Asianet Suvarna News Asianet Suvarna News

ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

ಶ್ರೀರಸ್ತು ಶುಭಮಸ್ತು ತಂಡ ಜಾಕ್​ಪಾಟ್​ ಆಡಿದ್ದು, ಅದರಲ್ಲಿ ಗೆದ್ದೋರು ಯಾರು ನೋಡಿ 
 

Srirastu Shubhamastu team played jackpot see who won it suc
Author
First Published Nov 10, 2023, 8:40 PM IST

ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ನಾಳೆಯವರಿಗೂ ಇರಲಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಧಾರಾವಾಹಿಗಳ ನಟ-ನಟಿಯರಿಗೆ ಭರಪೂರ ಅವಾರ್ಡ್​ಗಳನ್ನು ಕೊಡಲಾಗುತ್ತಿದೆ. ಇದಕ್ಕಾಗಿ ನಾಮಿನೇಷನ್​ ಆದವರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕ್ಷಕರಿಂದ ಭರ್ಜರಿ ರೆಸ್​ಪಾನ್ಸ್​ ಬರುತ್ತಿದೆ. ಅವಾರ್ಡ್​ ಕಾರ್ಯಕ್ರಮದ ಇನ್ನೊಂದು ಬದಿಯಲ್ಲಿ ಸೀರಿಯಲ್​ ನಟ-ನಟಿಯರ ಸಂದರ್ಶನದ ಜೊತೆಗೆ ಒಳ್ಳೊಳ್ಳೆ ಆಟವೂ ನಡೆಯುತ್ತಿದೆ. ಅದರಲ್ಲಿ ದುಡ್ಡಿನ ಆಟವೊಂದು ಸಕತ್​ ಇಂಟರೆಸ್ಟಿಂಗ್​ ಆಗಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಗಂಡ- ಹೆಂಡತಿ ಹಾಗೂ ಅಣ್ಣ-ತಂಗಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಅವಿ, ಅಭಿ, ಪೂರ್ಣಿ ಮತ್ತು ನಿಧಿ. ಇದರಲ್ಲಿ ಗೆದ್ದೋರು ಯಾರು? ಸೋತೋರು ಯಾರು ಎನ್ನೋದನ್ನು ನೋಡೋಣ.

ಮೊದಲಿಗೆ ಇದು ಕುಟುಂಬದ ಅವಾರ್ಡ್​ ಆಗಿರೋ ಕಾರಣ, ಕುಟುಂಬ ಎಂದರೆ ಒಂದೇ ವಾಕ್ಯದಲ್ಲಿ ಹೇಳಿ ಎಂದಾಗ ನಿಧಿ ಪಾತ್ರಧಾರಿ ನಾವು ಹೇಗೆ ಇದ್ದೇವೋ ಹಾಗೆಯೇ ಇರುವ ಒಂದು ಜಾಗ ಎಂದರೆ ಅದು ಕುಟುಂಬ ಎಂದಿದ್ದಾರೆ. ಅವಿ ಪಾತ್ರಧಾರಿ ಜೀ ನಮ್ಮ ಕುಟುಂಬ ಇದ್ದ ಹಾಗೆ. ಯಾರು ವಿನ್​ ಆದರೂ ಎಲ್ಲರಿಗೂ ಖುಷಿಯೇ. ಇದು ನಮ್ಮ ಇನ್ನೊಂದು ಫ್ಯಾಮಿಲಿ ಎಂದರು. ಅವಿ ಪಾತ್ರಧಾರಿ ಕುಟುಂಬ ಎಂದರೆ ಅಂಡರ್​ಸ್ಟ್ಯಾಂಡಿಂಗ್​ ಎಂದರೆ ಪೂರ್ಣಿ ಪಾತ್ರಧಾರಿ ಕುಟುಂಬ ಎಂದರೆ ಪ್ರೀತಿ ಎಂದರು. 

ಕ್ಯೂಟ್‌ ಲೇಡಿ ವಿಲನ್ಸ್‌ ಅಬ್ಬರದ ನಗು ಕೇಳಿದ್ರೆ ನೀವೂ ನಗೋದು ಗ್ಯಾರೆಂಟಿ!
 

ಕೊನೆಗೆ ಈ ಎಲ್ಲ ನಟ-ನಟಿಯರಿಗೆ ಜಾಕ್​ಪಾಟ್​ ಗೇಮ್ ಆಡಿಸಲಾಯಿತು. ಟೇಬಲ್​ ಮೇಲೆ ಒಂದಿಷ್ಟು ದುಡ್ಡು ಇಡಲಾಗಿತ್ತು. ಸೌಟಿನಿಂದ ಆ ದುಡ್ಡನ್ನು ಕಣ್ಣು ಕಟ್ಟಿಕೊಂಡು ಪಕ್ಕದಲ್ಲಿನ ಪ್ಲೇಟ್​ಗೆ ಒಬ್ಬರು ಹಾಕಿದರೆ ಇನ್ನೊಬ್ಬರು ಅದಕ್ಕೆ ಸಪೋರ್ಟ್​ ಮಾಡಬೇಕಿತ್ತು. ಪೂರ್ಣಿ ಮತ್ತು ಅಭಿ ಒಂದು ಟೀಂ ಆದ್ರೆ ಅವಿ ಮತ್ತು ನಿಧಿ ಇನ್ನೊಂದು ಟೀ. ಅಭಿ ಕಣ್ಣುಕಟ್ಟಿಕೊಂಡು ಕಷ್ಟಪಟ್ಟು ಒಂದಿಷ್ಟು ದುಡ್ಡು ಅತ್ತ ಹಾಕಿದರೆ, ಅವಿಗೆ ಒಂದೇ ಒಂದು ನೋಟು ಕೂಡ ಅತ್ತ ಕಡೆ ಹಾಕಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಹಜವಾಗಿ ಪೂರ್ಣಿ-ಅಭಿ ಟೀಂ ಜಾಕ್​ಪಾಟ್​ ಹೊಡೆದರು. ​
 

ಅಂದಹಾಗೆ ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ಕುರಿತು ಹೇಳುವುದಾದರೆ, ಇದು ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. 

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios