ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ 2 ರಿಯಾಲಿಟಿ ಶೋನಲ್ಲಿ ಡ್ರೋನ್ ಪ್ರತಾಪ್ ಮತ್ತು ಗಗನಾ ಗಮನ ಸೆಳೆಯುತ್ತಿದ್ದಾರೆ. ಈ ವಾರ, ರೀ-ಕ್ರಿಯೇಷನ್ ರೌಂಡ್‌ನಲ್ಲಿ ಪ್ರತಾಪ್ ರವಿಚಂದ್ರನ್ ಅವರ ರಾಮಚಾರಿ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ನಟನೆಯನ್ನು ರವಿಚಂದ್ರನ್ ಮೆಚ್ಚಿದ್ದಾರೆ. ಗಗನಾ ಮಾಲಾಶ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 15 ಮತ್ತು 16 ರಂದು ಪೂರ್ಣ ಎಪಿಸೋಡ್ ಪ್ರಸಾರವಾಗಲಿದೆ. ಇತರ ಸ್ಪರ್ಧಿಗಳು ಯಶ್, ಸುದೀಪ್, ದರ್ಶನ್ ಅವರ ಪಾತ್ರಗಳನ್ನು ಮರುಸೃಷ್ಟಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ 2 ರಿಯಾಲಿಟಿ ಶೋನಲ್ಲಿ ಡ್ರೋನ್ ಪ್ರತಾಪ್ ಸ್ಪರ್ಧಿಸುತ್ತಿದ್ದಾರೆ. ಪ್ರತಾಪ್‌ಗೆ ಜೋಡಿಯಾಗಿರುವುದು ಮಹಾನಟಿ ರಿಯಾಲಿಟಿ ಶೋನ ಸ್ಪರ್ಧಿ ಗಗನಾ. ಓಪನಿಂಗ್ ಎಪಿಸೋಡ್‌ನಿಂದ ಒಂದಲ್ಲ ಒಂದು ರೀತಿಯಲ್ಲಿ ವೀಕ್ಷಕರ ಗಮನ ಸೆಳೆಯುತ್ತಿರುವುದು ಇವರಿಬ್ಬರೇ. ಅಲ್ಲದೆ ರೀ-ಕ್ರಿಯೇಷನ್ ರೌಂಡ್‌ನಲ್ಲಿ ಪ್ರತಾಪ್ ಆಯ್ಕೆ ಮಾಡಿಕೊಂಡಿರುವ ರೂಲ್ ನೋಡಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ಸದ್ಯ ಪ್ರೋಮೋ ಮಾತ್ರ ರಿಲೀಸ್ ಆಗಿದೆ.
ಹೌದು! ಈ ವಾರ ರೀ-ಕ್ರಿಯೇಷನ್ ರೌಂಡ್ ನಡೆಯುತ್ತಿದ್ದರು ರವಿಚಂದ್ರನ್ ನಟನೆಯ ರಾಮಚಾರಿ ಪಾತ್ರವನ್ನು ಡ್ರೋನ್ ಪ್ರತಾಪ್ ಆಯ್ಕೆ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ಬಂದಾಗಲೆಲ್ಲಾ 'ನನಗೆ ರವಿಚಂದ್ರನ್ ಸರ್ ಅವರ ರಾಮಚಾರಿ ಸಿನಿಮಾ ಅಂದ್ರೆ ತುಂಬಾನೇ ಇಷ್ಟ' ಎಂದು ಹೇಳುತ್ತಿದ್ದರು. ಹೀಗಾಗಿ ಈ ಸಲ ಅದೇ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ 'ಆಕಾಶದಾಗೆ ಯಾರೋ ಮಾಯಗಾರನು' ಅಂತ ಕುಣಿದು ಕುಪ್ಪಳಿಸಿದ್ದಾರೆ. ಇದನ್ನು ಸ್ವತಃ ರವಿಚಂದ್ರನ್ ನೋಡಿ ಶಾಕ್ ಆಗಿದ್ದಾರೆ. 'ದಿಢೀರ್ ಅಂತ ಒಬ್ಬ ಪೆದ್ದನಾಗಿ ನಟಿಸುವುದು ಅಷ್ಟು ಸುಲಭವಲ್ಲ. ಪ್ರತಾಪ್ ನೀನು ಚೆನ್ನಾಗಿ ಮಾಡಿದ್ದೀಯಾ' ಎಂದು ರವಿಚಂದ್ರನ್ ಹೊಗಳುತ್ತಾರೆ.
ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!
ಸದ್ಯ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಸಂಪೂರ್ಣ ಎಪಿಸೋಡ್ ಮಾರ್ಚ್ 15 ಮತ್ತು 16ರಂದು ಟೆಲಿಕಾಸ್ಟ್ ಆಗಲಿದೆ. ಮಾಲಾಶ್ರೀ ಅವತಾರದಲ್ಲಿ ಗಗನಾ ಕೂಡ ಸಖತ್ ಮಿಂಚಿದ್ದಾರೆ. ತಮಿಳಿನ 'ಚಿನ್ನತಂಬಿ' ಸಿನಿಮಾವನ್ನು ರಿಮೇಕ್ ಮಾಡಿ 1991ರಲ್ಲಿ ರಾಮಾಚಾರಿ ಸಿನಿಮಾ ಆಗಿ ತೆರೆ ಕಂಡಿತ್ತು. ಡಿ ರಾಜೇಂದ್ರ ಬಾಬು ಆಕ್ಷನ್ ಕಟ್ ಹೇಳಿದ್ದಾರೆ. ಹಂಸಲೇಖ ಅವರು ಸಂಯೋಜಿಸಿದ್ದ ಹಾಡುಗಳು ಸೂಪರ್ ಹಿಟ್ ಆಗಿತ್ತು, ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಈ ಸಿನಿಮಾದಲ್ಲಿ ರವಿಚಂದ್ರನ್, ಮಾಲಾಶ್ರೀ, ಗಿರಿಜಾ ಲೋಕೇಶ್, ಸುಮಿತ್ರಾ,ಪ್ರತಾಪ್ ರಾಜ್, ಮೈಸೂರು ಲೋಕೇಶ್, ಜ್ಯೋತಿ ಸೇರಿದಂತೆ ಹಲವು ನಟಿಸಿದ್ದಾರೆ.
ಎಲ್ರಿಗೂ ಅಪ್ಪ ಇದ್ದಾರೆ ಇವತ್ತು.....; ರವಿಚಂದ್ರನ್ ಎದುರು ಕಣ್ಣೀರಿಟ್ಟ ರಕ್ಷಕ್ ಬುಲೆಟ್
ಈ ವಾರ ಯಶ್, ಸುದೀಪ್, ದರ್ಶನ್ ಹೀಗೆ ಸಾಲು ಸಾಲು ಸ್ಟಾರ್ ನಟ-ನಟಿಯರ ಸಿನಿಮಾದ ಸಣ್ಣ ಸೀನ್‌ಗಳನ್ನು ರೀ-ಕ್ರಿಯೇಟ್ ಮಾಡಿದ್ದಾರೆ.
