Asianet Suvarna News Asianet Suvarna News

ಆರ್ಯವರ್ಧನ್ ಭೇಟಿ ಮಾಡಲು ಅವಕಾಶ;' ವಿಶ್ವಾಸವೇ ನನಗೆ ಅತಿ ದೊಡ್ಡ ಗಿಫ್ಟ್'!

ನಟ ಅನಿರುದ್ಧ್‌ನನ್ನು ಭೇಟಿ ಮಾಡಲು ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್‌ ನ್ಯೂಸ್. ಶೂಟಿಂಗ್ ಹಾಗೂ ಮನೆ ವಿಳಾಸ ಶೇರ್ ಮಾಡಿಕೊಳ್ಳುತ್ತಾರೆ ಮಿಸ್ ಮಾಡದೇ ಭೇಟಿಯಾಗಬಹುದು. ಆದರೆ ಒಂದು ಷರತ್ತು..
 

zee kannada jothe jotheyalli aniruddh promises to meet fans soon vcs
Author
Bangalore, First Published Oct 9, 2020, 3:36 PM IST
  • Facebook
  • Twitter
  • Whatsapp

'ಜೊತೆ ಜೊತೆಯಲಿ' ಶೀರ್ಷಿಕೆ ಗೀತೆ ಕೇಳಿಸಿದರೆ ಸಾಕು ರಾತ್ರಿ 8.30 ಹಾಗೂ ಮರು ಪ್ರಸಾರವಾಗುವ ರಾತ್ರಿ 10.30ಕ್ಕೆ ವೀಕ್ಷಕರು ಮಿಸ್ ಮಾಡದೇ ಟಿವಿ ಮುಂದೆ ಹಾಜರಾಗುತ್ತಾರೆ.  ಆರ್ಯ ಸರ್, ಅನು ಮೇಡಂ ಪ್ರೀತಿ ವಿಚಾರವನ್ನು ಹೇಳಿ ಕೊಂಡಾಯ್ತು. ಆದರೆ ಮದುವೆ ವಿಚಾರ ಹೇಳಿದರೆ ಸುಬ್ಬು- ಪುಷ್ಪ ಒಪ್ಪಬೇಕಲ್ಲವೇ?

'ಜೊತೆ ಜೊತೆಯಲಿ' ಆರ್ಯವರ್ಧನ್ ಒಂದು ದಿನದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ 

ಧಾರಾವಾಹಿ ಪ್ರಸಾರವಾದ ಪ್ರಾರಂಭದಿಂದಲೂ ಜನರು ಪ್ರೀತಿ-ವಿಶ್ವಾಸ ಗಳಿಸಿಕೊಂಡು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ ಜೊತೆ ಜೊತೆಯಲಿ ಧಾರಾವಾಹಿ. ಆರ್ಯವರ್ಧನ್ ಮತ್ತು ಅನು ಸಿರಿಮನೆಯ ಡೆಡ್ಲಿ ಕಾಂಬಿನೇಷನ್‌, ಗೆಳೆಯ ಜೇಂಡೆ, ಓಲ್ಡ್ ಕಪಲ್ಸ್ ಆದರೂ ಸಿಕ್ಕಾಪಟ್ಟೆ ಲವ್ ಮಾಡುವ ಸುಬ್ಬು- ಪುಷ್ಪ. ಸಂಬಂಧಗಳಿಗೆ ನೀಡುವ ಮೌಲ್ಯ, ಪರಿಸ್ಥಿತಿಗೆ ತಕ್ಕಂತೆ ಸಂದೇಶ ಹಾಗೂ ಪರಿಸರ ಬಗ್ಗೆ ಜಾಗೃತಿ ಹೀಗೆ ಅನೇಕ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಫ್ಯಾಮಿಲಿ ಓರಿಯಂಟೆಡ್‌ ಧಾರಾವಾಹಿ ಇದಾಗಿದೆ.  ತೆರೆ ಮೇಲೆ ಕಾಣುವ ಸ್ಟಾರ್‌ಗಳನ್ನು ರಿಯಲ್ ಲೈಫ್‌ನಲ್ಲಿ ಭೇಟಿ ಮಾಡಬೇಕೆಂಬುದು ಅಭಿಮಾನಿಗಳು ಆಸೆ ಆಗಿರುತ್ತದೆ. ಆದರೆ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂದು ನಟ ಅನಿರುದ್ಧ ಒಂದು ಉಪಾಯ ಹೇಳಿದ್ದಾರೆ.

