Sandalwood
ಗಾಜನೂರು ಎಂದು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ಡಾ.ರಾಜ್‌ಕುಮಾರ್ ಅವರ ಹುಟ್ಟೂರು ಎಂದು.
ಗಾಜನೂರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಭೇಟಿ ನೀಡಿದ್ದಾರೆ.
ಗಾಜನೂರಿನಲ್ಲಿ ಅಣ್ಣಾವ್ರ ಸಹೋದರಿ ನಾಗಮ್ಮನವರು ಇದ್ದಾರೆ. ಹಲತು ತಿಂಗಳ ನಂತರ ಅವರನ್ನು ಭೇಟಿ ಮಾಡಿದ್ದಾರೆ.
ಶೂಟಿಂಗ್ ಸಮಯದಲ್ಲಿ ಬಿಡುವುದು ಇದ್ದಾಗಲೆಲ್ಲಾ ಶಿವಣ್ಣ,ಅಪ್ಪು ಮತ್ತು ರಾಘಣ್ಣ ಗಾಜನೂರಿಗೆ ಭೇಟಿ ನೀಡಿ ಅಲ್ಲಿ ಸಮಯ ಕಳೆಯುತ್ತಿದ್ದರು.
ವಿದೇಶದಲ್ಲಿ ಚಿಕಿತ್ಸೆ ಪಡೆದು ಸುಮಾರು 1 ತಿಂಗಳು ವಿಶ್ರಾಂತಿ ಪಡೆದು ಭಾರತಕ್ಕೆ ಬರುತ್ತಿದ್ದಂತೆ ಶಿವಣ್ಣ ಫುಲ್ ಆಕ್ಟಿವ್ ಆಗಿ ಓಡಾಡಲು ಶುರು ಮಾಡಿದ್ದಾರೆ.
ರೆಸ್ಟ್ ತೆಗೆದುಕೊಳ್ಳದೆ ಶಿವಣ್ಣ ಮುರ್ನಾಲ್ಕು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಗಲೇ ಪತ್ನಿ ಜೊತೆ ರಿಯಾಲಿಟಿ ಶೋ ಸೆಟ್‌ಗೆ ಭೇಟಿ ನೀಡಿದ್ದರು.