'ಮುದ್ದುಲಕ್ಷ್ಮೀ' ಧಾರಾವಾಹಿ ನಟ ಚರಿತ್‌ ಬಾಳಪ್ಪ ವಿರುದ್ಧ ಇನ್ನೊಂದು ದೂರು ದಾಖಲಾಗಿದೆ. ಕೆಲ ತಿಂಗಳುಗಳ ಹಿಂದೆ ಕೂಡ ಲೈಂಗಿಕ ದೌರ್ಜನ್ಯದ ವಿಚಾರಕ್ಕೆ ದೂರು ದಾಖಲಾಗಿತ್ತು.

ಬೆಂಗಳೂರು: ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಮತ್ತೊಂದು ಲೈಗಿಂಕ ಕಿರುಕುಳ ಕೇಸ್ ದಾಖಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ʼಮುದ್ದುಲಕ್ಷ್ಮೀʼ ಧಾರಾವಾಹಿಯಲ್ಲಿ ಧ್ರುವಂತ್‌ ಪಾತ್ರದಲ್ಲಿ ಇವರು ನಟಿಸುತ್ತಿದ್ದರು. 

ಏನಿದು ಘಟನೆ? 
ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಲ್ಲದೆ ಲೈಗಿಂಕ‌ ಕಿರುಕುಳ‌ ನೀಡಿದ್ದಾಗಿ ದೂರು‌ ನೀಡಲಾಗಿದೆ. ಸಿನಿಮಾ‌ ಶೂಟಿಂಗ್ ನೋಡಲು ಬಂದಿದ್ದ ಮಹಿಳೆ ಜೊತೆ ಪ್ರೀತಿಯ ನಾಟಕ ಮಾಡಿದ್ದರು. ಆ ಮಹಿಳೆಗೆ ಕೈಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿದ್ದರು. ಮದುವೆ ನಂತರ ಲೈಗಿಂಕ ಕ್ರಿಯೆಗೆ ಒತ್ತಾಯ ಮಾಡಿದ್ದರು. ಹೆಂಡತಿಯಿಂದ ಡಿವೋರ್ಸ್ ಪಡೆದು ಮತ್ತೆ ಪ್ರೀತಿಸುವಂತೆ‌‌ ಒತ್ತಾಯ‌ ಮಾಡಿದ್ದರು. ಇದಕ್ಕೆ ಆ ಮಹಿಳೆ ಒಪ್ಪದಿದ್ದಾಗ ಅವರ ಖಾಸಗಿ‌ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲೆ ಮಾಡಿದ್ದರು. ಬ್ಲ್ಯಾಕ್‌ಮೇಲೆ ಮಾಡಿ‌ ಹಣ ಸುಲಿಗೆ ಮಾಡಿದಲ್ಲದೇ ಲೈಗಿಂಕ ಕಿರುಕುಳ ಅಂತ ದೂರು ನೀಡಲಾಗಿದೆ. ದೂರು ದಾಖಲಾಗ್ತಿದ್ದಂತೆ ಚರಿತ್ ಬಾಳಪ್ಪ ಅವರು ನಾಪತ್ತೆಯಾಗಿದ್ದಾರೆ. 

'ಮುದ್ದುಲಕ್ಷ್ಮೀ' ಧಾರಾವಾಹಿಯಿಂದ ಹೊರನಡೆದ ನಟ ಚರಿತ್ ಬಾಳಪ್ಪ: ಕಾರಣ?

ಲವಲವಿಕೆ ಸೀರಿಯಲ್ ಶೂಟಿಂಗ್ ನೋಡಲು ಹೋಗಿದ್ದಾಗ ಚರಿತ್ ಪರಿಚಯ ಆಗಿತ್ತು. ಇದು ಅವರ ಮೊದಲ ಧಾರಾವಾಹಿ ಆಗಿತ್ತು. ಏರ್‌ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಚರಿತ್‌ ಅವರು ಆ ವೃತ್ತಿಗೆ ಗುಡ್‌ಬೈ ಹೇಳಿ ನಟನೆ ಮಾಡಲು ಮುಂದಾಗಿದ್ದರು. ಆಗಲೇ ಅವರ ಹಾಗೂ ಆ ಮಹಿಳೆ ಮಧ್ಯೆ ಪ್ರೀತಿ ಶುರುವಾಗಿತ್ತು. ಆದರೆ ಅವರು ಇನ್ನೋರ್ವ ಹುಡುಗಿಯನ್ನು ಮದುವೆಯಾಗಿದ್ದಾರೆ. ಆಮೇಲೆ ಆ ಮಹಿಳೆ ಸುಮ್ಮನಾಗಿದ್ದಾರೆ. ಮದುವೆಯಾಗಿದ್ದರೂ ಕೂಡ ದೈಹಿಕ ಸಂಪರ್ಕ ಮಾಡುವಂತೆ ಸಂತ್ರಸ್ತೆಗೆ ಬಲವಂತ ಮಾಡಲಾಗಿದೆ ಎಂದು ದೂರಿನಲ್ಲಿದೆ. ಇದಕ್ಕೆ ನಿರಾಕರಿಸಿದಾಗ ಆ ಸಂತ್ರಸ್ತೆ ಮನೆ ಹಾಗೂ ಕೆಲಸ ಮಾಡುವ ಸ್ಥಳದ ಬಳಿ ಬಂದು ಗಲಾಟೆ ಮಾಡಿದ್ದಾರೆ. 07/09/2020 ರಂದು ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಆ ಮಹಿಳೆ ದೂರು ನೀಡಿದ್ದರು.ಆಗ ಚರಿತ್‌ ಅವರು ಠಾಣೆಗೆ ಬಂದು ಸಂತ್ರಸ್ತೆ ತಂಟೆಗೆ ಹೋಗಲ್ಲ ಅಂತ ಅಪಾಲಜಿ ಲೆಟರ್ ಬರೆದುಕೊಟ್ಟಿದ್ದರು. ಆ ಬಳಿಕ ಎರಡು ವರ್ಷ ಚರಿತ್‌ ಅವರು ಸಂತ್ರಸ್ತ ಮಹಿಳೆ ತಂಟೆಗೆ ಹೋಗಿರಲಿಲ್ಲ ಎನ್ನಲಾಗಿದೆ. 

