ಸೊಸೆ ಜೊತೆ ಮುಖೇಶ್ ಅಂಬಾನಿ ಅನುಚಿತ ವರ್ತನೆ? ಟ್ರಿಲಿಯನೇರ್ ಉದ್ಯಮಿಗೆ ನೆಟ್ಟಿಗರ ಹಿಗ್ಗಾಮಗ್ಗಾ ಕ್ಲಾಸ್
ಗಣಪತಿ ದರ್ಶನ ಪಡೆಯುವಾಗ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಕೇಶ್ ಅಂಬಾನಿಯನ್ನು ಸೊಸೆಯನ್ನು ಎಳೆದಿದ್ದನ್ನು ನೆಟ್ಟಿಗರು ಮಿಸ್ ಬಿಹೇವಿಯರ್ ಎನ್ನುತ್ತಿದ್ದಾರೆ. ನಿಮಗೂ ಈ ವೀಡಿಯೋ ನೋಡಿ ಹಾಗೆ ಅನಿಸಿದ್ದು ಇದ್ಯಾ?
![Mukhesh ambani miss behaved with his daughter in law radhika merchent vedio viral Mukhesh ambani miss behaved with his daughter in law radhika merchent vedio viral](https://static-gi.asianetnews.com/images/01j7qnhz8ar13dqq6bgbgm8v68/mukesh-ambani-and-daughter-in-law_363x203xt.jpg)
ಮುಖೇಶ್ ಅಂಬಾನಿ ದೇಶದ ಬಹುದೊಡ್ಡ ಉದ್ಯಮಿ. ತನ್ನ ಶ್ರೀಮಂತಿಗೆ ಯಾವ ಲೆವೆಲ್‌ನದು ಅಂತ ಇತ್ತೀಚೆಗೆ ಮಗನ ಮದುವೆ ನೆವದಲ್ಲಿ ಇಡೀ ವಿಶ್ವಕ್ಕೇ ಸಾರಿ ಬಿಟ್ಟರು. ಅಂಥಾ ಮದುವೆ ಬಹುಶಃ ಈ ದೇಶದ ಜನ ನೋಡಿರೋದಕ್ಕೆ ಸಾಧ್ಯವೇ ಇಲ್ಲ. ವೈಭವೋಪೇತ ಕ್ರೂಸ್‌ನಲ್ಲೊಮ್ಮೆ, ಮುಂಬೈಯಲ್ಲೊಮ್ಮೆ, ಇಂಗ್ಲೆಂಡಿನಲ್ಲೊಮ್ಮೆ ಅಂತ ಮದುವೆ ನಡೆದದ್ದೇ ನಡೆದದ್ದು. ತನ್ನ ಮಗನ ಮದುವೆಗೆ ಮುಖೇಶ್ ಅಂಬಾನಿ ಎಷ್ಟು ಖರ್ಚು ಮಾಡಿದರು ಅನ್ನೋದನ್ನು ಊಹಿಸೋದಕ್ಕೂ ಸಾಧ್ಯವಿಲ್ಲ. ಸದ್ಯಕ್ಕಂತೂ ಟ್ರಿಲಿಯನೇರ್ ಅನಿಸಿಕೊಂಡಿರುವ ಈ ಮಹಾ ಶ್ರೀಮಂತ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್‌ಗೆ ಸಡ್ಡು ಹೊಡೆಯಲು ಹೊರಟಿದ್ದಾರೆ. ಇಷ್ಟೆಲ್ಲ ಅದ್ದೂರಿಯಾಗಿ ಮದುವೆ ಮಾಡಿಸಿ ಮನೆ ತುಂಬಿಸಿಕೊಂಡ ಗಿಣಿಯಂಥಾ ಸೊಸೆ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಅನ್ನೋ ಕನಿಷ್ಠ ಮ್ಯಾನರ್ಸೂ ಈ ಮಹಾ ವ್ಯಕ್ತಿಗೆ ಇಲ್ಲದೇ ಹೋಯ್ತೇ ಅಂತ ನೆಟ್ಟಿಗರು ಹಿಗ್ಗಾಮಗ್ಗಾ ಝಾಡಿಸ್ತಿದ್ದಾರೆ. ಅದಕ್ಕೇನು ಕಾರಣ?
ಇದಕ್ಕೆ ಕಾರಣ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಲೇ ಟ್ರೋಲ್ ಆಗ್ತಿರೋ ಒಂದು ವೀಡಿಯೋ, ಇದರಲ್ಲಿ ಮುಖೇಶ್ ಅಂಬಾನಿ ಸೊಸೆಯ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಅಂತ ಜನ ಛೀಮಾರಿ ಹಾಕ್ತಿದ್ದಾರೆ. ಗೊತ್ತಿದ್ದೋ, ಸೊಸೆಯನ್ನು ರಕ್ಷಿಸುವ ಸಲುವಾಗಿ ಮಾಡಿದ್ರೋ ಗೊತ್ತಿಲ್ಲ. ಆದರೆ, ಜನರು ಮಾತ್ರ ಕೆಟ್ಟ ದೃಷ್ಟಿಯಿಂದಾನೇ ಕಮೆಂಟ್ ಮಾಡೋದು ನಿಂತಿಲ್ಲ.
ಚೆಡ್ಡಿ ಜಾಹೀರಾತಿನಲ್ಲಿ ಕೆಜಿಎಫ್ ಸ್ಟಾರ್! ಯಶ್ ಹೊಸ ಆ್ಯಡ್‌ಗೆ ನೆಟ್ಟಿಗರು ಕೊಟ್ಟ ಟಾಂಗ್ ನೋಡಿ
ಕಳೆದ ಜುಲೈ 12ರಂದು ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರ ಕೈ ಹಿಡಿದು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್, ಹಾಲಿವುಡ್ ದಂಡೇ ಆ ಮದುವೆಗೆ ಸಾಕ್ಷಿಯಾಗಿತ್ತು. ಮದುವೆಯ ವೈಭವ ನೋಡಿದ್ರೆ ಇಂದ್ರಲೋಕವೇ ಧರೆಗಳಿದು ಬಂದಿದೆಯೇನೋ ಅನ್ನುವಷ್ಟು ಅದ್ಧೂರಿ, ವಿಜೃಂಭಣೆಯಿಂದ ನಡೆದಿತ್ತು. ಆ ಬಳಿಕ ಈ ಕುಟುಂಬ ಮತ್ತೊಂದು ಶುಭಕಾರ್ಯಕ್ಕೆ ಅಣಿಯಾಯಿತು. ಅದು ಗಣೇಶೋತ್ಸವ. ಗಣೇಶ ಹಬ್ಬದ ವೈಭವದಲ್ಲಿ ಮುಳುಗಿದ್ದ ಅಂಬಾನಿ ಫ್ಯಾಮಿಲಿಯ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ಮುಖೇಶ್ ಅಂಬಾನಿ ನಡೆ ಮಾತ್ರ ಟೀಕೆಗೆ ಕಾರಣವಾಗಿದೆ. ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಕ್ಷಿಯಾಗಲು ಮುಖೇಶ್ ಅಂಬಾನಿಯ ನಿವಾಸವಾದ ಅಂಟಿಲಿಯಾಗೆ ಬಾಲಿವುಡ್ನ ಹಲವು ನಟರ ಸಾಕ್ಷಿಯಾಗಿದ್ದರು.
ರಾಧಿಕಾ ಹಾಗೂ ಅನಂತ ವಿವಾಹದ ನಂತರ ಮತ್ತೊಂದು ಅದ್ಧೂರಿ ಮಹೋತ್ಸವಕ್ಕೆ ಅಂಟಿಲಿಯಾ ಸಾಕ್ಷಿಯಾಗಿತ್ತು. ಇದೇ ವೇಳೆ ಅನೇಕ ಬಾಲಿವುಡ್ ನಟರು ಬಂದಿದ್ದರಿಂದ ಸಹಜವಾಗಿ ಸೋಷಿಯಲ್ ಮಿಡಿಯಾಗಳಲ್ಲಿ ಅವರ ಫೋಟೋಗಳು ವೈರಲ್ ಆಗಿದ್ದವು. ಆದ್ರೆ ಅದರ ಜೊತೆ ವೈರಲ್ ಆಗಿರುವ ಒಂದು ವಿಡಿಯೋ ಇದೀಗ ಟೀಕೆಗೆ ಕಾರಣವಾಗಿದೆ.
ವೀಣಕ್ಕನ ಕಪಾಳಕ್ಕೆ ಬಾರಿಸಿಬಿಡೋದಾ ತಿರುಬೋಕಿ ಸಂತೋಷ, ಥೂ ಇವ್ನ ಜನ್ಮಕ್ಕೆ ಅಂತ ಝಾಡಿಸ್ತಿದ್ದಾರೆ ನೆಟ್ಟಿಗರು!
ಈ ಗಣೇಶೋತ್ಸವ ಟೈಮಲ್ಲಿ ಮುಖೇಶ್ ಅಂಬಾನಿ ತನ್ನ ಸೊಸೆ ರಾಧಿಕಾ ಮರ್ಚೆಂಟ್ ನಡುವಿಗೆ ಕೈ ಹಾಕಿದ್ದಾರೆ. ತನಗಿಂತ ಮುಂದೆ ನಿಂತಿದ್ದ ಆಕೆಯ ಸೊಂಟಕ್ಕೆ ಕೈ ಹಾಕಿ ತಮ್ಮ ಸಮೀಪಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ರಾಧಿಕಾ ಮರ್ಚೆಂಟ್ ಮುಖವೂ ಗಂಭೀರವಾದಂತಿದೆ. ಅವರ ಬದಲಾದ ಮುಖಭಾವ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಬ್ಯಾಡ್ ಟಚ್, ತಮ್ಮ ಸೊಸೆಯೊಂದಿಗೆ ಹೇಗೆ ನಡೆದುಕೊಳ್ಬೇಕು ಅನ್ನೋದು ಮುಕೇಶ್ ಅಂಬಾನಿಗೆ ಗೊತ್ತಿಲ್ವಾ? ಎಂಬುವುದು ನೆಟ್ಟಿಗರ ಕಮೆಂಟ್. ಈ ಹಿಂದೆ ಮುಖೇಶ್ ಜೊತೆ ಪತ್ನಿ ನೀತಾ ಅಂಬಾನಿಯೂ ಮುಜುಗರಪಟ್ಟುಕೊಳ್ತಿದ್ರು. ಆಗ ಇದೆಲ್ಲ ನೀತಾ ಅಂಬಾನಿಯ ಸೊಕ್ಕಿನ ಸಂಕೇತವೆಂದು ಜನ ಕಾಮೆಂಟ್ ಮಾಡಿದ್ರು. ಆದರೆ ಇದೀಗ ಈ ವ್ಯಕ್ತಿಯ ಈ ಮುಖ ನೋಡಿದ್ಮೇಲೆ ನೀತಾ ಬಗ್ಗೆ ನಾವು ತಪ್ಪು ತಿಳ್ಕೊಂಡಿದ್ವಿ ಅಂತಿದ್ದಾರೆ ಕೆಲವರು. ಆದರೆ, ಮುಕೇಶ್ ಉದ್ದೇಶ ಮಾತ್ರ ಸೊಸೆಯನ್ನು ಜನರಿಂದ ರಕ್ಷಿಸುವುದಾಗಿರಬಹುದೂ ಎಂದೂ ಹೇಳಿದ್ದಾರೆ ಕೆಲವರು.