Asianet Suvarna News Asianet Suvarna News

ರೋಡ್‌ನಲ್ಲಿ ಚಾರು-ರಾಮಾಚಾರಿ ರೊಮಾನ್ಸ್ ; ನಾವೂ ಎಳನೀರು ಮಾರೋಕೆ ಹೋಗ್ತೀವಿ ಅಂತಿದಾರೆ ಕಾಲೇಜ್ ಹುಡುಗ್ರು!

ಮತ್ತೊಂದು ಎಳನೀರು ತೆಗೆದುಕೊಂಡು ಅದೇ ರೀತಿ ಕುಡಿಯಲು ಹೇಳುವ ಚಾರುಗೆ, ರಾಮಾಚಾರಿ ತಾನು ಎಳನೀರು ಕುಡಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. 

Charu and Ramachari becomes more more romantic in ramachari serial srb
Author
First Published Dec 20, 2023, 4:40 PM IST

ಚಾರು ಮತ್ತು ರಾಮಾಚಾರಿ ಇಬ್ಬರೂ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಪ್ರಕೃತಿಯನ್ನು ಸಖತ್ ಎಂಜಾಯ್ ಮಾಡುತ್ತಿದ್ದು, ಮಾತನಾಡುತ್ತ ಎಳನೀರು ಮಾರುವ ಜಾಗಕ್ಕೆ ಬರುತ್ತಾರೆ. ತಕ್ಷಣ ಚಾರು ತಲೆಯಲ್ಲಿ ಎಳನೀರು ಕುಡಿಯುವ ಯೋಚನೆ ಬಂದು ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಾಳೆ. 
'ರಾಮಾಚಾರಿ ರಾಮಾಚಾರಿ' ಎಳನೀರು ಬೇಕು, ಕುಡ್ಯೋಣ ಬಾ ಎಂದು ಅವನನ್ನು ಎಳನೀರು ಮಾರುವವನ ಬಳಿ ಕರೆದುಕೊಂಡು ಹೋಗುತ್ತಾಳೆ. ಎರಡು ಏಳನೀರು ಅಲ್ವಾ ಎಂದು ಅಂಗಡಿಯವನು ಕೇಳಲು ಚಾರು 'ಇಲ್ಲ, ಒಂದು ಎಳನೀರು, ಎರಡು ಸ್ಟ್ರಾ' ಎನ್ನುತ್ತಾಳೆ. ರಾಮಾಚಾರಿ ಗಾಬರಿಯಾಗುತ್ತಾನೆ. 

ರಾಮಾಚಾರಿ ಒಂದೇ ಎಳನೀರನ್ನು ಎರಡು ಸ್ಟ್ರಾದಲ್ಲಿ ಹೀರಲು ಒಪ್ಪುವುದಿಲ್ಲ. ಆದರೆ, ಚಾರು ತನ್ನ ಪಟ್ಟು ಬಿಡುವುದಿಲ್ಲ. ಕೊನೆಗೆ ರಾಮಾಚಾರಿ ಒಪ್ಪಕೊಂಡು ಚಾರು ಜತೆ ಒಂದೇ ಎಳನೀರನ್ನು ಕುಡಿಯುತ್ತಾನೆ. ರಾಮಾಚಾರಿ ಯಾರಾದ್ರೂ ನೋಡಿ ಬಿಡ್ತಾರೇನೋ ಎಂಬಂತೆ ಅತ್ತಿತ್ತ ನೋಡಲು ಚಾರು ಬೇಕಂತಲೇ ಅವನ ಹಣೆಗೆ ಡಿಚ್ಚಿ ಹೊಡೆಯುತ್ತಾಳೆ. ಅದಕ್ಕೆ ರಾಮಾಚಾರಿ ಪ್ರಶ್ನೆ ಮಾಡಲು, ಚಾರು 'ನೀನು ಆ ಕಡೆ ಈ ಕಡೆ ನೋಡ್ಕೊಂಡು ಕುಡಿಬೇಡ, ಮುಂದೆ ನೋಡ್ಕೊಂಡು ಕುಡಿ' ಎಂದು ಹೇಳುತ್ತಾಳೆ. ರಾಮಾಚಾರಿಗೆ ಕಸಿವಿಸಿ ಆಗುತ್ತದೆ. ಮತ್ತೊಮ್ಮೆ ಚಾರು ಅವನ ಹಣೆಗೆ ಬೇಕಂತಲೇ ಡಿಚ್ಚಿ ಹೊಡೆಯುತ್ತಾಳೆ.

