ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿನ ಧಾರಾವಾಹಿ 'ಕಮಲಿ'ಯಲ್ಲಿ ನೆಗೆಟಿವ್ ಪಾತ್ರಧಾರಿ ಅನಿಕಾ ಅಲಿಯಾಸ್‌ ರಚನಾ ಸ್ಮಿತ್ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಗ್ಲಾಮರಸ್‌ ಫೋಟೋಸ್!

ಮುಗ್ಧ ಹಳ್ಳಿ ಹುಡುಗಿ ಕಮಲಿ ವಿರುದ್ಧ ಸದಾ ಪಿತೂರಿ ಮಾಡುವ ಅನಿಕಾ ಪಾತ್ರವನ್ನು ವೀಕ್ಷಕರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ರಿಯಲ್‌ ಲೈಫ್‌ ರಚನಾನೂ ಹಾಗೇ ಎಂದು ಕೊಂಡಿದ್ದಾರೆ. ಜನರ ಬೈಗುಳ ಸಹಿಸಿಕೊಳ್ಳಲಾಗದೇ ಸುಮಾರು 6 ತಿಂಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರಂತೆ, ಈ ನಟಿ.

ಚಿಕ್ಕವಯಸ್ಸಿನಿಂದಲೂ ನಟಿಯಾಗಬೇಕೆಂದು ಕನಸು ಹೊತ್ತಿದ್ದ ರಚನಾ ಬಣ್ಣದ ಲೋಕಕ್ಕೆ ಕಾಲಿಟ್ಟು 9 ವರ್ಷಗಳನ್ನು ಪೂರೈಸಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್‌ ತಂದು ಕೊಟ್ಟಿದ್ದು ಕಮಲಿ ಧಾರಾವಾಹಿ.  ಲೀಡ್‌ ನೆಗೆಟಿವ್ ಪಾತ್ರವಾಗಿರುವ ಕಾರಣ ಜನರು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರಂತೆ. ಆದರೆ ಹೊರಗೆ ಹೋದರೆ ಜನರು ನಟನೆಯನ್ನು ಹೊಗಳುತ್ತಿದ್ದರು.  ಪಾತ್ರ ಜನರ ಮೇಲೆ ಅಷ್ಟೊಂದು ಪ್ರಭಾವ ಬೀರುತ್ತಿರುವ ಕಾರಣ ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ.  

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಮತ್ತೊಂದು ಮುಖವಿದು!

ಪಿಯುಸಿ ಮುಗಿಸಿ ಎರಡು ವರ್ಷಗಳ ಕಾಲ ಮಾಡಲಿಂಗ್ ಮಾಡಿದ ರಚನಾ 'ವರದನಾಯಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದವರು. ಶರಣ್‌ ಅವರ 'ವಿಕ್ಟರಿ' ಸಿನಿಮಾದಲ್ಲೂ ಅಭಿನಯಿಸಿದ್ದಾರೆ ಹಾಗೂ ತೆಲುಗು ಸಿನಿಮಾ 'ಲೈಫ್‌ ಸೂಪರ್‌ ಗುರು' ನಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಯಾವುದೇ ಮದುವೆ ಪ್ಲಾನ್‌ ಇಲ್ಲದ ರಚನಾ ತಮಗೆ 60 ವರ್ಷವಾದರೂ, ನಟಿಸುತ್ತಲೇ ಇರುತ್ತೇನೆ, ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.