ಹೆಣ್ಮಗು ಬೇಕು ಎಂದು ಪತ್ನಿಗೆ IVF ಮಾಡಿಸಿ ಪ್ರಾಣಾಪಾಯ ತಂದುಕೊಟ್ಟ ಹಾಸ್ಯ ನಟ; ಘಟನೆ ನೆನೆದು ಭಾವುಕರಾದ ಮಿಮಿಕ್ರಿ ಗೋಪಿ

ಮತ್ತೊಂದು ಮಗುವೆಗೆ ಆಸೆ ಪಟ್ಟು ಪತ್ನಿ ಆರೋಗ್ಯ ಸ್ಥಿತಿ ನೋಡಿ ಗಾಬರಿ ಆದ ಮಿಮಿಕ್ರಿ ಗೋಪಿ. ಯಾವುದೇ ಹಿಂಜರಿಕೆ ಇಲ್ಲದೆ ಘಟನೆ ಬಿಚ್ಚಿಟ್ಟ ಹಾಸ್ಯ ನಟ.

Zee Kannada DKD mimicry gopi talks about wife difficulties in second pregnancy vcs

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಕಾರ್ಯಕ್ರಮದಲ್ಲಿ ಮಿಮಿಕ್ರಿ ಗೋಪಿ ಸ್ಪರ್ಧಿಸುತ್ತಿದ್ದಾರೆ. ವಾರ ವಾರವೂ ಅದ್ಭುತವಾಗಿ ನೃತ್ಯ ಮಾಡುತ್ತಿರುವ ಗೋಪಿ ಅವರು ಒಮ್ಮೆ ತಮ್ಮ ಫ್ಯಾಮಿಲಿಯನ್ನು ವೇದಿಕೆ ಮೇಲೆ ಕರೆದುಕೊಂಡು ಬಂದಿದ್ದರು. ಆಗ ತಮ್ಮ ಜೀವನದಲ್ಲಿ ನಡೆದ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ. 

ಗೋಪಿ ಅವರ ಮಿಮಿಕ್ರಿ ಗೋಪಿ ಆಗುವ ಮುನ್ನ ಜೆಎಸ್‌ಎಸ್‌ ಕಾಲೇಜ್‌ನಲ್ಲಿ ಶಿಕ್ಷಕರಾಗಿದ್ದರು. ಕೆಲಸ ರಿಸೈನ್ ಮಾಡಿ ಆನಂತರ ಈ ಕ್ಷೇತ್ರಕ್ಕೆ ಕಾಲಿಟ್ಟರು. 'ಗೋಪಿ ಅವರನ್ನು ಮದುವೆ ಮಾಡಿಕೊಂಡಾಗ ಈ ರೀತಿ ಶೊ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ ಏಕೆಂದರೆ ಇವರು ಟೀಚರ್ ಎಂದು ನನ್ನ ತಾಯಿ ಮದುವೆ ಮಾಡಿಸಿದ್ದು' ಎಂದು ಗೋಪಿ ಅವರ ಪತ್ನಿ ಮಾತನಾಡಿದ್ದಾರೆ.

ಮಗನ ಸ್ಕೂಲ್ ಮೀಟಿಂಗ್‌ನಲ್ಲಿ ಟೀಚರ್‌ಗೆ ಕ್ಲಾಸ್ ತೆಗೆದುಕೊಂಡ ದರ್ಶನ್; ಫೀಸ್‌ನ ಗಿಡದಿಂದ ಕಿತ್ಕೊಂಡು ತರ್ತಿಲ್ಲ ಎಂದ ನಟ!

ಮರೆಯಲಾಗದ ಘಟನೆ: 

'ನಮ್ಮ ಮನೆಯಲ್ಲಿ ಮೂರು ಜನ ಸಹೋದದರು ಇದ್ದ ಕಾರಣ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಜಾಸ್ತಿ ಹೀಗಾಗಿ ಮತ್ತೊಂದು ಮಗು ಮಾಡಿಕೊಳ್ಳಬೇಕು ಎನ್ನು ಪ್ಲ್ಯಾನ್ ಇತ್ತು. ಎರಡು ಮೂರು ಸಲ ಪ್ರೆಗ್ನೆನ್ಸಿ ಲಾಸ್ ಆಗುತ್ತಿತ್ತು...ವಯಸ್ಸು ಹೆಚ್ಚಾಗುತ್ತಿದೆ ಎಂದು ನಾವು ಹೊಸ ತಂತ್ರಜ್ಞ ಐವಿಎಫ್ ಮೂಲಕ ಮತ್ತೊಂದು ಮಾಡಿಕೊಳ್ಳಲು ಮುಂದಾದೆವು. ವೈದರು ಚಿಕಿತ್ಸೆ ನೀಡಿ ಎರಡು ಭ್ರೂಣಗಳನ್ನು ಹಾಕಿದ್ದರು ಆದರೆ ಒಂದು ದಿನ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆ ನೋವು ಶುರುವಾಗಿತ್ತು ಯಾಕೆ ಎಂದು ಗೊತ್ತಿಲ್ಲದೆ ಚೆಕ್ ಮಾಡಿಸಿದಾ ಒಂದು ಸರಿಯಾಗಿ ಬೆಳೆಯುತ್ತಿದೆ ಆದರೆ ಮತ್ತೊಂದು ಟ್ಯೂಬ್‌ನಲ್ಲಿ ಬೆಳೆಯುತ್ತಿದೆ ಎಂದು ಹೇಳಿದ್ದರು' ಎಂದು ಗೋಪಿ ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡ ಬಿಗ್ ಬಾಸ್ ಪ್ರಿಯಾಂಕಾ; ಫೋಟೋ ನೋಡಿ ಎಲ್ಲರೂ

'ಅವತ್ತಿಗೆ 7 ವಾರ ಆಗಿತ್ತು ತೆಗೆಯಲಿಲ್ಲ ಅಂದ್ರೆ ಇಡೀ ಬಾಡಿಗೆ ವಿಷ ಸೇರಿಕೊಳ್ಳುವಂತೆ ಆಗುತ್ತದೆ ಅಂದುಬಿಟ್ಟರು ಹೀಗಾಗಿ ಯಾರಿಗೂ ಹೇಳದೆ ಆಪರೇಷನ್ ಮಾಡಿಸಲು ಮುಂದಾದೆವು. ವೈದ್ಯರು ಬಂದು ಆಪರೇಷನ್ ಸಕ್ಸಸ್ ಆಗಿದೆ ಆದರೆ ಬಿಪಿ 200 ಮುಟ್ಟಿದೆ ಚಾನ್ಸ್‌ ತುಂಬಾ ಕಡಿಮೆ ಅಂದುಬಿಟ್ಟರು...ರಾತ್ರಿ 12 ಗಂಟೆ ಆಗಿತ್ತು ಇರೋ ಬರೋ ದೇವರಿಗೆ ಹರಿಕೆ ಹೊತ್ತುಕೊಂಡಿದ್ದೆ...ಆ ನಂತರ ತಡವಾಗಿ ಕಡಿಮೆ ಆಗುತ್ತಾ ಬಂದು. ಬೆಳಗ್ಗೆ ಆಗುವಷ್ಟರಲ್ಲಿ ನನ್ನ ಜೀವನ ಕಷ್ಟ ಆಗಿತ್ತು. ನಾನು ಕಣ್ಣೀರು ಹಾಕುವುದಿಲ್ಲ ಏಕೆಂದರೆ ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟು ಬಂದಿದ್ದರೂ ಅದನ್ನು ಎಂಜಾಯ್ ಮಾಡಿಕೊಂಡು ಹೇಳಬೇಕು ಅನ್ನೋದು ನನ್ನ ಆಸೆ' ಎಂದಿದ್ದಾರೆ ಗೋಪಿ.

 

Latest Videos
Follow Us:
Download App:
  • android
  • ios