ಜೊತೆ ಜೊತೆಯಲಿ : ಅನು ಕಾರು ಬ್ರೇಕ್ ಫೇಲ್ ಆಗೋಯ್ತು, ಆರ್ಯನಿಗೆ ತಪ್ಪಿದ ಪ್ರಜ್ಞೆ, ಮುಂದೇನು?

ಜೊತೆ ಜೊತೆಯಲಿ ಸೀರಿಯಲ್‌ ವೀಕ್ಷಕರಲ್ಲಿ ಕುತೂಹಲ ಮೂಡಿಸುವ ಜೊತೆಗೆ ಕನ್‌ಫ್ಯೂಶನ್‌ ಕ್ರಿಯೇಟ್ ಮಾಡಿದೆ. ಸದ್ಯ ಝೇಂಡೆ ಅನು ಕಾರು ಬ್ರೇಕ್ ಫೇಲ್ ಆಗುವಂತೆ ಮಾಡಿದ್ದಾನೆ. ಅತ್ತ ಆರ್ಯವರ್ಧನ್ ನಾಪತ್ತೆ ಆಗಿದ್ದಾನೆ. ಮುಂದೇನು ಅನ್ನೋ ಕುತೂಹಲ ಹೆಚ್ಚಾಗಿದೆ.

Zee Kannada Jothe jotheyali serial attracts audience with a twist in the soap

'ಜೊತೆ ಜೊತೆಯಲಿ' ಸೀರಿಯಲ್‌ ವೀಕ್ಷಕರನ್ನು ಅಕ್ಷರಶಃ ಕನ್‌ಫ್ಯೂಶನ್‌ಗೆ ದೂಡಿದೆ. ಒಂದು ಕಡೆ ಆರ್ಯವರ್ಧನ್ ನಾಪತ್ತೆ ಆಗಿದ್ದಾನೆ. ಇದು ಉಳಿದವರಿಗೆ ಅಂಥಾ ದೊಡ್ಡ ವಿಚಾರ ಅಲ್ಲದಿದ್ದರೂ ಅನುಗೆ ಮಾತ್ರ ಆತಂಕ ತಂದಿದೆ. ಅವಳಿಗೆ ಆರ್ಯವರ್ಧನ್ ಜೀವದ ಬಗ್ಗೆ ಕಾಳಜಿ ಇದೆ. ಹೀಗಾಗಿ ಅವಳು ಆರ್ಯನಿಗಾಗಿ ಎಲ್ಲೆಲ್ಲೂ ಹುಡುಕಾಡುತ್ತಿದ್ದಾಳೆ. ಆಗರ್ಭ ಶ್ರೀಮಂತರಾದ ಅವರ ಜಾಗಗಳಲ್ಲೆಲ್ಲ ಅವಳು ಆರ್ಯನ ಹುಡುಕಾಟಕ್ಕೆ ಮುಂದಾಗಿದ್ದಾಳೆ. ಆದರೆ ದುಷ್ಟ ಝೇಂಡೆಗೆ ಅನು ಜೀವವನ್ನು ಹೇಗಾದರೂ ತೆಗೆಯಬೇಕೆಂಬ ಹಠ. ಅವಳಿದ್ದರೆ ತನಗೆ ಉಳಿಗಾಲವಿಲ್ಲ. ತನ್ನ ಬೇಳೆ ಬೇಯಿಸಿಕೊಳ್ಳೋದು ಕಷ್ಟ. ಹೀಗಾಗಿ ಅವಳನ್ನು ಈ ಬಾರಿ ಹೇಗಾದರೂ ಸಾಯಿಸಬೇಕೆಂದು ಅವಳ ಕಾರಿನ ಬ್ರೇಕ್‌ ಫೇಲ್ ಮಾಡಿ ಹಾಕಿದ್ದಾನೆ. ಇದರ ಅರಿವಿಲ್ಲದೇ ಅನು ಕಾರು ಚಲಾಯಿಸಿಕೊಂಡು ಆರ್ಯನನ್ನು ಹುಡುಕಿತ್ತಾ ಹೊರಟಿದ್ದಾಳೆ. ಹಾಗೆ ಹೋಗುವಾಗ ಅವಳಿಗೆ ಬ್ರೇಕ್ ಹಿಡೀತಾ ಇಲ್ಲ ಅನ್ನೋದರ ಅರಿವಾಗಿದೆ. ವೇಗವಾಗಿ ಹೋಗುವ ಕಾರನ್ನು ನಿಯಂತ್ರಿಸಲಾಗದೇ ಅನು ಉದ್ವಿಗ್ನಗೊಂಡಿದ್ದಾಳೆ. ಈ ಬಾರಿ ಅವಳು ಬಚಾವ್ ಆಗ್ತಾಳಾ ಅನ್ನೋ ಆತಂಕ ಇದನ್ನು ನೋಡುವ ಪ್ರೇಕ್ಷಕರಲ್ಲೂ ಮನೆ ಮಾಡಿದೆ.

