- Home
- Entertainment
- TV Talk
- ರಿಯಲ್ ಗಂಡನ ಹುಟ್ಟುಹಬ್ಬ ಆಚರಿಸಿದ 'ಲಕ್ಷ್ಮಿ ನಿವಾಸ' ಭಾವನಾ; ಇವರೇ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್
ರಿಯಲ್ ಗಂಡನ ಹುಟ್ಟುಹಬ್ಬ ಆಚರಿಸಿದ 'ಲಕ್ಷ್ಮಿ ನಿವಾಸ' ಭಾವನಾ; ಇವರೇ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್
ಸೋಷಿಯಲ್ ಮೀಡಿಯಾದಲ್ಲಿ ಗಂಡನ ಹುಟ್ಟುಹಬ್ಬಕ್ಕೆ ಫೋಟೋ ಹಂಚಿಕೊಂಡ ದಿಶಾ ಮದನ್. ಅಸಲಿ ಗಂಡನೇ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಮಿಂಚುತ್ತಿರುವ ದಿಶಾ ಮದನ್ ತಮ್ಮ ಅಸಲಿ ಗಂಡ ಹುಟ್ಟುಹಬ್ಬ ಆಚರಿಸಿದ್ದಾರೆ..
ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಡ್ಯಾನ್ಸರ್ ಆಗಿರುವ ದಿಶಾ ಮದನ್ ರಿಯಲ್ ಪತಿ ಹೆಸರು ಶಶಾಂಕ್ ಎಂದು. ಉದ್ಯಮಿ ಆಗಿದ್ದು ದೊಡ್ಡ ಕಂಪನಿ ಹೊಂದಿದ್ದಾರೆ.
'ನನ್ನ ಪ್ರೀತಿಯ ಹ್ಯೂಮನ್ ಹೋಮ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ಇಲ್ಲಿ ಪ್ರೀತಿ, ನಗು ಮತ್ತು ನೆಮ್ಮದಿ ಶಾಶ್ವತವಾಗಿರುತ್ತದೆ' ಎಂದು ದಿಶಾ ಮದನ್ ಬರೆದುಕೊಂಡಿದ್ದಾರೆ.
ದಿಶಾ ಮದನ್ ಅಪ್ಲೋಡ್ ಮಾಡಿರುವ ರೊಮ್ಯಾಂಟಿಕ್ ಫೋಟೋಗೆ ಆನ್‌ಸ್ಕ್ರೀನ್ ಪಾರ್ಟನರ್ ಆಗಿರುವ ಸಿದ್ಧೇ ಗೌಡ್ರು ಉರ್ಫ್ ಧನಂಜಯ್ ಕಾಮೆಂಟ್ ಮೂಲಕ ವಿಶ್ ಮಾಡಿದ್ದಾರೆ.
'ಹ್ಯಾಪಿ ಬರ್ತಡೇ ಶಶಾಂಕ್ ಸರ್. ದೇವರು ನಿಮಗೆ ಆರೋಗ್ಯ ಆಯಸ್ಸು ಮತ್ತು ನೆಮ್ಮದಿ ನೀಡಲಿ. ನಿಮ್ಮ ಕನಸು ನನಸಾಗಲಿ ಹಾಗೂ ಸದಾ ಖುಷಿಯಾಗಿರಿ' ಎಂದು ಧನಂಜಯ ಕಾಮೆಂಟ್ ಮಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ದಿಶಾ ಮತ್ತು ಶಶಾಂಕ್ ಪರಿಚಯವಾಗಿದ್ದು. ಹಲವು ವರ್ಷಗಳ ಕಾಲ ಇಬ್ಬರು ಪ್ರೀತಿಸಿ ಆನಂತರ ಪೋಷಕರ ಒಪ್ಪಿಗೆಗೆ ಕಾದು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.
ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆದ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ದಿಶಾ ಮತ್ತು ಶಶಾಂಕ್ ಭಾಗಿಯಾಗಿದ್ದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹೀಗಾಗಿ ದಿಶಾರನ್ನು ಸಂತೂರ್ ಮಮ್ಮಿ ಎಂದು ನೆಟ್ಟಿಗರು ಕರೆಯುತ್ತಾರೆ.