ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಈಗ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಗೋಲ್ಡನ್‌ ಸ್ಟಾರ್ ಗಣೇಶ್‌ ಜೊತೆ 'ತ್ರಿಬಲ್ ರೈಡಿಂಗ್' ಸಿನಿಮಾ ಜೋಡಿಯಾಗಿ ಮಿಂಚುತ್ತಿದ್ದಾರೆ. 

ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು 

ಗಾಳಿಪಟ 2, ರಾಯಗಢ, ಸಖತ್‌, ತ್ರಿಬ್ಬಲ್‌ ರೈಡಿಂಗ್‌. ಇವಿಷ್ಟುಗೋಲ್ಡನ್‌ ಸ್ಟಾರ್‌ ಗಣೇಶ್‌ ಮುಂದಿದ್ದ ಸಿನಿಮಾಗಳು. ಕೊರೋನಾ ಕಾರಣದಿಂದ ನಿಂತಲ್ಲೇ ನಿಂತಿದ್ದ ಎಲ್ಲಾ ಚಿತ್ರಗಳು ಈಗ ಚಟುವಟಿಕೆ ಆರಂಭಿಸಿವೆ. ಅದರಲ್ಲಿ ಮೊದಲಿಗೆ ಮಹೇಶ್‌ ಗೌಡ ನಿರ್ದೇಶನದ ‘ತ್ರಿಬ್ಬಲ್‌ ರೈಡಿಂಗ್‌’ ಅಕ್ಟೋಬರ್‌ ಎರಡನೇ ವಾರ ಶೂಟಿಂಗ್‌ಗೆ ಹೋಗುವ ಮೂಲಕ ಮೊದಲು ರೈಡ್‌ ಆರಂಭಿಸಿದೆ.

ಮೊದಲ 15 ದಿನ ಬೆಂಗಳೂರು, ನಂತರ 15 ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ. ಈ ವೇಳೆ ಸಾಧು ಕೋಕಿಲ, ರವಿಶಂಕರ್‌, ಕುರಿ ಪ್ರತಾಪ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ರವಿಶಂಕರ್‌ ಗೌಡ ಜೊತೆಯಾಗಲಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ಅಧಿಕೃತವಾಗಬೇಕಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿದ್ದು, ರಾಮ… ಗೋಪಾಲ್‌ ವೈ.ಎಂ. ಬಂಡವಾಳ ಹಾಕುತ್ತಿದ್ದಾರೆ. ಸಾಯಿಕಾರ್ತಿಕ್‌ ಸಂಗೀತ ನಿರ್ದೇಶನ, ಆನಂದ್‌ ಛಾಯಾಗ್ರಹಣ, ಕೆ.ಎಂ. ಪ್ರಕಾಶ ಸಂಕಲನ, ವಿಕ್ರಂ, ಡಿಫರೆಂಟ್‌ ಡ್ಯಾನಿ ಸಾಹಸ.