ಏಕೆಂದರೆ ಈ ಹಿಂದೆಯೂ ಝೇಂಡೆ ಅವಳನ್ನು ಅಪಹರಿಸಿ ಕೊಲ್ಲುವ ಪ್ಲಾನ್ ಮಾಡಿದ್ದ. ದೇವಸ್ಥಾನಕ್ಕೆಂದು ಬಂದ ಅನು ಆರ್ಯವರ್ಧನ್ ಜೊತೆಗೆ ಮಾತನಾಡುತ್ತಿರುವಂತೇ ಝೇಂಡೆ ಸಹಚರರು ಅವಳನ್ನು ಅಪಹರಿಸಿದ್ದರು. ಇದು ಆರ್ಯನ ಗಮನಕ್ಕೆ ಬಂದು ಆತ ತನ್ನ ಜೀವವನ್ನೇ ಒತ್ತೆ ಇಟ್ಟು ಅವಳ ಜೀವ ಕಾಪಾಡಿದ್ದ. ಆದರೆ ಈಗ ಅವಳು ಒಂಟಿಯಾಗಿದ್ದಾಳೆ. ಕಾರು ಅವಳ ನಿಯಂತ್ರಣಕ್ಕೆ ಸಿಗದೇ ಇರೋದು ಅವಳ ಆತಂಕವನ್ನು ಕ್ಷಣ ಕ್ಷಣವೂ ಹೆಚ್ಚು ಮಾಡುತ್ತಿದೆ. ಇನ್ನೊಂದೆಡೆ ಆರ್ಯನ ಸ್ಥಿತಿ ಏನಾಗಿರಬಹುದು ಅನ್ನೋದು ಅನುವನ್ನು ಕಾಡುತ್ತಿದೆ. ಈ ಹಿಂದೆ ಅವಳನ್ನು ಕಾಪಾಡಿದ್ದ ಆರ್ಯ ಈಗ ಜೊತೆಗಿಲ್ಲ. ಯಾರೊಬ್ಬರೂ ಅವಳ ಸಹಾಯಕ್ಕೆ ಬರದಷ್ಟು ದೂರದಲ್ಲಿದ್ದಾರೆ. ಕಾರಲ್ಲಿ ಅವಳೊಬ್ಬಳೇ ಇದ್ದಾಳೆ. ಹೀಗಾಗಿ ಕ್ಷಣ ಕ್ಷಣವೂ ಅವಳ ಜೀವ ಉಳಿಯುವ ಬಗ್ಗೆ ಆತಂಕ ಹೆಚ್ಚಾಗುತ್ತಲೇ ಇದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಅವಳ ಜೀವ ಹೋದರೆ ಇಡೀ ಆಸ್ತಿಯನ್ನು ಆರ್ಯವರ್ಧನ್ ಜೊತೆಗೆ ತಾನು ಎನ್‌ಜಾಯ್ ಮಾಡೋದಕ್ಕೆ ಯಾವ ಅಡ್ಡಿಯೂ ಇರೋದಿಲ್ಲ ಅನ್ನೋದು ಝೇಂಡೆಯ ಉತ್ಸಾಹ ಹೆಚ್ಚುತ್ತಿದೆ. ಝೇಂಡೇ ಆರ್ಯವರ್ಧನ್‌ನನ್ನು ನಿದ್ದೆಯಲ್ಲಿ ಮುಳುಗಿಸಿದ್ದಾನೆ. ಮುಂದಿನ ಝೇಂಡೇ ಪ್ಲಾನ್ ಏನು ಎಂಬುದೇ ಗೊತ್ತಾಗುತ್ತಿಲ್ಲ. ಝೇಂಡೇ ತನ್ನ ಮೇಲೆ ಮತ್ತಷ್ಟು ತೊಂದರೆಗಳನ್ನು ಎಳೆದುಕೊಳ್ಳುತ್ತಿದ್ದಾನೆ ಅಂತಲೂ ಕೆಲವೊಮ್ಮೆ ಅನಿಸುತ್ತದೆ.

