Asianet Suvarna News Asianet Suvarna News

'ಶ್ರೀರಸ್ತು- ಶುಭಮಸ್ತು' ಹೊಸ ಪ್ರೊಮೋ ರಿಲೀಸ್​ ಮಾಡಿ ಫ್ಯಾನ್ಸ್​ ತಲೆಯಲ್ಲಿ ಹುಳುಬಿಟ್ಟ ವಾಹಿನಿ!

 'ಶ್ರೀರಸ್ತು- ಶುಭಮಸ್ತು'  ಸೀರಿಯಲ್​ನ ಹೊಸ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದು, ಫ್ಯಾನ್ಸ್​ ಶಾಕ್ ಆಗಿದ್ದಾರೆ. 
 

Zee Kannada  has shared the new promo of Shreerastu- Shubhamastu serial suc
Author
First Published Nov 17, 2023, 2:33 PM IST | Last Updated Nov 17, 2023, 2:34 PM IST

 ಓರ್ವ ಮಧ್ಯ ವಯಸ್ಸಿನ ವಿಧವೆ ಅಥವಾ ವಿಧುರ ಮದುವೆಯಾಗುವುದು, ಅದರಲ್ಲಿಯೂ ಮಕ್ಕಳು ಮದ್ವೆಯಾಗಿದ್ದರೆ ಅಥವಾ  ಮದುವೆ ವಯಸ್ಸಿಗೆ ಬಂದ ಸಂದರ್ಭದಲ್ಲಿ ಮದುವೆಯಾಗುವುದು ಎಂದರೆ ಎಷ್ಟೋ ಮಂದಿಗೆ ಅದು ಸಹ್ಯವಾಗದ ಮಾತು. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡರೂ ಓರ್ವ ಹೆಣ್ಣು ವಿಧವೆಯಾಗಿಯೇ ಜೀವನ ಸವೆಸಬೇಕು ಎನ್ನುವ ಮನಸ್ಥಿತಿ ಹಲವರದ್ದು. ಗಂಡು ಇನ್ನೊಂದು ಮದ್ವೆಯಾಗುವುದನ್ನು ಒಪ್ಪಿದರೂ ಹೆಣ್ಣು ಮಾತ್ರ ಹಾಗೆಯೇ ಇರಬೇಕು ಎನ್ನುವವರೇ ಹೆಚ್ಚು. ಆದರೆ ಇಂದು ಮನಸ್ಸು ಬದಲಾಗುತ್ತಿದೆ, ಬದಲಾಗದಿದ್ದರೂ ಅದನ್ನು ಒಪ್ಪಿಕೊಳ್ಳುವಂತೆ ಕೆಲವು ಹೆಣ್ಣು ಮಕ್ಕಳು ನಡೆ ಇಡುತ್ತಾರೆ. ಅಂಥವುಗಳಲ್ಲಿ ಒಂದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು. ಈ ಧಾರಾವಾಹಿಯನ್ನು ಮೆಚ್ಚಿಕೊಂಡಿರುವವರನ್ನು ನೋಡಿದರೆ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನಸ್ಥಿತಿಯೂ ಬದಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 

ಶ್ರೀಮಸ್ತು ಶುಭರಸ್ತು ಧಾರಾವಾಹಿ ಕುರಿತು ಹೇಳುವುದಾದರೆ, ಇದು ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. ಸೊಸೆ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ಹಲವು ಮಹಿಳೆಯರು. ಈ ಧಾರಾವಾಹಿಯ ನಟಿ ತುಳಸಿ ಮದುವೆಯಾಗಿ ಹೋದ ಮೇಲೆ ಪತಿಯ ಮನೆಯ ಕಾರಣದಿಂದ ಹಿಂಸೆ ಅನುಭವಿಸುತ್ತಿದ್ದಾಳೆ ನಿಜ. ಆದರೆ ಎಲ್ಲವೂ ಒಳ್ಳೆಯದಾಗುತ್ತದೆ, ಅದೂ ತುಳಸಿಯಿಂದಲೇ ಎನ್ನುವುದು ಸೀರಿಯಲ್ ಪ್ರಿಯರ ಅನಿಸಿಕೆ. 

