ಬಿಗ್ ಬಾಸ್ 20ನೇ ಸೀಸನ್‌ನಲ್ಲಿ ಸ್ಪರ್ಧಿ ರ‍್ಯಾಪರ್ ಯುಂಗ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಗೆಳತಿ ಸಮೀಕ್ಷಾಗೆ 10 ರಿಂದ 14 ಬಾರಿ ಮೋಸ ಮಾಡಿರುವುದಾಗಿ ಅವರು ಸಹ ಸ್ಪರ್ಧಿಗಳ ಬಳಿ ಒಪ್ಪಿಕೊಂಡಿದ್ದಾರೆ. ಈ ವಿಚಾರ ಇದೀಗ ವೈರಲ್ ಆಗಿದ್ದು, ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಮುಂಬೈ: ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 20 ಸರಣಿಯು ಸುದ್ದಿಯಲ್ಲಿದೆ. ಅಷ್ಟಕ್ಕೂ ಹಿಂದಿಯ ಬಿಗ್ಬಾಸ್ ಕಾಂಟ್ರವರ್ಸಿಗಳಿಂದಲೇ ಫೇಮಸ್ ಆಗಿರೋದು.ಕೆಲವೊಮ್ಮೆ ಟಿಆರ್ಪಿ ಕಡಿಮೆಯಾದಾಗ ಅಶ್ಲೀಲತೆಯ ಎಲ್ಲೆಯನ್ನೂ ಮೀರಿದ ಷೋ ಎನ್ನುವ ಕೆಟ್ಟ ಹೆಸರು ಕೂಡ ಹಿಂದಿಯ ಬಿಗ್ಬಾಸ್ಗೆ ಇದೆ. ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮಾಡಿಸುವುದು, ಅದನ್ನು ಎಗ್ಗಿಲ್ಲದೇ ಪ್ರಸಾರಮಾಡುವುದು, ವೀಕೆಂಡ್ನಲ್ಲಿ, ಹೋಸ್ಟ್ ಬಂದು ಬೈಯುವಂತೆ ಮಾಡುವುದು... ಇದು ನಡೆದೇ ಇರುತ್ತದೆ. 20ನೇ ಸೀಸನ್‌ನಲ್ಲಿ ಇದಾಗಲೇ ಹಲವಾರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಏತನ್ಮಧ್ಯೆ, ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ರಹಸ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಅಂಥದ್ದೇ ಒಂದು ಬೆಚ್ಚಿಬೀಳುವ ವಿಷ್ಯ ಇದೀಗ ವೈರಲ್ ಆಗುತ್ತಿದೆ.
ರ‍್ಯಾಪರ್ ಯುಂಗ್ ಮೋಸ
16 ಸ್ಪರ್ಧಿಗಳು ಬಿಗ್ ಬಾಸ್ 20 ಮನೆಗೆ ಪ್ರವೇಶಿಸಿದ್ದಾರೆ. ಇಲ್ಲಿಯವರೆಗೆ ಹಲವಾರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈಗ, ಯಂಗ್, ಮಹಿ ವಿಜ್, ಕನಿಕಾ ಮಾನ್, ಅಮ್ರಪಾಲಿ ದುಬೆ, ಅರಿಷ್ಫಾ ಖಾನ್, ಕುಖಾಲ್ ತನ್ವರ್ ಅಕಾ ಗುಲ್ಲು, ಸ್ಕೌಟ್, ಖಾಜಿ ತೌಕೀರ್, ಉದಿತಿ ಸಿಂಗ್ ಮತ್ತು ಮನೀಶ್ ಗೋಯಲ್ ಮನೆಯಲ್ಲಿ ಉಳಿದಿದ್ದಾರೆ. ಈ ಪೈಕಿ ಸ್ಪರ್ಧಿ ರ‍್ಯಾಪರ್ ಯುಂಗ್ ಸದ್ದು ಮಾಡುತ್ತಿದ್ದಾರೆ. ಯಂಗ್ ಅವರು, ಆಗಾಗ್ಗೆ ಮನೆಯಲ್ಲಿ ತನ್ನ ಪ್ರೇಮ ಜೀವನದ ಬಗ್ಗೆ ಚರ್ಚಿಸುತ್ತಿರುತ್ತಾರೆ. ಇದೀಗ ಅವರು, ತಮ್ಮ ಗೆಳತಿ ಸಮೀಕ್ಷಾಳಿಗೆ ಕನಿಷ್ಠ 12 ಬಾರಿ ಮೋಸ ಮಾಡಿರುವುದಾಗಿ ತಿಳಿಸಿದ್ದಾರೆ. ತಮ್ಮ ಮನೆಯಿಂದ ಆಡಿಯೋ ಸಂದೇಶಗಳು ಮತ್ತು ಫೋಟೋಗಳು ಹೊರಬಂದ ನಂತರ ಯಂಗ್ ಇದನ್ನು ಬಹಿರಂಗಪಡಿಸಿದ್ದಾರೆ. ಆಡಿಯೋದಲ್ಲಿ ಯಂಗ್‌ನ ಇಡೀ ಕುಟುಂಬದಿಂದ ಸಂದೇಶಗಳಿವೆ, ಆದರೆ ಅವರ ಗರ್ಲ್ಫ್ರೆಂಡ್ ಯಾವುದೇ ಸಂದೇಶಗಳನ್ನು ಕಳುಹಿಸಲಿಲ್ಲ. ಇದರಿಂದ ನಿರಾಶೆಗೊಂಡಿರುವ ಯಂಗ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
"ನಾನು ಸಮೀಕ್ಷಾಳನ್ನು ಕಳೆದುಕೊಂಡಿದ್ದೇನೆ, ಎಂದು ಯಂಗ್, ಸಹ ಸ್ಪರ್ಧಿ ಸ್ಕೌಟ್‌ನೊಂದಿಗೆ ತನ್ನ ದುಃಖವನ್ನು ಹಂಚಿಕೊಂಡಿದ್ದಾರೆ. ಯಂಗ್‌ನ ಮಾತುಗಳನ್ನು ಕೇಳಿದ ನಂತರ, ಸ್ಕೌಟ್ ಅವರನ್ನು ಶಾಂತಗೊಳಿಸಿದ್ದಾರೆ. ಯಂಗ್, ತಾನು ಅವಳನ್ನು ಹಲವು ಬಾರಿ ಮೋಸ ಮಾಡಿದ್ದೇನೆ ಎಂದು ಸ್ಕೌಟ್‌ಗೆ ಹೇಳಿದ್ದಾರೆ. ಸಮೀಕ್ಷಾಗೆ ಸುಮಾರು 10 ರಿಂದ 14 ಬಾರಿ ಮೋಸ ಮಾಡಿದ್ದೇನೆ ಎಂದು ಯಂಗ್ ವಿವರಿಸಿದ್ದಾರೆ.
ಮೋಸದ ಬಗ್ಗೆ ತಿಳಿದಿಲ್ಲ
ಸತ್ಯ ತಿಳಿದಿದ್ದರೂ ಸಮೀಕ್ಷಾ ಸಂಬಂಧ ಮುಂದುವರಿಸಿದ್ದಾಳೆಯೇ ಎಂದು ಸ್ಕೌಟ್ ಕೇಳಿದಾಗ, ಯುಂಗ್ ಡಿಎಸ್ಎ ತಾನು ಮೋಸ ಮಾಡಿದ್ದು ಅವಳಿಗೆ ತಿಳಿದಿರಲಿಲ್ಲ ಎಂದು ವಿವರಿಸಿದರು. ತಾನು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ನಂತರವೇ ಅವಳಿಗೆ ಅದು ತಿಳಿದಿರಬಹುದು ಎಂದು ಅವರು ಹೇಳಿದರು. ಸ್ಕೌಟ್ ಜೊತೆ ಮುಕ್ತವಾಗಿ ಮಾತನಾಡುವ ಮೊದಲು, ಯುಂಗ್ ಡಿಎಸ್‌ಎ ಮನೀಶ್ ಗೋಯೆಲ್ ಮತ್ತು ಅಮ್ರಪಾಲಿ ದುಬೆ ಅವರೊಂದಿಗೆ ಮಾತನಾಡುವಾಗ ಭಾವುಕರಾದರು. ಆ ಸಮಯದಲ್ಲಿ, ಅವರು ಮೋಸದ ಬಗ್ಗೆ ಅವರಿಗೆ ಹೇಳಲಿಲ್ಲ.ಆದರೆ ಗರ್ಲ್ಫ್ರೆಂಡ್ ತನ್ನನ್ನು ಬಿಟ್ಟು ಹೋಗಿರಬಹುದು ಎಂದು ತಮ್ಮ ಆತಂಕದ ಬಗ್ಗೆ ರಿವೀಲ್ ಮಾಡಿದರು. ತಮ್ಮ ಕುಟುಂಬಗಳಿಂದ ಬರುವ ಸಂದೇಶಗಳನ್ನು ಕೇಳುವುದು ಸ್ಪರ್ಧಿಗಳಿಗೆ ಕಷ್ಟಕರವಾಗಿತ್ತು.