ನಟಿ ದಿಶಾ ಪರ್ಮಾರ್‌-ರಾಹುಲ್‌ ವೈದ್ಯ ದಂಪತಿಯ ರೊಮ್ಯಾಂಟಿಕ್‌ ಫೋಟೋ ವೈರಲ್‌

ಈ ಸೀರಿಯಲ್ ಪ್ರೇಕ್ಷಕರನ್ನೂ ಕನ್‌ಫ್ಯೂಶನ್‌ನಲ್ಲಿ ಇಟ್ಟಿದೆ. ಅನು ಸಿರಿಮನೆ ವರ್ತನೆ ಅವಳ ಮನೆಯವರ ಜೊತೆಗೆ ಪ್ರೇಕ್ಷಕರನ್ನೂ ಗೊಂದಲಕ್ಕೆ ದೂಡುತ್ತಿದೆ. ಅವಳು ಒಮ್ಮೆ ಅನುವಿನಂತೆ ಬಿಹೇವ್ ಮಾಡಿದರೆ ಮತ್ತೊಮ್ಮೆ ರಾಜನಂದಿನಿಯಂತೆ ವರ್ತಿಸುತ್ತಿದ್ದಾಳೆ. ಈಗ ಇವಳನ್ನು ರಾಜನಂದಿನಿ ಅಂದುಕೊಳ್ಳಬೇಕಾ, ಅನು ಅಂದುಕೊಳ್ಳಬೇಕಾ ಅನ್ನೋದು ಜನರ ಪ್ರಶ್ನೆ. ಇನ್ನೊಂದೆಡೆ ರಾಜನಂದಿನಿ ತಾಯಿ, ಹರ್ಷವರ್ಧನನ ಅಮ್ಮ ಶಾರದಾ ದೇವಿ ಅವರ ನಡವಳಿಕೆಯಲ್ಲೂ ಬದಲಾವಣೆ ಕಾಣುತ್ತಿದೆ.ಎಲ್ಲರಿಂದಲೂ ಶಾರದಾ ದೇವಿ ಏನೋ ಮುಚ್ಚಿಡುತ್ತಿದ್ದಾರೆ ಎಂಬ ಅನುಮಾನ ವೀಕ್ಷಕರಿಗೆ ಬರುತ್ತಿದೆ. ಆದರೆ, ಶಾರದಾ ದೇವಿ ಅವರ ನಡವಳಿಕೆ ಬಗ್ಗೆ ಇನ್ನೂ ಯಾರಿಗೂ ಅನುಮಾನ ಬಂದಿಲ್ಲ.

ಕನ್ನಡತಿ : ಜಗಳವಾಡಿಕೊಂಡ ಹರ್ಷ ಭುವಿ, ಹರ್ಷನಿಗೆ ನೆಟ್ಟಿಗರ ಕ್ಲಾಸ್

ಇನ್ನೊಂದೆಡೆ ಝೇಂಡೆ ಯಾವ ಕಾರಣಕ್ಕೆ ಆರ್ಯವರ್ಧನ್ ಪ್ರಜ್ಞೆ ತಪ್ಪಿಸಿದ್ದಾನೆ? ಇದರಿಂದ ಅವನಿಗೇನು ಲಾಭ ಅನ್ನೋ ಅನುಮಾನವಿದೆ. ಅನುವನ್ನು ಕೊಲ್ಲುವ ವಿಚಾರವಾಗಿ ಝೇಂಡೆ ತಲೆಯಲ್ಲಿ ಅನೇಕ ವಿಚಾರ ಓಡುತ್ತಿದೆ. ಅನು ಕಾಲ ಮುಗಿದಿದೆ. ಈಗ ಆರ್ಯನನ್ನು ಹುಡುಕಾಡಿ, ಗಂಡ ಸಿಗದೇ ನೊಂದು-ಬೆಂದು ಅನು ಸತ್ತಿದ್ದಾಳೆ ಎಂಬಂತೆ ಆಗಬೇಕು. ಅದೇ ನನಗೆ ಬೇಕಿರುವುದು ಎಂದು ಆತ ಹೇಳಿಕೊಳ್ಳುತ್ತಿದ್ದಾನೆ. ಅನು ಕಾರನ್ನು ಬ್ರೇಕ್ ಫೇಲ್ಯೂರ್ ಮಾಡಿಸಿದ್ದಾನೆ.

ಹೀಗೆ ಒಂದಿಷ್ಟು ಗೊಂದಲ, ಕ್ಯೂರಿಯಾಸಿಟಿಯೊಂದಿಗೆ ಈ ಸೀರಿಯಲ್ ಇಂಟರೆಸ್ಟಿಂಗ್ ಆಗಿ ಮುಂದುವರಿಯುತ್ತಿದೆ. ಮುಂದೇನು ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Latest Videos
Follow Us:
Download App:
  • android
  • ios