zee kannada jothe jotheyalli aniruddh promises to meet fans soon vcs

ಅನಿರುದ್ಧ ಮನವಿ:
'ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನನ್ನ ಅಂತರಾಳದ ಅನಂತ ಧನ್ಯವಾದಗಳು. ತಮ್ಮಲ್ಲಿ ಎಷ್ಟೋ ಅಭಿಮಾನಿಗಳು ನನಗೆ ಉಡುಗೊರೆ ನೀಡಬೇಕು ಹೇಗೆ ತಲುಪಿಸುವುದು, ಎಂದೆಲ್ಲಾ ಕೇಳಿದ್ದೀರಿ. ನೀವೆಲ್ಲರೂ ನನ್ನ ಮೇಲೆ ಇಟ್ಟಿರುವ ಪ್ರೀತ, .ತೋರುತ್ತಿರುವ ವಿಶ್ವಾಸವೇ ನನಗೆ ಅತಿ ದೊಡ್ಡ ಉಡುಗೊರೆ. ನಾನು ತಮ್ಮೆಲ್ಲರಿಗೂ ಸದಾ ಚಿರ ಋಣಿ. ಹಾಗೆ ತಮ್ಮಲ್ಲಿ ಬಹಳಷ್ಟು ಅಭಿಮಾನಿಗಳು ನನ್ನನ್ನು ಭೇಟಿಯಾಗಬೇಕು, ಮಾತನಾಡಿಸಬೇಕು, ಎಲ್ಲಿ ಭೇಟಿಯಾಗುವುದೆಂದು ಕೇಳಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ಅಂದರೆ ಈ ಕರೋನಾ ಸೋಂಕಿನ ಕಾಟ ಮುಗಿದ ನಂತರ ನಾನು ತಮಗೆಲ್ಲಾ ನನ್ನ ಚಿತ್ರೀಕರಣ ನಡೆಯುವ ಸೆಟ್‌ ಅಥವಾ ಮನೆಯ ವಿಳಾಸ ಕೊಡುವೆ. ಆಗ ತಾವು ಅಲ್ಲಿ ಬಂದು ನನ್ನನ್ನು ಭೇಟಿ ಆಗಬಹುದು. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಹಾರೈಕೆ, ಆಶೀರ್ವಾದ ಸದಾ ಹೀಗೆ ಇರಲಿ ಅಂತ ನಾನು ತಮ್ಮಲ್ಲಿ ಕಳಕಳಿಯಿಂದ ಕೇಳಿ ಕೊಳ್ಳುತ್ತೇನೆ,' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ ಕೊಂಡಿದ್ದಾರೆ.

ಗೋಲ್ಡನ್‌ ಸ್ಟಾರ್‌ ಜೊತೆ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ ತ್ರಿಬಲ್ ರೈಡಿಂಗ್! 

 
 
 
 
 
 
 
 
 
 
 
 
 

