ಕಿರುತೆರೆಯ ಖ್ಯಾತ ಧಾರಾವಾಹಿ 'ಜೊತೆ ಜೊತೆಯಲಿ' TRPಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ಎಷ್ಟು ನಿಜವೋ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವುದು ಹೌದು. ಆರ್ಯವರ್ಧನ್ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ಗೆ ಫಿದಾ ಆಗುತ್ತಿರುವ ಹುಡುಗಿಯರು ಈಗ ಅಂತಹ ಹುಡುಗನೇ ಬೇಕು ಎಂದು ಕನಸು ಕಾಣುತ್ತಿದ್ದಾರೆ.

ನಿಜ ಜೀವನದ ನಾಲ್ವರು ಅಮ್ಮಂದಿರ 'ಜೊತೆ ಜೊತೆಯಲಿ' ಆರ್ಯವರ್ಧನ್!

 

ಇನ್ನು ಹುಡುಗರು ಸುಮ್ಮನೆ ಇರ್ತಾರಾ? ಅನು ಇನೋಸೆಂಟ್ ಲುಕ್‌ ಹಾಗೂ ಆಕೆ ಮಾತನಾಡುವ ಶೈಲಿಗೆ ಕ್ಲೀನ್ ಬೋಲ್ಡ್‌ ಆಗಿದ್ದಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗಿಯಾಗಿ ಜೀವನವನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಭೇಷ್ ಹೇಳುತ್ತಿದ್ದಾರೆ. ಇದರ ನಡುವೆ ದರ್ಶನ್ ಹೇಗೆ ಬಂದ್ರು ಅಂತಾನ ಇಲ್ಲಿದೆ ನೋಡಿ.

'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

 

ಖಾಸಗಿ ವಾಹಿನಿಯಲ್ಲಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಸಂದರ್ಶನವೊಂದರಲ್ಲಿ ತನ್ನ ನೆಚ್ಚಿನ ನಟ 'ದರ್ಶನ್ ಸರ್' ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ನನಗೆ ಅಣ್ಣನಂತೆ. ಅವರೊಂದಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಾಡದೇ ನಟಿಸುತ್ತೇನೆ ಎಂದು ಮನದಾದೆ ಹೇಳಿಕೊಂಡಿದ್ದಾರೆ. ಇದನ್ನು ಹೇಳಿದ ಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಅನುಗೆ ದರ್ಶನ್ ಒಟ್ಟಿಗೆ ನಟಿಸುವ ಆಸೆ ಎಂದು ಹರಿದಾಡುತ್ತಿದೆ.

IAS ಕನಸು ಕಂಡ ಹುಡುಗಿಯ ಕೈ ಹಿಡಿದದ್ದು ನಟನೆ. 'ಜೊತೆ ಜೊತೆಯಲಿ' ಧಾರಾವಾಹಿ ದೊಡ್ಡ ಮಟ್ಟದ ಹೆಸರು ತಂದುಕೊಡುತ್ತಿದೆ. ಇದೇ ಯಶಸ್ಸು ಅವರಿಗೆ ಸಿನಿಮಾದಲ್ಲೂ ಸಿಗಲಿ ಎಂದು ಆಶಿಸೋಣ.

ನವೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: