- Home
- Sports
- Cricket
- ಕೆಲ ಕ್ರಿಕೆಟಿಗರು ನನ್ನ ಜೊತೆ..ಲಿಂಗ ಬದಲಾವಣೆ ಬಳಿಕ ನಡೆದ ಘಟನೆ ಬಿಚ್ಚಿಟ್ಟ ಸಂಜಯ್ ಬಂಗಾರ್ ಪುತ್ರಿ
ಕೆಲ ಕ್ರಿಕೆಟಿಗರು ನನ್ನ ಜೊತೆ..ಲಿಂಗ ಬದಲಾವಣೆ ಬಳಿಕ ನಡೆದ ಘಟನೆ ಬಿಚ್ಚಿಟ್ಟ ಸಂಜಯ್ ಬಂಗಾರ್ ಪುತ್ರಿ
ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಪುತ್ರ ಆರ್ಯನ್ ಲಿಂಗ ಬದಲಾಯಿಸಿ ಅನನ್ಯಾ ಆದ ಕತೆ ಹೊಸದೇನಲ್ಲ. ಆದರೆ ಆರ್ಯನ್ ಅನನ್ಯ ಆದ ಬಳಿಕ ನಡೆದ ಸ್ಫೋಟಕ ಘಟನೆಯನ್ನು ಅನನ್ಯ ಹಂಚಿಕೊಂಡಿದ್ದಾಳೆ. ಅಷ್ಟಕ್ಕೂ ಸುಂದರಿಯಾದ ಬಳಿಕ ನಡೆದ ಆ ಘಟನೆ ಏನು?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಪುತ್ರ ಆರ್ಯನ್ ಬಂಗಾರ್ ಕಳೆದ ವರ್ಷ ಲಿಂಗ ಬದಲಾಯಿಸಿಕೊಂಡು ಅನನ್ಯ ಬಂಗಾರ್ ಆಗಿ ಬದಲಾಗಿದ್ದರು. ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಸೇರಿದಂತೆ ಇತರ ಕ್ರಿಕೆಟಿಗರ ಜೊತೆ ಕ್ರಿಕೆಟ್ ಆಡಿಕೊಂಡಿದ್ದ ಆರ್ಯನ್ ಬಂಗಾರ್ ಕಳೆದ ವರ್ಷ ಹುಡುಗಿಯಾಗಿ ಲಿಂಗ ಬದಲಾಯಿಸಿಕೊಂಡಿದ್ದರು. ಇದೀಗ ಲಿಂಗ ಬದಲಾಯಿಸಿಕೊಂಡು ಸುಂದರ ಹುಡುಗಿಯಾದ ಬಳಿಕ ನಡೆದ ಕೆಲ ಘಟನೆಯನ್ನು ಅನನ್ಯ ಬಂಗಾರ್ ಹೇಳಿಕೊಂಡಿದ್ದಾರೆ.
ಲಲ್ಲನ್‌ಟಾಪ್ ಸಂದರ್ಶನ ಕಾರ್ಯಕ್ರಮದಲ್ಲಿ ಅನನ್ಯ ಬಂಗಾರ್ ಲಿಂಗ ಬದಲಾವಣೆ ಬಳಿಕ ಎದುರಿಸಿದ ಕೆಲ ಘಟನೆಗಳ ಕುರಿತು ಹೇಳಿಕೊಂಡಿದ್ದಾಳೆ. ಲಿಂಗ ಬದಲಾವಣೆ ಮಾಡಿಕೊಂಡ ಬಳಿಕ ಕೆಲವ ಕ್ರಿಕೆಟಿಗರು ಬೆಂಬಲ ನೀಡಿದರು. ಆದರೆ ಮತ್ತೆ ಕೆಲ ಕ್ರಿಕೆಟಿಗು ತಮ್ಮ ಬೆತ್ತಲೆ ಫೋಟೋ ಕಳುಹಿಸಿ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಸಂದರ್ಶನಲ್ಲಿ ಅನನ್ಯಾ ಬಂಗಾರ್ ಹೇಳಿದ್ದಾರೆ.
