ಏಪ್ರಿಲ್ 14ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಕೆಜಿಎಫ್-2 ಬಳಿಕ ಒಟಿಟಿಗೆ ಲಗ್ಗೆ ಇಟ್ಟಿತ್ತು. ಎರಡು ಕಡೆ ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ರಾಕಿಂಗ್ ಸ್ಟಾರ್ ಸಿನಿಮಾ ಟಿವಿಯಲ್ಲಿ ಬರಲು ಸಜ್ಜಾಗಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್-2 ಸಿನಿಮಾ ದೇಶವಿದೇಶಗಳಲ್ಲಿ ಭಾರಿ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆಬಂದ ಕನ್ನಡ ಈ ಸಿನಿಮಾಗೆ ಕನ್ನಡಿಗರು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದರು. ಕೆಜಿಎಫ್-2 ಸಿನಿಮಾವನ್ನು ಸಂಭ್ರಮಿಸಿದ್ದರು. ಏಪ್ರಿಲ್ 14ರಂದು ದೇಶ-ವಿದೇಶಗಳಲ್ಲಿ ತೆರೆಗೆ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲವು ದಾಖಲಿಸಿತ್ತು. ಭಾರತ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಕೆಜಿಎಫ್-2 ಕೂಡ ಸ್ಥಾನಗಿಟ್ಟಿಸಿಕೊಂಡಿದೆ. ಕನ್ನಡದ ಹೆಮ್ಮೆಯ ಕೆಜಿಎಫ್ -2 2018ರಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾದ ಸೀಕ್ವೆಲ್ ಆಗಿದೆ. ಅಂದಹಾಗೆ ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ 1300 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿಯಲ್ಲೇ ಬರೋಬ್ಬರಿ 435 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇಡೀ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್2 ಸಿನಿಮಾ ಇದೀಗ ಟಿವಿಯಲ್ಲಿ ಬರಲು ಸಜ್ಜಾಗಿದ್ದಾರೆ. ಏಪ್ರಿಲ್ 14ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಕೆಜಿಎಫ್-2 ಬಳಿಕ ಒಟಿಟಿಗೆ ಲಗ್ಗೆ ಇಟ್ಟಿತ್ತು. ಎರಡು ಕಡೆ ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ರಾಕಿಂಗ್ ಸ್ಟಾರ್ ಸಿನಿಮಾ ಟಿವಿಯಲ್ಲಿ ಬರ್ತಿದೆ. ಹೌದು ಕೆಜಿಎಫ್-2 ಸಿನಿಮಾದ ಸ್ಯಾಟಲೈಟ್ ರೈಟ್ಸ್ ಜೀ ವಾಹಿನಿಗೆ ಮಾರಾಟವಾಗಿತ್ತು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಈಗಾಗಲೇ ಜೀ ವಾಹಿನಿ ಪ್ರೋಮೋ ರಿಲೀಸ್ ಮಾಡಿ ಕೆಜಿಎಫ್-2 ಟಿವಿಯಲ್ಲಿ ಪ್ರಚಾರ ಆಗುವ ಬಗ್ಗೆ ಬಹಿರಂಗ ಪಡಿಸಿತ್ತು. ಆದರೆ ಯಾವಾಗ ಎಂದು ರಿವೀಲ್ ಮಾಡಿರಲಿಲ್ಲ. ಇದೀಗ ದಿನಾಂಕ ಬಹಿರಂಗವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಸೀಕ್ರೆಟ್ ರಿವೀಲ್
ಕಿರುತೆರೆ ಪ್ರೇಕ್ಷಕರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಆ ದಿನ ಸಮೀಪಿಸುತ್ತಿದೆ. ಹೌದು, ಇದೇ ತಿಂಗಳು ಆಗಸ್ಟ್ 20ರಂದು ಪ್ರಸಾರವಾಗುತ್ತಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿಯೇ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಅಂದಹಾಗೆ ಬಹುತೇಕ ಮಂದಿ ಗೌರಿ-ಗಣೇಶ ಹಬ್ಬಕ್ಕೆ ಪ್ರಸಾರ ಆಗಲಿದೆ ಅಂತ ಅಂದುಕೊಂಡಿದ್ದರು. ಆದರೀಗ ಹಬ್ಬಕ್ಕೂ ಮೊದಲೇ ಪ್ರಸಾರವಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಜೀ ವಾಹಿನಿ ಬಿಡುಗಡೆ ದಿನಾಂಕ ಬಹಿರಂಗ ಪಡಿಸಿ, ' ಇವನು ಯುದ್ಧ ತಪ್ಪಿಸ್ತಾನೆ.. ಆಗಲಿಲ್ಲ ಅಂದ್ರೆ ಅದನ್ನ ಗೆದ್ದೇ ಗೆಲ್ತಾನೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ World Television Premiere. ಕೆಜಿಎಫ್ ಚಾಪ್ಟರ್-2, ಶನಿವಾರ ಸಂಜೆ 7ಕ್ಕೆ' ಎಂದು ಬಹಿರಂಗ ಪಡಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಬೇಜವಾಬ್ದಾರಿ ವ್ಯಕ್ತಿ ಆಗಿದ್ದೆ, ಸ್ಟಂಟ್ ಮಾಡ್ಕೊಂಡಿದ್ದೆ: ಯಶ್
ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಕೆಜಿಎಫ್ -2 ನೋಡಲು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಟುಂಬ ಸಮೇತರಾಗಿ ರಾಕಿಂಗ್ ಸ್ಟಾರ್ ಸಿನಿಮಾ ನೋಡಬಹುದು. ರಾಕಿಂಗ್ ಸ್ಟಾರ್ ಯಶ್ ನಟನೆ, ಸಂಜಯ್ ದತ್ ಪಾತ್ರ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ಮತ್ತೊಮ್ಮೆ ಮನೆಯಲ್ಲೇ ಕುಳಿತು ಆಗಸ್ಟ್ 20ರಂದು ಕುಟುಂಬ ಸಮೇತ ಕೆಜಿಎಫ್-2 ಆನಂದಿಸಬಹುದು.