ಎಲ್ಲರಿಗೂ ಶುಭೋದಯ🙏😊 ಮೊದಲನೆಯದಾಗಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನನ್ನ ಅಂತರಾಳದ ಅನಂತ ಧನ್ಯವಾದಗಳು.. ತಮ್ಮಲ್ಲಿ ಎಷ್ಟೋ ಅಭಿಮಾನಿಗಳು ನನಗೆ ಉಡುಗೊರೆ ನೀಡಬೇಕು ಹೇಗೆ ತಲುಪಿಸುವುದು ಎಂದೆಲ್ಲಾ ಕೇಳಿದ್ದೀರಿ.. ನೀವೆಲ್ಲರು ನನ್ನ ಮೇಲೆ ಇಟ್ಟಿರುವ ಪ್ರೀತಿ.. ತೋರುತ್ತಿರುವ ವಿಶ್ವಾಸವೇ ನನಗೆ ಅತಿ ದೊಡ್ಡ ಉಡುಗೊರೆ.. ನಾನು ತಮ್ಮೆಲ್ಲರಿಗೂ ಸದಾ ಚಿರ ಋಣಿ.... ಹಾಗೆ ತಮ್ಮಲ್ಲಿ ಬಹಳಷ್ಟು ಅಭಿಮಾನಿಗಳು ನನ್ನನ್ನು ಭೇಟಿಯಾಗಬೇಕು.. ಮಾತನಾಡಿಸಬೇಕು.. ಎಲ್ಲಿ ಭೇಟಿಯಾಗುವುದೆಂದು ಕೇಳಿದ್ದೀರಿ.. ಸದ್ಯದ ಪರಿಸ್ಥಿತಿಯಲ್ಲಿ ಅಂದರೆ ಈ ಕರೋನ ಸೋಂಕಿನ ಪ್ರಭಾವ ಮುಗಿದ ನಂತರ ನಾನು ತಮಗೆಲ್ಲಾ ನನ್ನ ಚಿತ್ರೀಕರಣದ, ಅಥವಾ ಮನೆಯ ವಿಳಾಸ ಕೊಡುವೆ. ಆಗ ತಾವು ಅಲ್ಲಿ ಬಂದು ನನ್ನನ್ನು ಭೇಟಿ ಆಗಬಹುದು.. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಹಾರೈಕೆ, ಆಶೀರ್ವಾದ ಸದಾ ಹೀಗೆ ಇರಲಿ ಅಂತ ನಾನು ತಮ್ಮಲ್ಲಿ ಕಳಕಳಿಯಿಂದ ಕೇಳಿ ಕೊಳ್ಳುತ್ತೇನೆ.. 🙏🙏🙂 ನಿಮ್ಮ #Anirudh

A post shared by Aniruddha Jatkar (@aniruddhajatkar) on Oct 8, 2020 at 7:55pm PDT

ಬಿಡುವಿನ ಸಮಯದಲ್ಲಿ ಅನಿರುದ್ಧ ಕೆಲವೊಂದು ಚಿತ್ರಗೀತೆಗಳನ್ನು ಹಾಡಿ ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅಭಿಮಾನಿಗಳಲ್ಲಿ ಜ್ಞಾನ ಹೆಚ್ಚಿಸಲು ಏನೇನೋ ರಸ ಪ್ರಶ್ನೆಗಳನ್ನು ಕೇಳಿ  ಉತ್ತರ ಪಡೆದುಕೊಳ್ಳುತ್ತಾರೆ. ಮಾವ ಡಾ.ವಿಷ್ಣುವರ್ಧನ್ ಹಾಗೂ ಅತ್ತೆ ಭಾರತಿ ಜೊತೆ ಕಳೆದ ಕ್ಷಣಗಳ ಬಗ್ಗೆಯೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. 

ಅನು - ಆರ್ಯ ಪ್ರೇಮೋತ್ಸವಕ್ಕೆ ಬೆಂಕಿ ಇಟ್ಟ ರಾಜನಂದಿನಿಯ ಆ ರಹಸ್ಯ!

ಒಟ್ಟಿನಲ್ಲಿ ಅನಿರುದ್ಧಗೆ ಫೇಮ್‌ ತಂದುಕೊಟ್ಟ ಆರ್ಯವರ್ಧನ್ ಮದುವೆ ಯಾವಾಗ ಎಂಬುದು ಎಲ್ಲರ ಎಕ್ಷ ಪ್ರಶ್ನೆಯಾಗಿದೆ.

Follow Us:
Download App:
  • android
  • ios