ಮುದ್ದುಲಕ್ಷ್ಮೀ ಧಾರಾವಾಹಿ ಇತ್ತೀಚೆಗೆ 1000 ಎಪಿಸೋಡ್‌ಗಳನ್ನು ಪೂರೈಸಿದ ಖುಷಿಯನ್ನು ಆಚರಿಸಿತ್ತು. ಈಗ ಇದೇ ತಂಡದಿಂದ ಬೇಸರದ ಸಂಗತಿಯೊಂದು ಹೊರಬಿದ್ದಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯಿಂದ ನಟ ಚರಿತ್ ಬಾಳಪ್ಪ ಹೊರಬಿದ್ದಿದ್ದಾರೆ.

ಹೌದು.... ನಾಯಕ ನಟ ಧ್ರುವಂತ್ ಪಾತ್ರ ಮಾಡಿದ್ದ ಚರಿತ್ ಬಾಳಪ್ಪ ಕೋವಿಡ್​ ಕಾರಣ ನೀಡಿ ಮುದ್ದುಲಕ್ಷ್ಮಿ ಧಾರವಾಹಿಯಿಂದ ಹೊರನಡೆದಿದ್ದಾರೆ.

'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಅಂತ್ಯ; ಭಾವುಕ ಪತ್ರ ಬರೆದ ಮಾನ್ಸಿ

ಈ ಕುರಿತು ಚರಿತ್ ಬಾಳಪ್ಪ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದು,ಕೊರೋನಾ ವೈರಸ್‌ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ನಿಯಮಗಳನ್ನು ಎದುರಿಸಬೇಕು. ಈ ಕಾರಣದಿಂದ ನಾನು ಮುದ್ದುಲಕ್ಷ್ಮೀ ಧಾರಾವಾಹಿಯಿಂದ ಹೊರಗಡೆ ಬಂದಿದ್ದೇನೆ ಎಂದು ನನ್ನ ಹಿತೈಷಿಗಳಿಗೆ ತಿಳಿಸಲು ದುಃಖವಾಗುತ್ತದೆ. ಬೇಗ ಜಗತ್ತು ಸಹಜಸ್ಥಿತಿಗೆ ಬರುವಂತಾಗಲಿ. ಇಷ್ಟುದಿನ ನನ್ನ ಕಠಿಣ ಶ್ರಮಕ್ಕೆ ಬೆಂಬಲವಾಗಿ ನಿಂತು ಹರಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಆದ್ರೆ, ಬಲ್ಲ ಮೂಲಗಳ ಪ್ರಕಾರ ಪಾರ್ಟಿವೊಂದರಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚರಿತ್ ಬಾಳಪ್ಪ ಅವರನ್ನು ಮುದ್ದುಲಕ್ಷ್ಮಿ ಧಾರಾವಾಹಿ ಹೊರಹಾಕಿದ್ದಾರೆ ಎನ್ನಲಾಗಿದೆ.