Asianet Suvarna News Asianet Suvarna News

Valentine's Dayಗೆ ಗುಡ್‌ ನ್ಯೂಸ್ ಕೊಟ್ಟ ಬ್ರಹ್ಮಗಂಟು ಗೀತಾ; ಮುತ್ತಿಟ್ಟ ಹುಡುಗನ್ಯಾರು?

ವ್ಯಾಲೆಂಟೈನ್ ಡೇಗೆ ಕಿರುತೆರೆ ನಟಿ ಗೀತಾ ಭಾರತಿ ದೊಡ್ಡ ಸರ್ಪ್ರೈಸ್‌ ರಿವೀಲ್ ಮಾಡಲಿದ್ದಾರೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ...

Zee kannada geetha bharathi bhat valentines day sweetu album song vcs
Author
Bangalore, First Published Feb 8, 2021, 1:16 PM IST

ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಗೀತಾ ಭಾರತಿ ಭಟ್ ಕೆಲ ದಿನಗಳಿಂದ ಹಲವು ವಿಚಾರಗಳಿಗೆ ಸುದ್ದಿಯಲ್ಲಿದ್ದಾರೆ. ಧಾರವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಬಿಗ್ ಬಾಸ್ ಪ್ರವೇಶಿಸುತ್ತಾರೆಂಬ ವಿಚಾರ ಹರಿದಾಡಿತ್ತು. ಆದರೀಗ ಮತ್ತೆ ಸುದ್ದಿಯಾಗುತ್ತಿರುವುದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ.

2020ರಲ್ಲಿ ಮಾಡಿಕೊಂಡ ಈ ಎಡವಟ್ಟಿನಿಂದ ಬಿಗ್ ಬಾಸ್‌ ಪ್ರವೇಶಿಸುವ ಅವಕಾಶ ಪಡೆದ್ರಾ ಗೀತಾ? 

ಗೀತಾ ನಟಿ ಮಾತ್ರವಲ್ಲ ಗಾಯಕಿ ಕೂಡ ಹೌದು. ಪ್ರೇಮಿಗಳ ದಿನಾಚರಣೆ ಅಂಗವಾದ ಒಂದು ಲವ್ ಆಲ್ಬಂ ಸಾಂಗ್ ರಿಲೀಸ್ ಮಾಡುತ್ತಿದ್ದಾರೆ.  ಆದಿತ್ಯ ವಿನೋದ್‌ಗೆ ಜೊತೆಯಾಗಿ ಗೀತಾ 'ಸ್ವೀಟೂ' ಆಲ್ಬಂ ರೆಡಿ ಮಾಡಿದ್ದಾರೆ. ಆಲ್ಬಂ ಪೋಸ್ಟ್ ಸಖತ್ ರೊಮ್ಯಾಂಟಿಕ್‌ ಆಗಿದ್ದು ಅಭಿಮಾನಿಗಳು ಹಾಡು ಬಿಡುಗಡೆಗಾಗಿ  ಕಾಯುತ್ತಿದ್ದಾರೆ. 

Zee kannada geetha bharathi bhat valentines day sweetu album song vcs

'ಸ್ವೀಟೂ..ಆದಿತ್ಯ ವಿನೋದ್‌ ಜೊತೆಗೆ ಮಾಡಿರುವ ಸಂಗೀತಾ ಅಲ್ಬಂ ವ್ಯಾಲೆಂಟೈನ್ಸ್ ದಿನ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ದಯವಿಟ್ಟು ಎಲ್ಲರೂ ವೀಕ್ಷಿಸಿ ನಿಮ್ಮ ಪ್ರೀತಿ ತೋರಿಸಿ ಆಶೀರ್ವಾದ ಮಾಡಬೇಕು. ಪ್ರೀತಿ ಬಗ್ಗೆ ಇದು ಬೇರೆಯೇ ಕಲ್ಪನೆ ನೀಡುತ್ತದೆ. ಪ್ರೇಮಿಗಳ ದಿನದಿಂದ ನಾವೆಲ್ಲರೂ ಪ್ರೀತಿಯಲ್ಲಿ ಬೀಳೋಣ' ಎಂದು ಗೀತಾ ಬರೆದುಕೊಂಡಿದ್ದಾರೆ. ಗೀತಾ ಹಣೆಗೆ ಮುತ್ತಿಡುತ್ತಿರುವ ಪೋಸ್ಟರ್ ವೈರಲ್ ಆಗಿದ್ದು 'ನಿಮ್ಮ ನಿಜವಾದ ವ್ಯಾಲೆಂಟೈನ್‌ ಇವರೇನಾ' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವೀಕೆಂಡ್‌ ನೈಟ್ ಪಾರ್ಟಿಯಲ್ಲಿ ಪೆಡ್ಲರ್ ಜೊತೆ 'ಗೀತಾ'; ಇವರೂ ತಗೋತಿದ್ರಾ ಡ್ರಗ್ಸ್? 

Follow Us:
Download App:
  • android
  • ios