Agnisakshi Kannada Serial Romantic Song: ವಿಶ್ವ ಸಂಗೀತ ದಿನದ (World Music Day) ವಿಶೇಷ ಸಂದರ್ಭದಲ್ಲಿ, ಕರ್ನಾಟಕದ ಹೆಮ್ಮೆಯ ಮತ್ತು ಅತ್ಯಂತ ಜನಪ್ರಿಯ ಮನರಂಜನಾ ವಾಹಿನಿ ‘ಕಲರ್ಸ್ ಕನ್ನಡ’ ತನ್ನ ಯಶಸ್ವಿ ಹೊಸ ಫಿಕ್ಷನ್ ಶೋ ‘ಅಗ್ನಿಸಾಕ್ಷಿ’ಯ ಆಕರ್ಷಕ ರೋಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಪ್ರಸಾರ ಆರಂಭವಾಗಿ ಕೇವಲ 13 ದಿನಗಳಲ್ಲೇ ರಾಜ್ಯಾದ್ಯಂತ ಪ್ರೇಕ್ಷಕರ ಮನಗೆದ್ದಿರುವ ‘ಅಗ್ನಿಸಾಕ್ಷಿ’ ಸೀರಿಯಲ್, ಸದ್ಯ ಸಂಜೆ 7 ಗಂಟೆಯ ಪ್ರೈಮ್-ಟೈಮ್ ಸ್ಲಾಟ್‌ನಲ್ಲಿ ಭರ್ಜರಿ ಪ್ರಶಂಸೆ ಗಳಿಸುತ್ತಿದೆ. ಅಗ್ನಿ ಮತ್ತು ಸಾಕ್ಷಿ ಎಂಬ ಇಬ್ಬರು ಸಮಾನ ಮನಸ್ಕರ, ಹಠಮಾರಿಗಳ ನಡುವಿನ ರೋಚಕ ಪ್ರೇಮಕಾವ್ಯವಾಗಿದೆ. ಕೆಂಡ ಮತ್ತು ಬಿರುಗಾಳಿಯಂತಿರುವ ಇವರಿಬ್ಬರ ಮುಖಾಮುಖಿ ಮುಂದೆ ಹೇಗೆ ಸುಂದರ ಪ್ರೇಮದ ಮಳೆಯಾಗಲಿದೆ ಎಂಬುದನ್ನು ಈ ಹೊಸ ಹಾಡು ( agnisakshi kannada serial romantic song ) ಅದ್ಭುತವಾಗಿ ಧ್ವನಿಸುತ್ತದೆ.
"ಮಾಯದ ಗಾಯವ ಮಾಡಿರೋ ಒಲವೇ..." ಎಂದು ಆರಂಭವಾಗುವ ಈ ಸುಮಧುರ ಗೀತೆಯನ್ನು ಕನ್ನಡಿಗರಿಗೆ ಉಣಬಡಿಸಲು ಕಲರ್ಸ್ ಕನ್ನಡ ವಾಹಿನಿಯು ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಪ್ರತಿಭೆಗಳನ್ನು ಜೊತೆಗೂಡಿಸಿದೆ.
ಈ ಹಾಡಿನ ಹಿಂದೆ ಇರೋದು ಯಾರು?
ಖ್ಯಾತ ನಿರ್ದೇಶಕ ಸುನಾದ್ ಗೌತಮ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಸಾಹಿತ್ಯ-ಕಲರ್ಸ್ ಕನ್ನಡದ ಐಕಾನಿಕ್ ಮತ್ತು ಹೆಮ್ಮೆಯ ಧಾರಾವಾಹಿ ‘ಕನ್ನಡತಿ’ಯ ಕಥೆ-ಸಂಭಾಷಣೆ ಬರೆದಿದ್ದರು.
ಬರಹಗಾರ ವಿಕಾಸ್ ನೆಗಿಲೋನಿ ಅವರು ಈ ಹಾಡಿಗೆ ಅದ್ಭುತ ಸಾಹಿತ್ಯ ಬರೆದಿದ್ದಾರೆ.
ಪ್ರಸಿದ್ಧ ಸಂಗೀತ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿ, ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿರುವ ರಜತ್ ಹೆಗಡೆ ಈ ಹಾಡನ್ನು ಹಾಡಿದ್ದಾರೆ.
ಭಾವನೆಗಳ ತೀವ್ರತೆ ಮತ್ತು ಕಥೆಯ ಆಳವನ್ನು ಹಿಡಿದಿಡುವ ಈ ಶೀರ್ಷಿಕೆ ಗೀತೆ, ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಭಾರಿ ವೈರಲ್ ಆಗಿದೆ.
ಹ್ಯಾರಿಸ್ ನಿರ್ಮಾಣದ, ಪ್ರಶಾಂತ್ ಡಿ.ಪಿ ನಿರ್ದೇಶನದ ಈ ಮೆಗಾ ಫಿಕ್ಷನ್ ಶೋನಲ್ಲಿ ಶಮಂತ್ 'ಬ್ರೋ' ಗೌಡ (ಅಗ್ನಿ) ಹಾಗೂ ಪ್ರತಿಭಾವಂತ ನಟಿ ವರ್ಷಿಣಿ ಗೌಡ (ಸಾಕ್ಷಿ) ಮುಖ್ಯ ಭೂಮಿಕೆಯಲ್ಲಿದ್ದಾರೆ.
ಪ್ರತಿ ದಿನ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಅಗ್ನಿಸಾಕ್ಷಿ’ ಪ್ರಸಾರವಾಗಲಿದ್ದು, ಪ್ರೇಕ್ಷಕರು ಈ ರೋಮಾಂಚಕ ಕಥೆಯನ್ನು ವೀಕ್ಷಿಸಬಹುದಾಗಿದೆ.


