ಲಕ್ಷ್ಮೀ ನಿವಾಸ: ಭಾವನಾ ತಾಳಿ ಕಿತ್ತೆಸೆಯೋದಕ್ಕೆ ಹೊರಟರೆ ನಿಮ್ ಬ್ಲೌಸ್ ಚೆನ್ನಾಗಿದೆ ಅನ್ನೋದಾ ನೆಟ್ಟಿಗರು!
ಸೀರಿಯಲ್‌ನಲ್ಲಿ ನಟಿಯರ ಡ್ರೆಸ್, ಮೇಕಪ್ ಬಗ್ಗೆ ನೆಟ್ಟಿಗರು ಎಷ್ಟು ಕುತೂಹಲದಿಂದಿರ್ತಾರೆ ಅಂದ್ರೆ ಇದೀಗ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೀರಿಯಸ್ ಸನ್ನಿವೇಶವೊಂದರಲ್ಲಿ ಆ ಸೀನ್ ಬಿಟ್ಟು ಭಾವನಾ ತೊಟ್ಟ ಬಟ್ಟೆ ಬಗ್ಗೆ ಚರ್ಚೆ ನಡೀತಿದೆ.
ಜೀ ಕನ್ನಡದಲ್ಲಿ ವೀಕ್ಷಕರ ಫೇವರಿಟ್ ಸೀರಿಯಲ್ ಆಗಿ ಹೊರ ಹೊಮ್ಮಿದೆ ಲಕ್ಷ್ಮೀ ನಿವಾಸ. ಕಿರುತೆರೆಯಲ್ಲಿ ಇತ್ತೀಚೆಗೆ ಆರಂಭವಾದ ಸೀರಿಯಲ್‌ಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಾಗಣ ಹೊಂದಿರೋ ಈ ಧಾರಾವಾಹಿಯ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.
ಈ ಧಾರಾವಾಹಿಯಲ್ಲಿ ಭಾವನಾ ಹಾಗೂ ಸಿದ್ದೇಗೌಡರ ಪಾತ್ರ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಭಾವನಳ ಒಳ್ಳೆ ಗುಣ, ಉತ್ತಮ ನಡವಳಿಕೆ, ವಿನಯಕ್ಕೆ ಸೋತಿರೋ ಪಕ್ಕ ಹಳ್ಳಿ ಹುಡುಗ ಸಿದ್ದೇಗೌಡ ಆಕೆಗೆ ತಾಳಿ ಕಟ್ಟಿಬಿಟ್ಟಿದ್ದಾನೆ. ಒಳಗೊಳಗೇ ಒದ್ದಾಡುವ ಈ ಜೋಡಿಗೆ ವೀಕ್ಷಕರು ಸಿಕ್ಕಾಪಟ್ಟೆ ಮನಸೋತಿದ್ದಾರೆ. ಸದ್ಯ ಒಂದೇ ಧಾರಾವಾಹಿಯಲ್ಲಿ ಬೇರೆ ಬೇರೆ ವಿಭಿನ್ನ ಕತೆಗಳು ನಡೀತಾ ಇರ್ತಾವೆ. ಒಂದು ಕರೆ ಜಯಂತ್ ಹಾಗೂ ಜಾನ್ವಿ ಮತ್ತೊಂದು ಕಡೆ ಭಾವನ ಹಾಗೂ ಸಿದ್ದೇಗೌಡ್ರು ಇನ್ನೊಂದು ಕಡೆ ವಿಶ್ವ ಹಾಗೂ ತನು. ಇದೀಗ ಈ ಕತೆಯಲ್ಲಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿರೋದು ಭಾವನಾ ಹಾಗೂ ಸಿದ್ದೇಗೌಡ ಜೋಡಿ. ಭಾವನಾ ತನಗೆ ಸಿಗಬೇಕು ಅಂತ ಸಿದ್ದೇಗೌಡ್ರು ಅಂದ್ರು ಕೊಂಡಿದ್ದರು. ಆದರೆ ಭಾವನಾ ಎಲ್ಲಿ ಕೈ ತಪ್ಪಿ ಹೋಗಿ ಬಿಡುತ್ತಾರೆ ಅಂತ ಸಿದ್ದೇಗೌಡ್ರು ಕದ್ದು ಮುಚ್ಚಿ ತಾಳಿ ಕಟ್ಟಿ ಮದುವೆ ಆಗಿ ಬಿಟ್ಟಿದ್ದರು. ಆದರೆ ತನ್ನ ಕತ್ತಲ್ಲಿ ತಾಳಿ ನೋಡಿದ ಭಾವನ ಪ್ರತಿ ದಿನ ಕೊರಗುತ್ತಿದ್ದಾಳೆ.