ಕಿರುತೆರೆ ನಟಿ ದಿವ್ಯಾ ಶ್ರೀಧರ್ ಕರಾಳ ದಿನಗಳು: ಹೆತ್ತ ಮಗಳನ್ನೂ ನೋಡಲಾಗದ ನೋವು ನೆನೆದು ಕಣ್ಣೀರು!

ಹಣಕ್ಕೆ ಡಿಮ್ಯಾಂಡ್!‌ 
ಆದರೆ 2022ರಲ್ಲಿ ಚರಿತ್ ಬಾಳಪ್ಪ ಅವರು ಡಿವೋರ್ಸ್‌ ಪಡೆದಿದ್ದಾರೆ. ಆಮೇಲೆ ಸಂತ್ರಸ್ತೆಯನ್ನು ಭೇಟಿ ಮಾಡಿ ಪುನಃ ಪ್ರೀತಿಸುವಂತೆ, ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಬಲವಂತ ಮಾಡಿದ್ದಾರಂತೆ. ಸಂತ್ರಸ್ತೆ ಒಪ್ಪದೆ ಇದ್ದಿದ್ದಕ್ಕೆ ಅವರ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡುವುದಾಗಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಮರ್ಯಾದೆಗೆ ಹೆದರಿ ಆ ಮಹಿಳೆ ಚರಿತ್‌ ಕೇಳಿದಾಗಲೆಲ್ಲಾ ಹಣ ನೀಡಿದ್ದರು. ಆಕೆ ಬಳಿಯಿದ್ದ ಬೆಲೆ ಬಾಳುವ 4 ರಿಂದ 5 ಕೆಜಿಯಷ್ಟು ಬೆಳ್ಳಿಯ ವಸ್ತು ನೀಡಿದ್ದಾರೆ. 23 ಬೆಲೆಬಾಳುವ ಕಂಚಿ ರೇಷ್ಮೆ ಸೀರೆ ಬಲವಂತವಾಗಿ ತೆಗೆದುಕೊಂಡು ಹೋಗಿದ್ದರು. ಪದೇ ಪದೇ ಈ ರೀತಿ ಆಗಿದ್ದಕ್ಕೆ ಮೊದಲು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗ್ತಿದ್ದಂತೆ ಚರಿತ್ ನಾಪತ್ತೆಯಾಗಿದ್ದಾರೆ. ಕೃತ್ಯ ನಡೆದ ಸ್ಥಳ ಅನ್ನಪೂರ್ಣೆಶ್ವರಿ ನಗರ ಠಾಣೆ ವ್ಯಾಪ್ತಿಗೆ ಬರುವ ಕಾರಣ ಕೇಸ್ ವರ್ಗಾವಣೆಯಾಗಿದೆ. 

ಅನ್ನಪೂರ್ಣೆಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚರಿತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಟ ಚರಿತ್ ಬಾಳಪ್ಪ ವಿರುದ್ಧ ಅವರ ಪತ್ನಿ ದೂರು ನೀಡಿದ್ದರು. ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆಂದು ಮಂಜುಶ್ರೀ ಅವರು ದೂರು ನೀಡಿದ್ದರು.ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ NCR ದಾಖಲಾಗಿತ್ತು. 

ಕಿರುತೆರೆ ನಟಿ ಮಾನ್ಸಿ ಜೋಶಿ ಅರಿಶಿಣ ಶಾಸ್ತ್ರದಲ್ಲಿ ಬಿಗ್ ಬಾಸ್ ಮೋಕ್ಷಿತಾ; ಜನರಿಗೆ ಫುಲ್ ಕನ್ಫ್ಯೂಷನ್...

ಕೆಲ ತಿಂಗಳುಗಳ ಹಿಂದೆ ಇನ್ನೊಂದು ದೂರು! 
ಈ‌ ಹಿಂದೆ ಕಿರುತರೆ ನಟಿ‌‌ ಮೇಲೆ ಲೈಗಿಂಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿ‌ ಬಿಡುಗಡೆಯಾಗಿದ್ದರು. ಕಿರುತೆರೆ ನಟಿ ಚರಿತ್‌ ವಿರುದ್ಧ ಆರ್‌ ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈಗ ಮತ್ತೆ ಸೀರಿಯಲ್ ಶೂಟಿಂಗ್‌‌ ನೋಡಲು ಬಂದ ಮಹಿಳೆಗೆ ಲೈಗಿಂಕ ಕಿರುಕುಳ ಕೊಟ್ಟಿದ್ದಾರೆ ಎಂದು ದೂರು‌ ಸಲ್ಲಿಕೆಯಾಗಿದೆ. 

ಚರಿತ್‌ ಬಾಳಪ್ಪ ಅವರು ʼಲವಲವಿಕೆʼ, ʼಮುದ್ದುಲಕ್ಷ್ಮೀʼ ಧಾರಾವಾಹಿಯಲ್ಲಿ ನಟಿಸಿದ್ದರು. ʼಮುದ್ದುಲಕ್ಷ್ಮೀʼ ಧಾರಾವಾಹಿಯು ಅನೇಕ ವರ್ಷಗಳ ಕಾಲ ಪ್ರಸಾರ ಆಗಿತ್ತು.