ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಕಲಾವಿದರು ಹೇಗೆ ಡೈಲಾಗ್‌ ಹೇಳ್ತಾರೆ? ಡೈಲಾಗ್‌ ಹೇಳುವಾಗ ಏನೆಲ್ಲ ತಪ್ಪು ಮಾಡ್ತಾರೆ ಎನ್ನುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.  

ಧಾರಾವಾಹಿಯಿರಲೀ, ಸಿನಿಮಾವಿರಲೀ ಕಲಾವಿದರು ಎಲ್ಲ ಬಾರಿಯೂ ಒಂದೇ ಟೇಕ್‌ನಲ್ಲಿ ಮುಗಿಸಲು ಆಗೋದಿಲ್ಲ. ಸಾಕಷ್ಟು ಬಾರಿ ಟೇಕ್‌ ತಗೊಳ್ಳುವ ಪರಿಸ್ಥಿತಿ ಕೂಡ ಬರುತ್ತದೆ. ಈಗ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಕಲಾವಿದರು ಡೈಲಾಗ್‌ ಹೇಳಲು ಎಷ್ಟು ಸರ್ಕಸ್‌ ಮಾಡ್ತಾರೆ ಎನ್ನೋದನ್ನು ಸಂಕಲನಕಾರ ಗುರುಮೂರ್ತಿ ಹೆಗಡೆ ಕಣ್ಣೀಪಾಲ ಅವರು ರಿವೀಲ್‌ ಮಾಡಿದ್ದಾರೆ. 

ಒಂದೇ ಟೇಕ್‌ನಲ್ಲಿ ಡೈಲಾಗ್‌ ಹೇಳೋದು ಕಷ್ಟ
ಓರ್ವ ಕಲಾವಿದ ಬೇರೆ ಪಾತ್ರದೊಳಗಡೆ ಪರಕಾಯ ಪ್ರವೇಶ ಮಾಡಬೇಕು, ಬೇರೆಯವರು ಬರೆದ ಸ್ಕ್ರಿಪ್ಟ್‌ ಓದಿ, ಡೈಲಾಗ್‌ ಡೆಲಿವರಿ ಮಾಡಬೇಕು. ಆಗ ಒಂದೇ ಟೇಕ್‌ನಲ್ಲಿ ಡೈಲಾಗ್‌ ಹೇಳೋದು ಕಷ್ಟ ಆಗುವುದು, ನಾಲಿಗೆ ತೊದಲುವುದು. 

ರಿಯಲ್ ಗಂಡನ ಹುಟ್ಟುಹಬ್ಬ ಆಚರಿಸಿದ 'ಲಕ್ಷ್ಮಿ ನಿವಾಸ' ಭಾವನಾ; ಇವರೇ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್

ವಿಡಿಯೋದಲ್ಲಿ ಏನಿದೆ? 
ಗುರುಮೂರ್ತಿ ಹೆಗಡೆ ಅವರು ಜಯಂತ್‌, ಸಿದ್ದೇಗೌಡ್ರು, ಜಾಹ್ನವಿ, ಸಂತೋಷ್‌ ಪಾತ್ರಧಾರಿಗಳು ಡೈಲಾಗ್‌ ಹೇಳುವಾಗ ಮಾಡುವ ಎಡವಟ್ಟನ್ನು ಎಡಿಟ್‌ ಮಾಡದೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಕ್ಕೆ ದಿಶಾ ಮದನ್‌ ಕೂಡ ʼರೆಡಿ?ʼ ಎಂದು ಕಾಮೆಂಟ್‌ ಮಾಡಿದ್ದಾರೆ. 