ವೀಣಕ್ಕನ ಕಪಾಳಕ್ಕೆ ಬಾರಿಸಿಬಿಡೋದಾ ತಿರುಬೋಕಿ ಸಂತೋಷ, ಥೂ ಇವ್ನ ಜನ್ಮಕ್ಕೆ ಅಂತ ಝಾಡಿಸ್ತಿದ್ದಾರೆ ನೆಟ್ಟಿಗರು!
ಇದೀಗ ಸೀರಿಯಲ್‌ನಲ್ಲಿ ಸೀರಿಯಸ್ ಆಗಿರೋ ಕಥೆ ನಡೀತಿದೆ. ಭಾವನಾ ಕತ್ತಲ್ಲಿರೋ ತಾಳಿ ವಿಚಾರ ಮನೆಯವ್ರಿಗೆಲ್ಲ ಗೊತ್ತಾಗಿಬಿಟ್ಟಿದೆ. ಮನೆಯವರಿಗೆಲ್ಲ ಬಹಳ ಬೇಸರವಾಗಿದೆ. ಅಣ್ಣ ಸಂತೋಷ ಅಂತೂ ಬಾಯಿಗೆ ಬಂದ ಹಾಗೆ ಮಾತನಾಡಿ ನೊಂದ ಭಾವನಾಗೆ ಮತ್ತಷ್ಟು ನೋವು ಕೊಟ್ಟಿದ್ದಾನೆ. ಇದೆಲ್ಲ ಕಂಡು ಸಾಕಾಗಿರುವ ಭಾವನಾ ದೇವಸ್ಥಾನಕ್ಕೆ ಹೋಗಿ ದೇವಿ ಮುಂದೆ ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಅವಳ ತಾಳಿಯನ್ನು ಅವಳಿಗೇ ವಾಪಾಸ್ ಮಾಡಲು ಹೊರಟಿದ್ದಾಳೆ. ತನ್ನ ಕತ್ತಲ್ಲಿದ್ದ ತಾಳಿಯನ್ನು ಕಿತ್ತು ದೇವಿಗೆ ನೀಡಬೇಕು ಅನ್ನುವಾಗ ಒಂದು ಬಲಿಷ್ಠ ಹಸ್ತ ಅವಳನ್ನು ತಡೆದಿದೆ. ಅದು ಮತ್ಯಾರೂ ಅಲ್ಲ, ಸಿದ್ದೇಗೌಡ್ರು. ಈಗಲಾದ್ರೂ ಸಿದ್ದೇಗೌಡ ತಾನೇ ತಾಳಿ ಕಟ್ಟಿದ್ದು ಅನ್ನೋ ಸತ್ಯವನ್ನ ಭಾವನ ಮುಂದೆ ಹೇಳ್ತಾನ ಅನ್ನೋ ಕುತೂಹಲ ಮಡುಗಟ್ಟಿದೆ.
ಆದರೆ ವೀಕ್ಷಕರ ಅದರಲ್ಲೂ ಮಹಿಳಾ ವೀಕ್ಷಕರ ಕಣ್ಣು ಈ ಸೀನ್‌ನಲ್ಲಿ ಭಾವನಾ ತೊಟ್ಟ ಬ್ಲೌಸ್‌ನತ್ತ ಹೋಗಿದೆ. ಕಡು ನೀಲಿ ಬಣ್ಣದಲ್ಲಿ ಬಿಳಿ ಬುಟ್ಟ ಇರುವ ಚೆಂದದ ಕಾಟನ್ ಸೀರೆಗೆ ನೀಲಿ ಬಣ್ಣದ ಕ್ಲೋಸ್ ನೆಕ್‌ನ ಬ್ಲೌಸ್ ಭಾವನಾ ಪಾತ್ರ ಮಾಡಿರೋ ದಿಶಾ ಮದನ್ ತೊಟ್ಟಿದ್ದಾರೆ. ಈ ಬ್ಲೌಸ್ ಡಿಸೈನ್‌ಗೆ ವೀಕ್ಷಕರು ಫುಲ್ ಫಿದಾ ಆಗಿ ಕಾಮೆಂಟ್ ಮೇಲೆ ಕಾಮೆಂಟ್ ಮಾಡ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಆರ್ಟಿಸ್ಟ್ ಕಾಸ್ಟ್ಯೂಮ್ ಅನ್ನು ಗುರುತಿಸಿ ಮೆಚ್ಚಿಕೊಳ್ಳೋದ್ರಲ್ಲಿ ಏನ್ ತಪ್ಪಿದೆ ಅಂತ ಕೇಳಿದ್ದಾರೆ.
ಸೊಸೆಯ ಮುಟ್ಟಬಾರದ ಜಾಗ ಮುಟ್ಟಿಬಿಟ್ರಾ ಮುಖೇಶ್ ಅಂಬಾನಿ? ಟ್ರಿಲಿಯನೇರ್ ಉದ್ಯಮಿಗೆ ನೆಟ್ಟಿಗರ ಹಿಗ್ಗಾಮಗ್ಗಾ ಕ್ಲಾಸ್
ಸದ್ಯ ಸಿದ್ದೇಗೌಡರು ಭಾವನಾ ಮುಂದೆ ಸತ್ಯ ರಿವೀಲ್ ಮಾಡ್ತಾರ ಇಲ್ವಾ ಅಂತ ಗೊತ್ತಿಲ್ಲ. ಆದರೆ ಭಾವನಾ ಪಾತ್ರಧಾರಿ ದಿಶಾ ಈ ರೀತಿ ಸೊಗಸಾದ ಪೋಷಾಕಿನಲ್ಲಿ ಬಂದರೆ ವೀಕ್ಷಕರು ಅವರ ಕಾಸ್ಟ್ಯೂಮ್‌ಗಾದ್ರೂ ಈ ಸೀರಿಯಲ್ ನೋಡಹುದು ಅನ್ನೋದನ್ನಂತೂ ನಂಬಬಹುದೇನೋ.
ಈ ಹಿಂದೆ ಭಾವನಾ ತಂಗಿ ಪಾತ್ರ ಮಾಡಿದ್ದ ಚಂದನಾ ಅನಂತಕೃಷ್ಣ ಅವರ ಕಾಸ್ಟ್ಯೂಮ್ ಬಗ್ಗೆ ಇದೇ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದ್ರು. ಇದು ಅವರಿಗೆ ಬೇಸರವನ್ನೂ ತಂದಿತ್ತು. ಸೋ ಸೀರಿಯಲ್ ಕಲಾವಿದರು ಬರೀ ನಟನೆಯನ್ನಷ್ಟೇ ನಂಬಿಕೊಂಡರೆ ಸಾಕಾಗಲ್ಲ, ಕಾಸ್ಟ್ಯೂಮ್ ಬಗ್ಗೆಯೂ ಗಮನ ಕೊಡಬೇಕು ಅನ್ನೋದಂತೂ ಸತ್ಯ.