ಕಷ್ಟ ಪಟ್ಟು ದುಡಿದು ತಿನ್ನುತ್ತಿರುವ ಆಟೋ ಚಾಲಕರಿಗೆ ಅಗೌರವ; 'ಲಕ್ಷ್ಮಿ ನಿವಾಸ' ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ
ಮಕ್ಕಳಿಂದಲೇ ಶ್ರೀನಿವಾಸ್‌ಗೆ ಮನೆಯಲ್ಲಿ ಮುಜುಗರ. ಆಟೋ ಓಡಿಸುವುದರಲ್ಲಿ ತಪ್ಪಿಲ್ಲ ಎಂದ ನೆಟ್ಟಿಗರು.....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರು ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿ ಶ್ರೀನಿವಾಸ್ ಕೆಲಸ ಕಳೆದುಕೊಂಡ ಮೇಲೆ ಕುಟುಂಬಸ್ಥರಿಗೆ ತಿಳಿಸದೆ ಆಟೋ ಓಡಿಸಲು ಆರಂಭಿಸುತ್ತಾರೆ. ಹೀಗೆ ಒಮ್ಮೆ ಪತ್ನಿಯ ಕೈಗೆ ಸಿಕ್ಕಿ ಬೀಳುತ್ತಾರೆ ಕೊನೆಗೆ ಸತ್ಯ ಒಪ್ಪಿಕೊಂಡು ಜೀವನ ನಡೆಸಲು ಮುಂದಾಗುತ್ತಾರೆ. ಸತ್ಯ ತಿಳಿಯದ ಮಕ್ಕಳಿಗೆ ಊರಿನ ಜನರು ತಂದೆ ಬಗ್ಗೆ ಹೇಳಲು ಶುರು ಮಾಡಿದ್ದಾರೆ. ನಿಮ್ಮ ತಂದೆಯನ್ನು ಆಟೋದಲ್ಲಿ ನೋಡಿದೆ, ನಿಮ್ಮ ತಂದೆ ಖಾಕಿ ಬಟ್ಟೆಯಲ್ಲಿ ಇದ್ದರು, ನಿಮ್ಮ ತಂದೆ ಆಟೋ ಚಾಲಕ ಎಂದು ಯಾರೋ ಪೋಸ್ಟ್ ಹಾಕಿದ್ದಾರೆ ಎಂದು ಕಿವಿ ಬೀಳುತ್ತಿದ್ದಂತೆ ಮನೆಯಲ್ಲಿ ಜೋರಾಗಿ ಜಗಳ ಶುರು ಮಾಡಿದ್ದಾರೆ.
ತಂದೆ ಈಗ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದಾರೆ ಇದರಿಂದ ನಮಗೆ ತುಂಬಾ ಅವಮಾನ ಆಗುತ್ತಿದೆ ಎಂದು ಮಕ್ಕಳು ಜಗಳ ಮಾಡಲು ಶುರು ಮಾಡಿದ್ದಾರೆ. ಎರಡು ಮೂರು ದಿನಗಳಿಂದ ಈ ವಿಚಾರದ ಬಗ್ಗೆ ಪ್ರಸಾರವಾಗುತ್ತಿದೆ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಶ್ರೀನಿವಾಸ್ ಮೌನವಾಗಿದ್ದಾರೆ ಇದರಿಂದ ನೆಟ್ಟಿಗರು ಗರಂ ಆಗಿದ್ದಾರೆ. ಆಟೋ ಚಾಲಕರು ಕಷ್ಟ ಪಟ್ಟು ದುಡಿಯುತ್ತಾರೆ, ಬೆಳಗ್ಗೆ ರಾತ್ರಿ ಅನ್ನೋದು ಯೋಚನೆ ಮಾಡಿದೆ ದುಡಿಯುತ್ತಾರೆ ಅವರನ್ನು ಅಗೌರವಿಸುತ್ತಿದ್ದೀರಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಮಗನೇ ಜೀವನದ ದಾರಿ ತೋರಿಸುತ್ತಿದ್ದಾನೆ; ಆನಿವರ್ಸರಿ ದಿನ ಗುಡ್ ನ್ಯೂಸ್ ಕೊಡುತ್ತಿರುವ ವಿಜಯ್ ರಾಘವೇಂದ್ರ?
ಆಟೋ ಚಾಲಕರ ಕಷ್ಟಗಳು, ಅವರ ಜೀವನ ಹೇಗಿರುತ್ತದೆ ಎಂದು ಜನರಿಗೆ ತಿಳಿಸಿ ಕೊಡಬೇಕು ಅಲ್ಲದೆ ಚಾಲಕರ ಮೇಲೆ ಜನರಿಗೆ ಗೌರವ ಹೆಚ್ಚಾಗುವಂತೆ ಮಾಡಬೇಕು ಅದು ಹೊರತಾಗಿ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿಸುವುದು ತಪ್ಪು ಎಂದು ಕೆಲವೊಂದು ಟ್ರೋಲ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ. ಅಸಹಾಯಕನಂತೆ ಶ್ರೀನಿವಾಸ್ ನಿಂತಿರುವುದನ್ನು ನೋಡಿ ವೀಕ್ಷಕರಿಗೆ ಬೇಸರ ಆಗಿದೆ. ದಯವಿಟ್ಟು ಬದಲಾವಣೆ ತರಬೇಕು ಎಂದು ಮನವಿ ಮಾಡಿದ್ದಾರೆ.
ಯೂಟ್ಯೂಬರ್ ಸತೀಶ್ ಈರೇಗೌಡ್ರೇ ಯಾವುದೇ ಕಾರಣಕ್ಕೂ ಎಣ್ಣೆ ಕುಡಿಯೋದು ಮಾತ್ರ ಬಿಡ್ಬೇಡಿ; ನೊಂದ ಯುವಕರ ಸಂಘದ
ಇನ್ನು ಭಾವನಾ ಕುತ್ತಿಗೆ ತಾಳಿ ಕಟ್ಟಿರುವುದು ಯಾರು ಎಂದು ಹುಡುಕುವ ಕೆಲಸದಲ್ಲಿ ಸಿದ್ದೇಗೌಡ್ರು ಮತ್ತು ವೆಂಕಿ ಬ್ಯುಸಿಯಾಗಿದ್ದಾರೆ. ಒಂದು ಪ್ರೋಮೋದಲ್ಲಿ ಪತಿಯನ್ನು ಸಪೋರ್ಟ್ ಮಾಡಿಕೊಂಡು ಲಕ್ಷ್ಮಿ ಮಾತನಾಡಿರುವುದನ್ನು ನೆಟ್ಟಿಗರು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.