ಪಾತ್ರಧಾರಿಗಳು 
ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಪಾತ್ರದಲ್ಲಿ ನಟ ಧನಂಜಯ ಅಭಿನಯಿಸುತ್ತಿದ್ದಾರೆ. ಭಾವನಾ ಪಾತ್ರದಲ್ಲಿ ದಿಶಾ ಮದನ್‌, ಸಂತೋಷ್‌ ಪಾತ್ರದಲ್ಲಿ ಮಧು ಹೆಗಡೆ, ಸಂತೋಷ್‌ ಪತ್ನಿ ಪಾತ್ರದಲ್ಲಿ ಲಕ್ಷ್ಮೀ ಹೆಗಡೆ, ಜಾಹ್ನವಿ ಪಾತ್ರದಲ್ಲಿ ಚಂದನಾ ಅನಂತಕೃಷ್ಣ, ಜಯಂತ್‌ ಪಾತ್ರದಲ್ಲಿ ದೀಪಕ್‌ ಸುಬ್ರಹ್ಮಣ್ಯ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವಿದೆ. ವಾರದಲ್ಲಿ ಐದು ದಿನಗಳ ಕಾಲ ಒಂದು ಗಂಟೆ ಎಪಿಸೋಡ್‌ ಪ್ರಸಾರ ಆಗುವುದು. 

ಬರಿದ ಒಡಲಿನಲ್ಲಿ ಬಂದ ಚಿನ್ನುಮರಿ; ಚೆಲುವಿ ಪ್ರಶ್ನೆಗೆ ದಂಗಾದ ಸೈಕೋ ಜಯಂತ್‌ನ ಹೃದಯ ಪುಕ ಪುಕ

ಬೇರೆ ಬೇರೆ ಕಥೆ
ಲಕ್ಷ್ಮೀ ಹಾಗೂ ಶ್ರೀನಿವಾಸ್‌ ದಂಪತಿಗೆ ನಾಲ್ವರು ಮಕ್ಕಳು. ವೆಂಕಿಯನ್ನು ಇವರು ದತ್ತು ತಗೊಂಡು ಸಾಕಿದ್ದರು. ಲಕ್ಷ್ಮೀ ಇಬ್ಬರು ಮಕ್ಕಳಾದ ಸಂತೋಷ್‌, ಹರೀಶ್‌ಗೆ ತಾವು ದುಡಿದು ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಮನಸ್ಥಿತಿ ಇಲ್ಲ. ಶ್ರೀನಿವಾಸ್‌ ತುಂಬ ಕಷ್ಟಪಡುತ್ತಿದ್ದರೂ ಕೂಡ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ವೆಂಕಿಯನ್ನು ತನ್ನ ಮನೆಯವನು ಅಂತ ಸಂತೋಷ್‌ ಒಪ್ಪಿಕೊಳ್ಳೋಕೆ ಇಷ್ಟಪಡೋದಿಲ್ಲ. ಇನ್ನೊಂದು ಕಡೆ ಭಾವನಾ-ಸಿದ್ದೇಗೌಡ್ರು ಸ್ಟೋರಿ ನಡೆಯುತ್ತಿದೆ. ಭಾವನಾಗಿಂತ ಸಿದ್ದು ಐದು ವರ್ಷ ಚಿಕ್ಕವನು. ಸಿದ್ದುನನ್ನು ಭಾವನಾ ಇಷ್ಟಪಡ್ತಾಳಾ? ಇವರಿಬ್ಬರು ಒಂದಾಗ್ತಾರಾ ಎನ್ನೋ ಪ್ರಶ್ನೆ ಇದೆ. ಭಾವನಾ ನನ್ನ ಮನೆ ಸೊಸೆ ಅಂತ ಅವರ ಮನೆಯವರು ಇನ್ನೂ ಒಪ್ಪಿಕೊಂಡಿಲ್ಲ. ಇನ್ನೊಂದು ಕಡೆ ಜಯಂತ್‌ ಸೈಕೋ ಎನ್ನೋದು ಜಾಹ್ನವಿಗೆ ಅರ್ಥ ಆಗಿದೆ. ಜಾಹ್ನವಿ ಹಾಗೂ ವಿಶ್ವ ಒಂದಾಗ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಾಗಿದೆ. 

View post on Instagram