ಬಾಘ್‌ಬನ್ ಚಿತ್ರಕ್ಕೆ ರವಿ ಚೋಪ್ರಾ ಮೊದಲ ಆಯ್ಕೆ ಅಮಿತಾಭ್-ಹೇಮಾ ಮಾಲಿನಿ ಅಲ್ಲ, ಬೇರೆ ಯಾರೋ ಆಗಿತ್ತು!

ಮತ್ತೊಂದು ಎಳನೀರು ತೆಗೆದುಕೊಂಡು ಅದೇ ರೀತಿ ಕುಡಿಯಲು ಹೇಳುವ ಚಾರುಗೆ, ರಾಮಾಚಾರಿ ತಾನು ಎಳನೀರು ಕುಡಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಅವರಿಬ್ಬರ ಸಂಭಾಷಣೆ ಮತ್ತು ಪ್ರೀತಿ-ಜಗಳಗಳನ್ನು ನೋಡಿ ಎಳನೀರು ಮಾರುವವನು ಕೂಡ ನಗುತ್ತಾನೆ. ಒಟ್ಟಿನಲ್ಲಿ ಚಾರು ಸಂಪೂರ್ಣ ಬದಲಾಗಿದ್ದಾಳೆ. ಅವಳು ರಾಮಾಚಾರಿ ಮನೆಯವರ ಮೆಚ್ಚುಗೆ ಗಳಿಸಿ ಈಗ ರಾಮಾಚಾರಿಯನ್ನು ಸಂಪೂರ್ಣವಾಗಿ ತನ್ನ ಗಂಡನೆಂದು ಒಪ್ಪಿಕೊಂಡು ಆತನ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾಳೆ. ಅದರಲ್ಲಿ ಸ್ವಲ್ಪ ಸ್ವಲ್ಪವೇ ಸಕ್ಸಸ್ ಆಗುತ್ತಿದ್ದಾಳೆ. 

ವಿನಯ್-ಅವಿನಾಶ್ ಕಾಳಗ, ವಿನಯ್ ಕೈ ಬೆರಳು ಮುರಿತ; ಕಾರ್ತಿಕ್ ಆಸ್ಪತ್ರೆಗೆ ದಾಖಲು!

ಒಟ್ಟಿನಲ್ಲಿ, ರಾಮಾಚಾರಿ ಸೀರಿಯಲ್‌ನಲ್ಲಿ ಹೊಸ ಹೊಸ ಅಂಶಗಳು ಬಂದು ವೀಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ರಾಮಾಚಾರಿಯ ತದ್ರೂಪಿ ವ್ಯಕ್ತಿ ಕಿಟ್ಟಿ ಈಗ ಸೀರಿಯಲ್ ಕಥೆಯಲ್ಲಿ ಎಂಟ್ರಿ ಕೊಟ್ಟಿದ್ದು, ಹೊಸ ಹೊಸ ಟರ್ನಿಂಗ್ ಪಾಯಿಂಟ್ ಗಳು ಬರುತ್ತಿವೆ. ಈ ಕಾರಣಕ್ಕೆ ಸೀರಿಯಲ್ ವೀಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಸೀರಿಯಲ್ ರಾತ್ರಿ 9.00ಕ್ಕೆ ಪ್ರಸಾರ ಕಾಣುತ್ತಿದೆ. 

 

 

Follow Us:
Download App:
  • android
  • ios