ಕಿರುತೆರೆ ನಟಿ ದಿವ್ಯಾ ಶ್ರೀಧರ್ ಕರಾಳ ದಿನಗಳು: ಹೆತ್ತ ಮಗಳನ್ನೂ ನೋಡಲಾಗದ ನೋವು ನೆನೆದು ಕಣ್ಣೀರು!

ಕಿರುತೆರೆ ನಟಿ ದಿವ್ಯಾ ಶ್ರೀಧರ್ ತಮ್ಮ ಮೊದಲ ಮದುವೆಯ ನಂತರ ಮಗಳಿಂದ ದೂರ ಇರಬೇಕಾದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಎರಡು ವರ್ಷಗಳ ಕಾಲ ಮಗಳನ್ನು ಅಡಗಿಕೊಂಡು ಭೇಟಿಯಾಗುತ್ತಿದ್ದ ಕರಾಳ ದಿನಗಳನ್ನು ಕೈರಳಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Serial actress Divya Sridhar shares the pain of secretly watching her children sat

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾದ ಸೆಲೆಬ್ರಿಟಿಗಳ ವಿವಾಹವೆಂದರೆ ಕಿರುತೆರೆ ತಾರೆಗಳಾದ ದಿವ್ಯಾ ಶ್ರೀಧರ್ ಮತ್ತು ಕ್ರಿಸ್ ವೇಣುಗೋಪಾಲ್ ಅವರದ್ದು. ಇದರಲ್ಲಿ ನಟಿ ದಿವ್ಯಾ ಅವರದ್ದು ಎರಡನೇ ಮದುವೆಯಾಗಿದೆ. ಆದರೆ, ವಿವಾಹದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರೂ ಅಪಹಾಸ್ಯ ಮತ್ತು ಟೀಕೆಗಳನ್ನು ಎದುರಿಸಬೇಕಾಯಿತು. ಈ ಟೀಕೆಗಳನ್ನು ಲೆಕ್ಕಿಸದೆ ಮುಂದೆ ಸಾಗುವುದಾಗಿ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ತಮ್ಮ ಮೊದಲ ವಿವಾಹದ ಬಗ್ಗೆ ದಿವ್ಯಾ ಹಲವು ಸಂದರ್ಶನಗಳಲ್ಲಿ ಮುಕ್ತವಾಗಿ ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಿದ್ದಾರೆ. ಈಗ ಮಗಳಿಂದ ದೂರವಿರಬೇಕಾದ ಸಂದರ್ಭದ ಬಗ್ಗೆ ದಿವ್ಯಾ ಶ್ರೀಧರ್ ಮಾತನಾಡಿದ್ದಾರೆ. ಕೈರಳಿ ಚಾನೆಲ್ ನೀಡಿದ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

'ಮಗಳು 6ನೇ ತರಗತಿಯಲ್ಲಿ ಓದುತ್ತಿರುವಾಗ ನನ್ನ ಮೊದಲ ಗಂಡನೊಂದಿಗಿನ  ಜೀವನವನ್ನು ಬಿಟ್ಟು ಹೊರಬಂದೆ. ತಿರುಗಿ ಹೋಗಬೇಕೆಂದೇ ಅಲ್ಲಿಗೆ ವಾಪಸ್ ಹೊರಟಿದ್ದೆ. ಆದರೆ, ಎಲ್ಲಿಗೂ ಹೋಗಲು ಸಾಧ್ಯವಾಗದ ಕಾರಣ ವಾಪಸ್ ಹೋಗಲು ಆಗಲಿಲ್ಲ. ಸುಮಾರು 2 ವರ್ಷಗಳ ಕಾಲ ಮಗಳಿಂದ ನಾನು ದೂರವಿರಬೇಕಾಯಿತು. ಮೊದಲಿಗೆ ಮಗಳ ಜೊತೆ ಸಂಪರ್ಕಕ್ಕೆ ಸಿಗಲಿಲ್ಲ. ಹೇಗೋ ಒಂದು ದಿನ ಮಗಳ ಜೊತೆ ಫೋನಿನಲ್ಲಿ ಮಾತನಾಡುವ ಅವಕಾಶ ಸಿಕ್ಕಿತು. ನಂತರ ಪ್ರತಿದಿನ ಕರೆ ಮಾಡಲು ಶುರುಮಾಡಿದೆ' ಎಂದು ದಿವ್ಯಾ ಹೇಳಿದರು.

ಇದನ್ನೂ ಓದಿ: ಶಂಕರ್ ಅಶ್ವಥ್ 'ಕಣ್ಣೀರ ಕಥೆ'ಗೆ ಹೀಗೆ ಕಾಮೆಂಟ್ ಹಾಕೋದಾ? ಅಂಗೈ ತೋರ್ಸಿ ಅವಲಕ್ಷಣ ಕೇಳ್ಬೇಕಿತ್ತಾ?

ನನ್ನ ಮಗಳು ಪಯ್ಯನ್ನೂರಿನಲ್ಲಿ ಓದುತ್ತಿದ್ದ ಶಾಲೆಗೆ ಹೋಗಿ ಅಲ್ಲಿ ಅವಳನ್ನು ನಾನು ನೋಡುತ್ತಿದ್ದೆ. ಆ ಸಮಯದಲ್ಲಿ ನನ್ನ ಜೊತೆ ಮಗ ಮಾತ್ರ ಇರುತ್ತಿದ್ದನು. ಅವನಿಗೆ ಸುಮಾರು 2 ವರ್ಷ ಮಾತ್ರ. ನಾನು ಹೊರಟು ಹೋದ ಕಾರಣ ಎಲ್ಲರೂ ನನ್ನ ಬಗ್ಗೆ ಏನೇನೋ ಹೇಳಿದ್ದರಿಂದ ಮಗಳನ್ನು ಅಡಗಿಕೊಂಡು ನೋಡಬೇಕಾದ ಪರಿಸ್ಥಿತಿ ಬಂತು. ಚಾಕಲೇಟ್ ಕೊಟ್ಟಾಗ ಮಗಳು ಯಾರೂ ನೋಡದಂತೆ ಟೆರೇಸ್ ಮೇಲೆ ಹೋಗಿ ತಿನ್ನುತ್ತಿದ್ದಳು. ಅವಳೂ ಕೂಡ ನನ್ನನ್ನು ಭೇಟಿ ಮಾಡುವುದನ್ನು ತುಂಬಾ ಗುಟ್ಟಾಗಿ ಕಾಪಾಡುತ್ತಿದ್ದಳು. ನಾನು ಹೆತ್ತ ಮಗಳನ್ನು ನೋಡುವುದು ರಹಸ್ಯವಾಗಿಟ್ಟರೆ, ಅವಳು ಜನ್ಮ ನೀಡಿದ ತಾಯಿಯನ್ನು ನೋಡಿದ್ದನ್ನು ರಹಸ್ಯವಾಗಿ ಉಳಿಸಿಕೊಳ್ಳುವ ಅನಿವಾರ್ಯತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

ಯಾವಾಗ ನನ್ನ ಬಳಿ ಬರಬೇಕೆಂದು ಅನಿಸುತ್ತದೆಯೋ ಆಗ ಕರೆ ಮಾಡು, ನಾನು ಒತ್ತಾಯಿಸುವುದಿಲ್ಲ ಎಂದು ಮಗಳಿಗೆ ಹೇಳಿದ್ದೆ. ಒಂದು ದಿನ ರಾತ್ರಿ ಮಗಳು ನನಗೆ ಕರೆ ಮಾಡಿ, ಅಮ್ಮ ನನ್ನನ್ನು ಕರೆದುಕೊಂಡು ಹೋಗು ಎಂದಳು. ಪರಿಯಾರಂ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಿಸಿಕೊಂಡು ಮಗಳನ್ನು ಕರೆದುಕೊಂಡು ಬಂದೆ. ಈಗ ನನ್ನ ಜೊತೆಗಿದ್ದಾಳೆ. ಅವಳಿಗೀಗ 18 ವರ್ಷ ತುಂಬಿದೆ. ಮಗಳನ್ನು ಅಡಗಿಕೊಂಡು ನೋಡಬೇಕಾದ ಪರಿಸ್ಥಿತಿ ಅನುಭವಿಸಿದವರಿಗೆ ಮಾತ್ರ ನಾನು ಅನುಭವಿಸಿದ ಕಷ್ಟ ಅರ್ಥವಾಗುತ್ತದೆ' ಎಂದು ನಟಿ ದಿವ್ಯಾ ಹೇಳಿದರು.

ಇದನ್ನೂ ಓದಿ: ಅಮೃತಧಾರೆ ಭೂಮಿಕಾಗೆ ಠಕ್ಕರ್​ ಕೊಟ್ಟ ನಿವೇದಿತಾ ಅಮ್ಮ! ನೀವೇ ಹೀಗಾದ್ರೆ ಮಗಳ ಗತಿಯೇನು ಕೇಳ್ತಿರೋ ನೆಟ್ಟಿಗರು

Latest Videos
Follow Us:
Download App:
  • android
  • ios