ರಕ್ಷಕ್, ಬುಲೆಟ್ ಪ್ರಕಾಶ್ ಅವರ ಪುತ್ರ, 'ಗುರು ಶಿಷ್ಯರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೀ ಕನ್ನಡದ 'ಭರ್ಜರಿ ಬ್ಯಾಚುಲರ್' ರಿಯಾಲಿಟಿ ಶೋನಲ್ಲಿ ರಮೋಲಾ ಅವರೊಂದಿಗೆ ಭಾಗವಹಿಸಿದ್ದಾರೆ. ರಚಿತಾ ರಾಮ್ ಅಭಿನಯದ ದೃಶ್ಯವನ್ನು ಮರುಸೃಷ್ಟಿಸಿದಾಗ ರವಿಚಂದ್ರನ್ ಮೆಚ್ಚುಗೆ ವ್ಯಕ್ತಪಡಿಸಿದರು. ತಂದೆಯನ್ನು ನೆನೆದು ರಕ್ಷಕ್ ಭಾವುಕರಾದರು, ದರ್ಶನ್ ಅಭಿಮಾನಿಗಳು ಬೆಂಬಲ ನೀಡುತ್ತಿದ್ದಾರೆ. ವೀಕ್ಷಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಗುರು ಶಿಷ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ರಕ್ಷಕ್. ಹಿರಿಯ ನಟ ದಿವಂಗತ ಬುಲೆಟ್ ಪ್ರಕಾಶ್ ಅವರ ಪುತ್ರ. ತಂದೆ ಅಗಲಿದೆ ಮೇಲೆ ಯಾರ ಸಪೋರ್ಟ್ ಇಲ್ಲದೆ ಇಂಡಸ್ಟ್ರಿಯಲ್ಲಿ ಹೆಸರಲು ಮಾಡಲು ಒದ್ದಾಡುತ್ತಿರುವ ರಕ್ಷಕ್‌ನ ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ ಸೀಸನ್ 1 ರಿಯಾಲಿಟಿ ಶೋ. ಅಷ್ಟೇ ಅಲ್ಲ ರಕ್ಷಕ್‌ನಲ್ಲಿ ಇರುವ ರೊಮ್ಯಾಂಟಿಕ್ ಆಂಡ್ ಹಂಬಲ್ ಸೈಡ್‌ನ ಹೊರ ತೆಗೆಯಲು ಸಹಾಯ ಮಾಡುತ್ತಿರುವುದು ಪಾರ್ಟನರ್ ರಮೋಲಾ. 

ಮೊದಲ ವಾರದಲ್ಲಿ ರಕ್ಷಕ್‌ ಪಂಚ್ ಇಷ್ಟ ಪಟ್ಟ ಜನರಿಗೆ ಅವರ ನೋವು ಅರ್ಥವಾಗಿದೆ. ಈ ವಾರ ಯಾವುದಾದರೂ ಒಂದು ಸಿನಿಮಾದ ದೃಶ್ಯವನ್ನು ರೀ-ಕ್ರಿಯೇಟ್ ಮಾಡಬೇಕು. ರಚಿತಾ ರಾಮ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ರಕ್ಷಕ್ ಮತ್ತು ರಮೋಲಾ ವೇದಿಕೆ ಮೇಲೆ ನಟಿಸುತ್ತಾರೆ. ಇದನ್ನು ನೋಡಿದ ರಚಿತಾ ಖುಷಿಯಾಗುತ್ತಾರೆ. ಅಷ್ಟೇ ಅಲ್ಲ 'ಮನಸ್ಪೂರ್ತಿಯಾಗಿ ಖುಷಿ ಆಯ್ತು ನಿನ್ನ ನಟನೆ ನೋಡಿ' ಎಂದು ರವಿಚಂದ್ರನ್ ಹೇಳುತ್ತಾರೆ. ಇದನ್ನು ಕೇಳಿ ರಕ್ಷಕ್ ಭಾವುಕರಾಗುತ್ತಾರೆ. ವೇದಿಕೆಯ ಪಕ್ಕದಲ್ಲಿ ನಿಂತು ಬಿಕ್ಕಿ ಬಿಕ್ಕಿ ಕಣ್ಣೀರಿಡುತ್ತಾರೆ. 

ನಾನೇನು ಶೋಕಿಗೆ ಮಾಡ್ತಿಲ್ಲ, ಇನ್‌ಸ್ಟಾಗ್ರಾಂನಲ್ಲಿ ನನ್ನಿಂದ ಅವರಿಗೆ 15 ಸೀರೆ ಸೇಲ್ ಆಗುತ್ತದೆ: ಅಮೃತಾ ರಾಮಮೂರ್ತಿ

'ಇದೇ ಅಬ್ಬಾಯಿ ನಾಯ್ಡು ಸ್ಟುಡಿಯೋಗೆ ನನ್ನ ಅಪ್ಪನ ಜೊತೆ ಬರ್ತಿದ್ದೆ. ಅವರು ನೆನಪಾದ್ರು, ಅವರು ಇನ್ನೂ ಸ್ವಲ್ಪ ದಿನ ಆದರೂ ಇರಬೇಕಿತ್ತು. ಅದನ್ನು ನಾನು ಮಿಸ್ಮ ಮಾಡಿಒಕಕೊಳ್ಳುತ್ತೇನೆ. ಎಲ್ರಿಗೂ ಅಪ್ಪ ಇದ್ದಾರೆ ಇವತ್ತು.....' ಎಂದು ರಕ್ಷಕ್ ಬುಲೆಟ್ ಮಾತನಾಡಿದ್ದಾರೆ. ರಕ್ಷಕ್ ಕಣ್ಣೀರಿಡುವುದನ್ನು ನೋಡಿ ಅಲ್ಲಿದ್ದ ಪ್ರತಿಯೊಬ್ಬರು ಭಾವುಕರಾಗಿದ್ದಾರೆ. 'ಯಾರು ಎಷ್ಟೇ ನೆಗೆಟಿವ್ ಕಮೆಂಟ್ಸ್ ಹಾಕಿದ್ರು ಎಲ್ಲಾ ಡಿ ಬಾಸ್ ಫ್ಯಾನ್ಸ್‌ ಮಾತ್ರ ರಕ್ಷಕ್‌ಗೆ ಸಪೋರ್ಟ್ ಮಾಡುತ್ತೀವಿ, ಮಾತು ಹೊರಟು ಮನಸ್ಸು ಹೊತರ ಅನ್ನೋದಕ್ಕಿ ನೀನೇ ಸಾಕ್ಷಿ ರಕ್ಷಕ್. ನೀನು ಒಳ್ಳೆಯ ಸಿನಿಮಾ ಮಾಡಿ ದರ್ಶನ್‌ ಸರ್‌ ತರ ಆಗಬೇಕು' ಎಂದು ವೀಕ್ಷಕರು ಸಖತ್ ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ.

ಬೇಕಿದ್ರೆ ಇನ್ನೂ ಬಯ್ಯಿರಿ, ಟ್ರೋಲ್ ಮಾಡಿ ನಾನು ನೋಡ್ಕೊಂಡು ನಗುತ್ತೀನಿ ಅಷ್ಟೇ: ನಿವೇದಿತಾ ಗೌಡ ಬೋಲ್ಡ್‌ ಉತ್ತರ

View post on Instagram