ಇದರ ನಡುವೆ ಅಚಾನಕ್ಕಾಗಿ ನಿವೃತ್ತ ಕ್ರಿಕೆಟಿಗರೊಬ್ಬರು ಭೇಟಿಯಾಗಿದ್ದರು. ನಾನು ಕ್ರಿಕೆಟಿಗನಾಗಿದ್ದೆ, ಇದಕ್ಕಿಂತ ಹೆಚ್ಚಾಗಿ ತಂದೆ ಜನಪ್ರಿಯರಾಗಿದ್ದಾರೆ. ಕ್ರಿಕೆಟಿಗರಾಗಿ, ಕೋಚ್ ಆಗಿ ಜನಪ್ರಿಯರಾಗಿದ್ದಾರೆ. ಹೀಗಾಗಿ ಅಚಾನಕ್ಕಾಗಿ ಸಿಕ್ಕ ವ್ಯಕ್ತಿ ನನ್ನ ಜೊತೆ ಮಾತನಾಡಲು ನಿಂತುಕೊಂಡರು. ಆದರೆ ಅವರ ಮಾತುಗಳು ನನಗೆ ಶಾಕ್ ಕೊಟ್ಟಿತ್ತು. ಒಂದೆರೆಡು ಮಾತನಾಡಿ, ನೇರವಾಗಿ ನನ್ನ ಕಾರಿನಲ್ಲಿ ಹೋಗೋಣ, ನಿನ್ನ ಜೊತೆ ಮಲಗಬೇಕು ಎಂದುಬಿಟ್ಟರು.
ವಯಸ್ಸಿನಲ್ಲಿ ಹಿರಿಯರು, ಈ ವ್ಯಕ್ತಿಯಿಂದ ಈ ರೀತಿ ಮಾತುಗಳನ್ನು ನಾನು ಊಹಿಸಿರಲಿಲ್ಲ. ಸಾಮಾನ್ಯವಾಗಿ ಯುವ ಕ್ರಿಕೆಟಿಗರು ಗೇಲಿ ಮಾಡಿದ್ದಾರೆ, ಈ ರೀತಿಯ ಹಲವು ಕಮೆಂಟ್ ಪಾಸ್ ಮಾಡಿದ್ದಾರೆ. ಆದರೆ ಹಿರಿಯೊಬ್ಬರು ಮಲಗಬೇಕು ಎಂದಾಗ ನೋವಾಗಿತ್ತು. ನಾನು ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಪರಿಚಯವಿದ್ದ ಹಲವರು ಮೆಸೇಜ್ ಮೂಲಕ ಚಾಟಿಂಗ್ ನಡೆಸಿ ಅಸಭ್ಯ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಅನನ್ಯ ಪಾಂಡೆ ಹೇಳಿದ್ದಾರೆ.
ಹಲವು ಘಟನೆಗಳು ನಡೆದಿದೆ. ಲಿಂಗ ಬದಲಾವಣೆ ಬಳಿಕ ನನ್ನ ಜೊತೆ ಹಲವರು ಮಾತನಾಡುವ ಶೈಲಿ ಬದಲಾಗಿತ್ತು. ಪ್ರಮುಖವಾಗಿ ಹಲವರು ದೈಹಿಕ ಆಸೆಗಳನ್ನೇ ಹೇಳಿಕೊಳ್ಳುತ್ತಿದ್ದರು. ಸಭ್ಯತೆ ಇಲ್ಲದ ಹಲವರಿಂದ ದೂರವಿರಬೇಕಾಯಿತು ಎಂದು ಅನನ್ಯ ಬಂಗಾರ್ ಹೇಳಿದ್ದಾರೆ.
ಲಿಂಗ ಬದಲಾವಣೆ ಬಳಿಕ ಅನನ್ಯ ಪಾಂಡೆ ಇದೀಗ ಮ್ಯಾಂಚೆಸ್ಟರ್‌ನಲ್ಲಿ ನಲೆಸಿದ್ದಾರೆ. ಎಡಗೈ ಬ್ಯಾಟರ್ ಆಗಿದ್ದ ಆರ್ಯನ್ ಬಂಗಾರ್ ಲಿಂಗ ಬದಲಾಯಿಸಿಕೊಂಡ ಬಳಿಕ ಕ್ರಿಕೆಟ್‌ನಿಂದ ದೂರವಿದ್ದಾರೆ. ಟ್ರಾನ್ಸ್‌ಜೆಂಡರ್ ಮಹಿಳಾ ತಂಡದಲ್ಲಿ ಆಡುವಂತಿಲ್ಲ ಅನ್ನೋ ನಿಯಮವನ್ನು ಐಸಿಸಿ ತಂದಿದೆ.