ಶ್ರೀರಸ್ತು ಶುಭಮಸ್ತು ಅಪ್ಪನನ್ನು ಮಕ್ಳು ಒಪ್ಕೊಂಡ್​ಬಿಟ್ರಾ? ಸೀರಿಯಲ್​ನಲ್ಲಿ ಸಾಧ್ಯವಾಗದ್ದು ಇಲ್ಲಿ ಆಗೇ ಹೋಯ್ತು!

ಅದೇನೇ ಇದ್ದರೂ, ಇದೀಗ ಜೀ ಕನ್ನಡ ವಾಹಿನಿ ಧಾರಾವಾಹಿಗೆ ಸಂಬಂಧಿಸಿದಂತೆ ಹೊಸ ಪ್ರೊಮೋ ರಿಲೀಸ್​ ಆಗಿದ್ದು, ಇದನ್ನು ನೋಡಿ ಸೀರಿಯಲ್​ ಪ್ರಿಯರು ಶಾಕ್​ ಆಗಿದ್ದಾರೆ. ಇದಕ್ಕೆ ಕಾರಣ, ಈ ಪ್ರೋಮೋದಲ್ಲಿ ನಾಯಕ ಮತ್ತು ನಾಯಕಿ ಅರ್ಥಾತ್​ ತುಳಸಿ ಮತ್ತು ಮಾಧವ್​ ಬೇರೆ ಮನೆಯಲ್ಲಿ ಕಾಣಿಸುತ್ತಿದ್ದಾರೆ. ಇವರಿಬ್ಬರ ನಡುವೆ ಅಗಾಧ ಪ್ರೀತಿಯುಂಟಾಗಿದೆ. ತುಳಸಿ ತನ್ನ ಹೆಸರನ್ನು ಇದೇ ಮೊದಲ ಬಾರಿಗೆ ತುಳಸಿ ಮಾಧವ್​ ಎಂದು ಹೇಳಿದ್ದಾಳೆ. ಇಬ್ಬರೂ ಸೇರಿ ದೀಪಾವಳಿ ಆಚರಿಸುತ್ತಿದ್ದಾರೆ. ಒಟ್ಟಿಗೇ ಅಡುಗೆ ಮಾಡುತ್ತಿದ್ದಾರೆ, ಒಟ್ಟಿಗೇ ಟೂರ್​ಗೆ ಹೋಗುತ್ತಿದ್ದಾರೆ. ಈ ಪ್ರೊಮೋ ನೋಡಿದ ಧಾರಾವಾಹಿ ಪ್ರಿಯರು ಇದು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.

ಇಂಥ ಸನ್ನಿವೇಶ ಈಗಲೇ ಬಂದುಬಿಟ್ಟರೆ ಧಾರಾವಾಹಿ ಮುಗಿದಂತೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಇದು ಕ್ಲೈಮ್ಯಾಕ್ಸ್​ ಇದ್ದ ಹಾಗಿದೆ. ಪ್ರೊಮೋದಲ್ಲಿ ಇರುವುದು ಖಂಡಿತವಾಗಿಯೂ ಧಾರಾವಾಹಿಯಲ್ಲಿ ಕಾಣುವುದು ಕಷ್ಟವೇ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರೆ, ಇನ್ನು ಕೆಲವರು ಇದು ಇವರಿಬ್ಬರಲ್ಲಿ ಒಬ್ಬರ ಕನಸು ಅಷ್ಟೇ ಎಂದಿದ್ದಾರೆ. ಹೀಗೆ ಆಗಿಬಿಟ್ಟರೆ ಬದುಕು ಅದೆಷ್ಟು ಸುಂದರ ಎಂದು ಹಲವರು ತಮ್ಮ ಇಂಗಿತವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಹೊಸ ಪ್ರೋಮೋ ಸೀರಿಯಲ್​ ಪ್ರಿಯರ ತಲೆಯಲ್ಲಿ ಹುಳು ಬಿಟ್ಟಂತಿದೆ. 

ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios