ಸೀನನಿಗೆ ಪಿಂಕಿ ಮೇಲಿನ ಪ್ರೀತಿಯಿಂದ ರಶ್ಮಿಗೆ ತೊಂದರೆಯಾಗುತ್ತಿದೆ. ಸೀನನ ತಾಯಿ ಪಿಂಕಿ ಜೊತೆ ಮದುವೆಗೆ ಒತ್ತಾಯಿಸುತ್ತಿದ್ದಾರೆ. ರಶ್ಮಿಗೆ ಸೀನನ ಮೇಲೆ ಪ್ರೀತಿಯಿದ್ದರೂ, ಅದನ್ನು ವ್ಯಕ್ತಪಡಿಸಿಲ್ಲ. ಇತ್ತ ಸೋಮೇಗೌಡನ ಕುಟುಂಬ ರಾಣಿಯ ಆಸ್ತಿಗಾಗಿ ಕಿವುಡನ ಜೊತೆ ಮದುವೆಗೆ ಯತ್ನಿಸುತ್ತಿದೆ.

‘ಅಣ್ಣಯ್ಯ’ ಧಾರಾವಾಹಿಯಲ್ಲಿ ಇಷ್ಟವಿಲ್ಲದೆ ಜಿಮ್‌ ಸೀನ, ಗುಂಡಮ್ಮ ರಶ್ಮಿ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಪಿಂಕಿಯನ್ನು ಮದುವೆ ಆಗಬೇಕು ಅಂತ ಅವನು ಅಂದುಕೊಂಡಿದ್ದನು. ಆದರೆ ವಿಧಿ ಸೀನ ಹಾಗೂ ರಶ್ಮಿಯನ್ನು ಒಂದು ಮಾಡಿತು. ಈಗಲೂ ಸೀನ ಪಿಂಕಿಯ ಮೇಲೆ ಆಸೆ ಇಟ್ಟುಕೊಂಡಿದ್ದಾನೆ. ಈಗ ಅವನು ಪಿಂಕಿಯನ್ನು ಮದುವೆ ಆಗುವ ಪ್ರಸಂಗ ಬಂದಿದೆ.

ಪಿಂಕಿ, ಸೀನ ಮದುವೆ ಆಗತ್ತಾ?
ಸೀನನ ಜೊತೆ ನನಗೆ ಮಾತಾಡೋಕೆ ಆಗ್ತಿಲ್ಲ, ಅವಕಾಶವೇ ಸಿಗ್ತಿಲ್ಲ ಅಂತ ಪಿಂಕಿ ಸಿಟ್ಟಾಗಿದ್ದಾಳೆ. ಹೀಗಾಗಿ ಅವಳು ಸೀನನ ಮನೆಗೆ ಬಂದು, “ನನಗೆ ತಾಳಿ ಕಟ್ಟು” ಅಂತ ಹೇಳಿದ್ದಾಳೆ. ಇದಕ್ಕೆ ಸೀನನ ತಾಯಿಯ ಬೆಂಬಲವೂ ಇದೆ. ನಾನು ರಶ್ಮಿಗೆ ಮೋಸ ಮಾಡ್ತಿದ್ದೀನಿ, ಅವಳ ಮನಸ್ಸು ನೋಯಿಸ್ತಿದೀನಿ ಅಂತ ಗೊತ್ತಾದರೆ ಶಿವಣ್ಣ ನನ್ನ ಉಳಿಸೋದಿಲ್ಲ, ನನ್ನ ತಂದೆಯೂ ನನ್ನ ಬಿಡೋದಿಲ್ಲ ಎಂದು ಸೀನನಿಗೆ ಗೊತ್ತಿದೆ. ಈಗ ಅವಳು ತಾಳಿ ಕಟ್ತಾನಾ? ಇಲ್ಲವಾ ಎಂದು ಕಾದು ನೋಡಬೇಕಾಗಿದೆ.

ಇನ್ನೊಂದು ಕಡೆ ಸೀನನ ತಾಯಿ ಸೀನನ ಬಳಿ ಆಣೆ ಮಾಡಿಸಿಕೊಂಡಿದ್ದಾಳೆ. “ನಾನು ಪಿಂಕಿ ಬಿಟ್ಟು ಎಲ್ಲೂ ಹೋಗೋದಿಲ್ಲ. ನಿನ್ನ ಮೇಲೆ ಆಣೆ” ಎಂದು ಸೀನ ತನ್ನ ತಾಯಿ ಮೇಲೆ ಆಣೆ ಮಾಡಿದ್ದಾನೆ. ಸೀನ ಆ ದಢೂತಿ ರಶ್ಮಿಯನ್ನು ಮದುವೆ ಆಗಿದ್ದು ಅವನ ತಾಯಿಗೆ ಇಷ್ಟವೇ ಇಲ್ಲ. ಪಿಂಕಿಯೇ ನನ್ನ ಸೊಸೆ ಆಗಬೇಕು ಅಂತ ಅವಳು ಬಯಸಿದ್ದಾಳೆ. 

ಸೀನನಿಗೆ ರಶ್ಮಿ ಮೇಲೆ ಲವ್‌ ಆಗತ್ತಾ? 
ಇನ್ನೇನು ಸೀನ ತಾಳಿಯನ್ನು ಕೈಗೆ ತಗೊಂಡು ಕಟ್ಟಬೇಕು ಎನ್ನುವಷ್ಟರಲ್ಲಿ ರಶ್ಮಿ ಎಂಟ್ರಿ ಆಗಬಹುದು. ಒಟ್ಟಿನಲ್ಲಿ ಸೀನನಿಗೆ ಮದುವೆ ಆಗೋದು ಡೌಟ್‌ ಎನ್ನಬಹುದು. ಪಿಂಕಿ, ಸೀನ ಲವ್‌ ಮಾಡುತ್ತಿದ್ದರು ಎಂಬ ವಿಷಯ ರಶ್ಮಿಗೋ ಅಥವಾ ಶಿವನಿಗೋ ಗೊತ್ತಾದರೆ ಏನಾಗಬಹುದು? ಯಾರ ಮುಂದೆಯೂ ಗಂಡನನ್ನು ಬಿಟ್ಟುಕೊಡದ ರಶ್ಮಿ ಯಾರೂ ಇಲ್ಲದಿದ್ದಾಗ ಗಂಡನ ಜೊತೆ ಜಗಳ ಆಡ್ತಾಳೆ. ಗಂಡನನ್ನು ಕಂಡ್ರೆ ರಶ್ಮಿಗೆ ಇಷ್ಟ ಇದೆ. ಆದರೆ ಇನ್ನೂ ಅವಳು ಎಲ್ಲರ ಮುಂದೆ ಪ್ರೀತಿಯನ್ನು ಹೇಳಿಕೊಂಡಿಲ್ಲ. ಮುಂದೊಂದು ದಿನ ಸೀನನಿಗೂ ರಶ್ಮಿ ಮೇಲೆ ಲವ್‌ ಬಂದ್ರೂ ಬರಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿದೆ.

ರಾಣಿ ಮದುವೆ ನಡೆಯತ್ತಾ?
ಪಾರ್ವತಿಯನ್ನು ಮದುವೆ ಆಗಬೇಕು ಅಂತ ಸೋಮೇಗೌಡ ಅಂದುಕೊಂಡಿದ್ದ. ಸೋಮೇಗೌಡನ ಮನೆಯವರು ಈಗ ಶಿವು ಮನೆಗೆ ಬಂದು ರಾಣಿಯನ್ನು ಕಿವುಡನಿಗೆ ಕಟ್ಟಿಹಾಕಿ, ಅವನ ಆಸ್ತಿಯನ್ನು ತಾನು ಹೊಡೆಯಬೇಕು ಎಂದುಕೊಂಡಿದ್ದಾಳೆ. ಈ ವಿಚಾರ ಇನ್ನೂ ಶಿವು-ಪಾರುಗೆ ಗೊತ್ತಾಗಿಲ್ಲ. ಸೋಮೇಗೌಡನಿಗೆ ಒಮ್ಮೆ ಪಾರು ಬೈದಿದ್ದಳು, ಹೊಡೆದಿದ್ದಳು. ಮತ್ತೆ ಹಳೇ ಕ್ಯಾತೆ ತೆಗೆದರೆ ಅವರಿಗೂ ಕೂಡ ಗ್ರಹಚಾರ ಬಿಡಸ್ತೀನಿ ಅಂತ ಪಾರು ಅಂದುಕೊಂಡಿದ್ದಾಳೆ. ಇವರ ಕುತಂತ್ರಕ್ಕೆ ರಾಣಿ ಜೀವನ ಏನಾಗತ್ತೋ ಏನೋ!

ಧಾರಾವಾಹಿ ಕಥೆ ಏನು?
ಶಿವುಗೆ ಮೂವರು ತಂಗಿಯಂದಿರು. ಇನ್ನು ಶಿವು-ಪಾರು ಮದುವೆ ಆಗಿದೆ. ಈ ಹಳ್ಳಿಯಲ್ಲಿ ಪಾರು ತಂದೆಯೇ ಅವನ ಶತ್ರು. ಇನ್ನೋರ್ವ ಸೋಮೇಗೌಡ ಕೂಡ ಪಾರುಳನ್ನು ಮದುವೆ ಆಗಬೇಕು ಎಂದುಕೊಂಡಿದ್ದರೂ ಅದು ಸಾಧ್ಯ ಆಗಲಿಲ್ಲ. ಇನ್ನು ಶಿವು ಮೂರನೇ ತಂಗಿ ರಶ್ಮಿ ಹಾಗೂ ಜಿಮ್‌ ಸೀನ ಮದುವೆ ಆಗಿದೆ. ಸೀನನಗೆ ಈ ಮದುವೆ ಇಷ್ಟ ಇರಲಿಲ್ಲ. ಇನ್ನು ರತ್ನ, ರಾಣಿಯರ ಮದುವೆ ಆಗಬೇಕಿದೆ. ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ರ್ಯಾಕ್‌ಗಳಿವೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು
ಶಿವು- ವಿಕಾಶ್‌ ಉತ್ತಯ್ಯ
ಪಾರ್ವತಿ- ನಿಶಾ ರವಿಕೃಷ್ಣನ್‌

ಈ ಧಾರಾವಾಹಿಯಲ್ಲಿ ನಾಗೇಂದ್ರ ಶಾ ಕೂಡ ನಟಿಸುತ್ತಿದ್ದಾರೆ. ಈ ಧಾರಾವಾಹಿ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿದೆ. ಸುಪ್ರೀತಾ ಶೆಟ್ಟಿ, ಪ್ರಮೋದ್‌ ಶೆಟ್ಟಿ ಅವರು ಈ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ. 

View post on Instagram