Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತು ಅಪ್ಪನನ್ನು ಮಕ್ಳು ಒಪ್ಕೊಂಡ್​ಬಿಟ್ರಾ? ಸೀರಿಯಲ್​ನಲ್ಲಿ ಸಾಧ್ಯವಾಗದ್ದು ಇಲ್ಲಿ ಆಗೇ ಹೋಯ್ತು!

ಜೀ ಕುಟುಂಬದ ಬೆಸ್ಟ್​ ಅಪ್ಪನ ಅವಾರ್ಡ್​ ಪಡೆದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಮಾಧವ್​ ಹಾಗೂ ಮಕ್ಕಳ ನಡುವೆ ವೇದಿಕೆಯಲ್ಲಿ ರಾಜಿ ಸಂಧಾನ!
 

Srirastu Shubhamastu Serial Madhav and children won the best father award suc
Author
First Published Nov 11, 2023, 3:44 PM IST

ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ನಾಳೆಯವರಿಗೂ ಇರಲಿದೆ. ಇದರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಧಾರಾವಾಹಿಗಳ ನಟ-ನಟಿಯರಿಗೆ ಭರಪೂರ ಅವಾರ್ಡ್​ಗಳನ್ನು ಕೊಡಲಾಗುತ್ತಿದೆ. ಇದಕ್ಕಾಗಿ ನಾಮಿನೇಷನ್​ ಆದವರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕ್ಷಕರಿಂದ ಭರ್ಜರಿ ರೆಸ್​ಪಾನ್ಸ್​ ಬರುತ್ತಿದೆ.   ಶ್ರೀಮಸ್ತು ಶುಭರಸ್ತು ಧಾರಾವಾಹಿ ಕುರಿತು ಹೇಳುವುದಾದರೆ, ಇದು ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. 

ಇದರಲ್ಲಿ ತುಂಬಾ ಗಮನ ಸೆಳೆದಿರುವ ಪಾತ್ರಗಳು ಹಾಗೂ ಈ ಸೀರಿಯಲ್​ನ ನಾಯಕ-ನಾಯಕಿ ಎಂದೇ ಹೇಳಬಹುದಾದ ಮಾಧವ ಮತ್ತು ತುಳಸಿ.  ತುಳಸಿಯ ಅತ್ತೆಯಾಗಿರುವ ಸಿರಿ  ತನ್ನ ಅತ್ತೆಗೆ (ಸುಧಾರಾಣಿ) ಮತ್ತೊಂದು ಮದುವೆ ಮಾಡಿಸಿದ್ದಾಳೆ. ಸ್ನೇಹಿತರಂತೆ ಇದ್ದ ತುಳಸಿ ಮತ್ತು ಮಾಧವ (ಅಜಿತ್​ ಹಂದೆ) ಈಗ ಪತಿ-ಪತ್ನಿಯಾಗಿದ್ದಾರೆ. ಆದರೆ ಗಂಡನ ಮನೆಯಲ್ಲಿ ತುಳಸಿಯ ಕಂಡರೆ ಮಾಧವನ ಮಕ್ಕಳಿಗೆ ಆಗಿ ಬರುವುದಿಲ್ಲ. ಅಲ್ಲಿ ಮಾಧವ ಅವರ ಅಣ್ಣನ ಪತ್ನಿ ತುಳಸಿಗೆ ತೊಂದರೆ ಕೊಡುತ್ತಿರುತ್ತಾರೆ. ಅಷ್ಟೇ ಅಲ್ಲದೇ ಮಾಧವನ ಮಕ್ಕಳಿಗೆ ಖುದ್ದು ತಂದೆಯನ್ನೂ ಕಂಡರೆ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಅದರಲ್ಲಿಯೂ ಈಗ ಅವರು ಈ ವಯಸ್ಸಿನಲ್ಲಿ ಮರು ಮದುವೆಯಾಗಿರುವುದಕ್ಕೆ ತುಳಸಿ ಜೊತೆ ಅಪ್ಪನನ್ನೇ ದ್ವೇಷಿಸುತ್ತಾರೆ.

ದುಡ್ಡಿನ ಆಟದಲ್ಲಿ ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ಗೆದ್ದೋರು ಯಾರು?

ಈ ಸ್ಟೋರಿಯಲ್ಲಿ ಅಪ್ಪನ ಪಾತ್ರಧಾರಿಯಾಗಿರುವ ಅಜಿತ್​ ಹಂದೆ ಅವರಿಗೆ ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಬೆಸ್ಟ್​ ಅಪ್ಪ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರಿಗೆ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ನಿಜವಾದ ಜೀವನದಲ್ಲಿ ಐದು ವರ್ಷದ ಮಗ ಇದ್ದಾನೆ. ಆದರೆ ಸೀರಿಯಲ್​ನಲ್ಲಿ ಇಬ್ಬರುದೊಡ್ಡ ದೊಡ್ಡ ಮಕ್ಕಳ ತಂದೆಯಾಗಿ ನಟಿಸಿದ್ದೇನೆ. ಎಲ್ಲರೂ ತಮಗೆ ತುಂಬಾ ಸಹಕಾರ ಕೊಡುತ್ತಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಅಪ್ಪ-ಅಮ್ಮನನ್ನು ನೆನಪಿಸಿಕೊಂಡಿದರು.

ಕೊನೆಯಲ್ಲಿ ಅಪ್ಪ-ಮಕ್ಕಳನ್ನು ಕಂಡರೆ ಸೀರಿಯಲ್​ನಲ್ಲಿ ಆಗುವುದಿಲ್ಲ. ಆದ್ದರಿಂದ  ಜೀ ಕುಟುಂಬದ ವೇದಿಕೆಯಲ್ಲಿ ಅವರನ್ನು ಒಂದು ಮಾಡಿದರೆ ಹೇಗೆ ಎಂದು ನಿರೂಪಕಿಯಾದ ಅನುಶ್ರೀ ಕೇಳಿ, ವೇದಿಕೆಯಲ್ಲಿಯೇ ಅಪ್ಪ ಮತ್ತು ಮಕ್ಕಳನ್ನು ಒಂದು ಮಾಡಿದರು. ಇಬ್ಬರೂ ಸೀರಿಯಲ್​ ಅಪ್ಪನ ಕೆನ್ನೆಗೆ ಮುತ್ತು ಕೊಟ್ಟಾಗ ವೇದಿಕೆಯ ಮೇಲೆ ಹರ್ಷೋದ್ಗಾರವಾಯಿತು. ನಂತರ ಅಭಿಗೆ ಪ್ರೀತಿಯಿಂದ ಅಪ್ಪ ಎಂದು ಹೇಳಿ ಎಂದಾಗ, ಅಭಿ ಪಾತ್ರಧಾರಿ ಒಂದು ಕಂಡೀಷನ್​ ಎನ್ನುತ್ತಾರೆ. ಅದೇನೆಂದರೆ ಅಪ್ಪ ಸ್ಕೂಟರ್​ ಚೇಂಜ್​ ಮಾಡಿದ್ರೆ ಮಾತ್ರ ಎಂದಾಗ ಎಲ್ಲರೂ ಜೋರಾಗಿ ನಗುತ್ತಾರೆ. ನಂತರ ಅವಿಗೆ ಅಪ್ಪ ಎಂದು ಹೇಳಲು ಹೇಳಿದಾಗ ನನಗೆ ನನ್ನ ಗರ್ಲ್​ಫ್ರೆಂಡ್​ ಜೊತೆ ಮದ್ವೆ ಮಾಡಿಸಿದ್ರೆ ಮಾತ್ರ ಅಪ್ಪ ಹೇಳುವೆ ಎಂದಾಗ ಮತ್ತಷ್ಟು ನಗು. ಇದಕ್ಕೆ ಕಾರಣವೂ ಇದೆ. ಮಾಧವ ಈ ವಯಸ್ಸಿನಲ್ಲಿ ಮದುವೆಯಾದ ಕಾರಣಕ್ಕೆ ಅವಿಯ ಗರ್ಲ್​ಫ್ರೆಂಡ್​ ಪಾಲಕರು ಮದುವೆಯನ್ನು ಕ್ಯಾನ್ಸಲ್​ ಮಾಡಿರುತ್ತಾರೆ. ಕೊನೆಗೂ ಇಬ್ಬರೂ ಮಾಧವ ಅವರನ್ನು ಅಪ್ಪಿಕೊಂಡಿದ್ದು, ವೇದಿಕೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಯಿತು. 

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios