಾಭಿಮಾನಿಯಾಗಿ ಜೀವನ ಮಾಡಬೇಕು ಎನ್ನುವ ಅಜ್ಜಿಯ ನೆರವಗಿ ಆಂಕರ್ ಅನುಶ್ರೀ ಮತ್ತು ನಿರ್ದೇಶಕ ತರುಣ್ ಸುಧೀರ್ ಮುಂದಾಗುತ್ತಾರೆ. 'ನಾನು ನಿಮ್ಮ ಮೊಮ್ಮಗಳು ತರ ಅಲ್ವಾ? ಹಾಗಿದ್ರೆ ನಾನು ಬದುಕಿರುವವರೆಗೂ ನಿಮ್ಮ ಮನೆ ಬಾಡಿಗೆ ಕಟ್ಟುತ್ತೀನಿ. ನಿಮಗೆ ಇಷ್ಟ ಇರುವ ಮನೆಯಲ್ಲಿ ನೀವು ವಾಸ ಮಾಡಿ' ಎಂದು ಅನುಶ್ರೀ ಹೇಳುತ್ತಾರೆ. ವೇದಿಕೆ ಮೇಲೆ ಆಗಮಿಸಿದ ತರುಣ್ ಸುಧೀರ್ ಕೈಯಲ್ಲಿರುವ ಮೈಕನ್ನು ದೂರ ಮಾಡಿ ಅಜ್ಜಿ ಮತ್ತು ಮಗಳ ಸಂಪೂರ್ಣ ದಿನ ನಿತ್ಯದ ದಿನಸಿ ಸಾಮಾಗ್ರಿ ಖರ್ಚನ್ನು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಕೈಗೆ ಸಿಕ್ಕಿರುವ ಬತ್ತಿ ದುಡ್ಡು ಕೊಟ್ಟಿಲ್ಲ ಎಂದು ಯಾರಿಗೂ ಗೊತ್ತಾಗದಂತೆ ಹಣ ಎಣಿಸಿ ಕೊಡುತ್ತಾರೆ.

ಮಹಾನಟಿ ಆಡಿಷನ್​ ಹೇಗಿತ್ತು? ನಟ ರಮೇಶ್​ರ​ ನಟನೆಯ ಪಾಠ, ಭುವನ್ ಗೌಡ ಕ್ಯಾಮೆರಾ ನೋಟ ಹೀಗಿತ್ತು...

'ನಾನು ಮತ್ತು ಮಗಳು ವಾಸಿಸುತ್ತಿರುವುದು. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ದಿನವೂ ಆಕೆ ಬತ್ತಿ ಮಾಡುತ್ತಾಳೆ ಅದನ್ನು ವಾರದಲ್ಲಿ ಎರಡು ದಿನ ಮಾರಾಟ ಮಾಡುತ್ತೀನಿ. ತಿಂಗಳು ಮನೆ ಬಾಡಿಗೆ ಅಂತ 5 ಸಾವಿರ ಬೇಕು, ವಯಸ್ಸಾದವರಿಗೆ ತಿಂಗಳಿಗೆ 1200 ರೂಪಾಯಿ ಕೊಡುತ್ತಾರೆ. ಬತ್ತಿ ಮಾರಾಟ ಮಾಡುವ ಮೂಲಕ ಮತ್ತೊಬ್ಬರ ಮನೆ ಬೆಳಕಾಗಬೇಕು ಬತ್ತಿ ಮಾರಿದರೆನೇ ಜೀವನ ಮಾಡಲು ಸಾಧ್ಯವಾಗುವುದು. ದಯವಿಟ್ಟು ಬತ್ತಿ ತೆಗೆದುಕೊಳ್ಳು. ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಬೇಕು. ಎಲ್ಲರಿಗೂ ಒಳ್ಳೆಯದನ್ನು ಬಯಸಬೇಕು ನಗು ನಗುತ್ತಾ ಕೆಲಸ ಮಾಡಬೇಕು. ದೇವರು ಮೆಚ್ಚುವ ಕೆಲಸ ಮಾಡಬೇಕು' ಎಂದು ಭಾಗ್ಯಲಕ್ಷ್ಮಿ ಅಜ್ಜಿ ಮಾತನಾಡುತ್ತಾರೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios